ಹುಬ್ಬಳ್ಳಿ(ಮಾ.07): ಶಾ​ಸ​ಕರಾದವರು ಸದನದ ಒಳಗೆ, ಹೊರಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಸ​ದ​ನದ ಗೌ​ರವ ಹೆ​ಚ್ಚಿ​ಸುವ ರೀ​ತಿ​ಯಲ್ಲಿ ವ​ರ್ತಿ​ಸ​ಬೇಕು. ಭ​ದ್ರಾ​ವತಿ ಕ್ಷೇ​ತ್ರದ ಶಾ​ಸಕ ಬಿ.ಕೆ. ಸಂಗಮೇಶ್‌ ಶರ್ಟ್‌ ಬಿ​ಚ್ಚಿದ ಪ್ರ​ಕ​ರಣದಿಂದ ವೈ​ಯ​ಕ್ತಿ​ಕ​ವಾಗಿ ನನಗೆ ಬ​ಹಳ ನೋ​ವಾ​ಗಿದೆ ಎಂದು ವಿ​ಧಾನಪ​ರಿ​ಷತ್‌ ಸ​ಭಾ​ಪತಿ ಬ​ಸ​ವರಾಜ ಹೊ​ರಟ್ಟಿ ಬೇ​ಸರ ವ್ಯ​ಕ್ತ​ಪ​ಡಿ​ಸಿ​ದ್ದಾರೆ. 

ಶ​ನಿ​ವಾರ ಸು​ದ್ದಿ​ಗಾ​ರ​ರೊಂದಿಗೆ ಮಾ​ತ​ನಾ​ಡಿ, ಜ​ನ​ಪ್ರ​ತಿ​ನಿಧಿ​ಗಳು ಕೆ​ಲ ವಿ​ಚಾರ​ಗ​ಳಲ್ಲಿ ಸ​ಮಾ​ಧಾ​ನ​ದಿಂದ ವ​ರ್ತಿ​ಸ​ಬೇಕು. ಸ​ಭಾ​ಪತಿ ಅ​ಥ​ವಾ ಸ್ಪೀ​ಕ​ರ್‌ಗೆ ಹೋಗಿ ಮ​ನವಿ ಮಾ​ಡ​ಬೇಕು. ಅದನ್ನು ಬಿಟ್ಟು ಮೈ​ಮೇ​ಲಿನ ಬಟ್ಟೆಬಿ​ಚ್ಚು​ವುದು, ಅ​ಸ​ಹ್ಯ​ಕರ ರೀ​ತಿ​ಯಲ್ಲಿ ವ​ರ್ತಿ​ಸು​ವುದು ಸರಿಯಲ್ಲ ಎಂದರು.

ಸದನದಲ್ಲಿ ಶರ್ಟ್ ಬಿಚ್ಚಿದ ಶಾಸಕ ಸಂಗಮೇಶ್, ಸ್ಪೀಕರ್ ಗರಂ

ಸಾರ್ವಜನಿಕ ಜೀವನದಲ್ಲಿರುವ ಜ​ನ​ಪ್ರ​ತಿ​ನಿಧಿ​ಗ​ಳು ಬಹಳ ಎ​ಚ್ಚ​ರಿ​ಕೆ​ಯಿಂದ ಇ​ರ​ಬೇಕು. ಪ​ರಿ​ಷತ್‌ ಕ​ಲಾ​ಪ​ದ ವೇಳೆ ಮಾ​ಧ್ಯಮವನ್ನು ನಿಷೇ​ಧಿ​ಸು​ವಂತೆ ಅನೇಕರು ಹೇಳಿದ್ದಾರೆ. ಆ​ದರೆ, ನಾನು ಮಾಧ್ಯಮವನ್ನು ಬ್ಯಾನ್‌ ಮಾ​ಡಿಲ್ಲ. ಮಾ​ಧ್ಯ​ಮ​ದ​ವರು ಎಷ್ಟು ಜನ ಇ​ರು​ತ್ತಾರೋ ಅಷ್ಟು ನ​ಮಗೆ ಒ​ಳ್ಳೆ​ಯದು ಎಂದರು.