* ಅಧಿವೇಶನ ಬೆಳಗಾವಿಯಲ್ಲಿ ಮಾಡಿದರೆ ಸೂಕ್ತ * ಬೆಳಗಾವಿಯಲ್ಲಿ 2 ವರ್ಷದಿಂದ ಅಧಿವೇಶನ ನಡೆದಿಲ್ಲ* ವಿಧಾನಸಭೆ ಸ್ಪೀಕರ್‌ ಹಾಗೂ ನಾನೂ ಒಮ್ಮತ ಸೂಚಿಸಿದ್ದೇನೆ: ಹೊರಟ್ಟಿ

ಹುಬ್ಬಳ್ಳಿ(ಜೂ.30): ಮುಂಬರುವ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಅಧಿವೇಶನವನ್ನು ಜೂನ್‌ನಲ್ಲಿ ಮಾಡಲಾಗುತ್ತದೆ. ಆದರೆ, ಈ ವರ್ಷ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಜುಲೈನಲ್ಲಿ ಅಧಿವೇಶನ ನಡೆಯಬಹುದು. ಈ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡಿದರೆ ಸೂಕ್ತ ಎಂದರು.

ಬೆಳಗಾವಿ ಅಧಿವೇಶನ ವೇಳೆ ಶಾಸಕರು ಗೋವಾಕ್ಕೆ ಹೋಗಬೇಡಿ : ಎಚ್ಚರಿಕೆ !

ಬೆಳಗಾವಿಯಲ್ಲಿ 2 ವರ್ಷದಿಂದ ಅಧಿವೇಶನ ನಡೆದಿಲ್ಲ. ವಿಪ ಸದಸ್ಯ ಮಹಾಂತೇಶ ಕವಟಗಿಮಠ ಕೂಡ ಈ ಬಗ್ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಧಾನಸಭೆ ಸ್ಪೀಕರ್‌ ಹಾಗೂ ನಾನೂ ಒಮ್ಮತ ಸೂಚಿಸಿದ್ದೇನೆ. ಸರ್ಕಾರ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಈ ಬಗ್ಗೆ ಇನ್ನೊಮ್ಮೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.