ಬೆಳಗಾವಿ ಅಧಿವೇಶನ ವೇಳೆ ಶಾಸಕರು ಗೋವಾಕ್ಕೆ ಹೋಗಬೇಡಿ : ಎಚ್ಚರಿಕೆ !
ರಾಜಕಾರಣಿಗಳಿಗೆ ಸಿಡಿ ಎಚ್ಚರಿಕೆ ನೀಡಿದ್ದ ರಾಜಶೇಖರ್ ಮುಲಾಲಿ ಇದೀಗ ಮತ್ತೊಂದು ಎಚ್ಚರಿಕೆಯನ್ನು ನೀಡಿದ್ದಾರೆ. ಯಾಋಊ ಗೋವಾಗೆ ತೆರಳಬಾರದೆಂದು ಎಚ್ಚರಿಸಿದ್ದಾರೆ.
ಶಿವಮೊಗ್ಗ (ಮಾ.11): ಬೆಳಗಾವಿ ಅಧಿವೇಶನಕ್ಕೆ ಬರುವ ಶಾಸಕರು ಯಾವುದೇ ಕಾರಣಕ್ಕೂ ಗೋವಾ ಪ್ರವಾಸಕ್ಕೆ ಹೋಗಬೇಡಿ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಹೇಳಿದರು.
ಇದೊಂದು ಸೂಕ್ಷ್ಮ ಎಚ್ಚರಿಕೆಯಾಗಿದೆ. ಬೆಳಗಾವಿ ಅಧಿವೇಶನಕ್ಕೆ ಬರುವ ಶಾಸಕರಿಗೆ ನೆರೆ ಗೋವಾಕ್ಕೆ ಹೋಗುವ ಅಭ್ಯಾಸವಿದೆ. ಹೀಗೆ ಹೋಗಿ ಅಲ್ಲಿ ಹನಿಟ್ರ್ಯಾಪ್‌ಗೆ ಸಿಲುಕಿಕೊಳ್ಳಬೇಡಿ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣವು ಒಂದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಇತ್ತೀಚೆಗೆ ಈ ರೀತಿಯ ಬ್ಲಾಕ್‌ಮೇಲ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಕಾರಣಿಗಳು ಸೇರಿದಂತೆ ಸಮಾಜದ ಗಣ್ಯಸ್ತರದ ವ್ಯಕ್ತಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ನಾನು ಗಂಡ್ಸು ಅಂತ ಪಾಸಿಟಿವ್ ಆಗಿ ತಗೊಳ್ಳಿ: ರಮೇಶ್ ಜಾರಕಿಹೊಳಿ ಪರ ಸ್ವಾಮೀಜಿ ಬ್ಯಾಟಿಂಗ್ ..
ನನ್ನ ಬಳಿ ಸಿಡಿ ಇಲ್ಲ: ನನ್ನ ಬಳಿ ಜನಪ್ರತಿನಿಧಿಗಳ 19 ಸಿಡಿ ಇದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಇದು ಮಾಧ್ಯಮಗಳ ಸೃಷ್ಟಿ. ಇದರ ಬೆನ್ನಲ್ಲೇ ಮಂಡ್ಯದ ಮಹಿಳೆಯೊರ್ವರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ನನಗೆ ವಾಟ್ಸ್‌ಪ್ ಮೂಲಕ ನೋಟಿಸ್ ಕಳುಹಿಸಿದ್ದಾರೆ ಎಂದು ಹೇಳಿದರು.
ನಾನು ಸಮಯ ಮಾಡಿಕೊಂಡು ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದೇನೆ ಎಂದರು.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಕೆಲ ಶಾಸಕರು ತಾಂತ್ರಿಕವಾಗಿ ಅಜ್ಞಾನವಂತರಾಗಿದ್ದಾರೆ. ಹಾಗಾಗಿ ಇಂತಹ ಶಾಸಕರನ್ನೇ ದುರುಪಯೋಗ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ. ಹೀಗಾಗಿ ಶಾಸಕರು ತಮ್ಮ ಸುತ್ತಮುತ್ತ ಇಟ್ಟುಕೊಳ್ಳುವ ಜನರಿಂದ ಹುಷಾರಾಗಿರಬೇಕು ಎಂದರು.