Asianet Suvarna News Asianet Suvarna News

Operation Nanhe Farishte: ವರ್ಷದಲ್ಲಿ 543 ಮಕ್ಕಳನ್ನ ರಕ್ಷಿಸಿದ ನೈರುತ್ಯ ರೈಲ್ವೆ

*  ಅನಾಥ, ತಂದೆ-ತಾಯಿ ಬಿಟ್ಟು ಬಂದವರು ಮಕ್ಕಳ ರಕ್ಷಣೆ
*  ‘ಆಪರೇಷನ್‌ ನನ್ಹೆ ಫರಿಸ್ತೆ’ ಯೋಜನೆಯಡಿ ಈ ಕಾರ್ಯ
*  ಬೆಂಗಳೂರಲ್ಲಿ ಚೈಲ್ಡ್‌ ಫ್ರೇಂಡ್ಲಿ ಸ್ಪೇಸ್‌
 

South Western Railway Rescued 543 Children in a Year grg
Author
Bengaluru, First Published Apr 16, 2022, 1:26 PM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.16): ‘ಆಪರೇಷನ್‌ ನನ್ಹೆ ಫರಿಸ್ತೆ’ ಯೋಜನೆಯಡಿ ನೈಋುತ್ಯ ರೈಲ್ವೆ(South Western Railway) ವಲಯದ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 543 ಮಕ್ಕಳನ್ನು(Children) ರಕ್ಷಿಸಲಾಗಿದೆ. ಈ ಮೂಲಕ ದಾರಿ ತಪ್ಪುತ್ತಿದ್ದ ಮಕ್ಕಳನ್ನು ಸರಿದಾರಿಗೆ ತಂದರೆ, ಕೆಲ ಮಕ್ಕಳನ್ನು ತಂದೆ-ತಾಯಿ ಮಡಿಲು ಸೇರಿಸಲಾಗಿದೆ. ಈ ಮೂಲಕ ಆರ್‌ಪಿಎಫ್‌ ಕಾರ್ಯವೈಖರಿ ಸೈ ಎನಿಸಿಕೊಂಡಿದೆ.

ನೈಋುತ್ಯ ರೈಲ್ವೆ ವಲಯವೂ ಹುಬ್ಬಳ್ಳಿ(Hubballi), ಬೆಂಗಳೂರು(Bengaluru) ಹಾಗೂ ಮೈಸೂರು(Mysuru) ವಿಭಾಗಗಳನ್ನು ಹೊಂದಿರುವ ದೊಡ್ಡ ವಲಯವಾಗಿದೆ. ಈ ವಲಯದ ವ್ಯಾಪ್ತಿಗೆ ಬರೋಬ್ಬರಿ 381 ರೈಲ್ವೆ ನಿಲ್ದಾಣ, 3579 ರೂಟ್‌ ಕಿಲೋ ಮೀಟರ್‌ ವ್ಯಾಪ್ತಿಗೊಳಪಡುತ್ತದೆ. 381 ರೈಲ್ವೆ ನಿಲ್ದಾಣಗಳಲ್ಲಿ ಅನಾಥ ಮಕ್ಕಳು(Orphaned Children), ತಂದೆ-ತಾಯಿಯಿಂದ ಬೇರ್ಪಟ್ಟ, ಮನೆಯಲ್ಲಿನ ವೈಮನಸ್ಸಿನಿಂದ ಕೆಲ ಮಕ್ಕಳು ರೈಲ್ವೆ ನಿಲ್ದಾಣಗಳಲ್ಲಿ ತಿರುಗಾಡುತ್ತಿದ್ದರೆ, ಕೆಲವರು ಏನೂ ತಿಳಿಯದೆ ಹಾಗೆ ತಿರುಗಾಡಲು ಬಂದವರು ಇರುತ್ತಾರೆ. ಇವರನ್ನು ಸರಿಯಾದ ಸಮಯಕ್ಕೆ ಪತ್ತೆ ಹಚ್ಚಿ ಅವರವರ ಕುಟುಂಬಗಳಿಗೆ ಮರಳಿ ಸೇರಿಸುವ ಕೆಲಸ ಅಗತ್ಯ ಹಾಗೂ ಅನಿವಾರ್ಯ. ಇಲ್ಲದಿದ್ದಲ್ಲಿ ಮಕ್ಕಳ ಭವಿಷ್ಯಕ್ಕೂ ಕುತ್ತು ಬರುವ ಸಾಧ್ಯತೆ ಇದೆ. ಮುಂದೆ ಎಂದೂ ತಮ್ಮ ಕುಟುಂಬವನ್ನು ಸೇರದಿರಬಹುದು. ಈ ಕಾರಣಕ್ಕಾಗಿ ರೈಲ್ವೆಗಳಲ್ಲಿ ಸಿಗುವ ಮಕ್ಕಳ ರಕ್ಷಣೆಗಾಗಿ ರೈಲ್ವೆ ಇಲಾಖೆಯೂ(Department of Railways) 2017ರಲ್ಲೇ ದೇಶಾದ್ಯಂತ ‘ಆಪರೇಷನ್‌ ನನ್ಹೆ ಫರಿಸ್ತೆ’(Operation Nanhe Farishte) ಎಂಬ ಯೋಜನೆ ಜಾರಿಗೊಳಿಸಿತ್ತು. ಆರ್‌ಪಿಎಫ್‌ ಪೊಲೀಸ್‌(RPF Police) ಈ ಕಾರ್ಯಾಚರಣೆ ನಡೆಸುತ್ತಿದ್ದು ನಿಲ್ದಾಣ, ರೈಲ್ವೆಗಳಲ್ಲಿ ಸಂಚರಿಸುತ್ತಾ ಹಿರಿಯರೊಂದಿಗೆ ಇಲ್ಲದ ಮಕ್ಕಳನ್ನು ಪತ್ತೆ ಹಚ್ಚಿ ಅವರನ್ನು ರಕ್ಷಿಸುವ ಕೆಲಸ ಮಾಡುತ್ತದೆ.

ಸರಕು ಸಾಗಾಣಿಕೆಯಿಂದ ಬರೊಬ್ಬರಿ 4160 ಕೋಟಿ ರೂ. ಲಾಭ ಗಳಿಸಿದ ನೈಋತ್ಯ ರೈಲ್ವೆ

ವರ್ಷದಲ್ಲಿ 543:

ನೈಋುತ್ಯ ರೈಲ್ವೆ ವಲಯದಲ್ಲಿ 2021ರ ಏಪ್ರಿಲ್‌ನಿಂದ 2022ರ ಮಾರ್ಚ್ ವರೆಗೆ ಬರೋಬ್ಬರಿ 543 ಮಕ್ಕಳನ್ನು ರಕ್ಷಿಸಲಾಗಿದೆ. ಇದರಲ್ಲಿ 450 ಗಂಡು, 93 ಹೆಣ್ಣು ಮಕ್ಕಳಿದ್ದಾರೆ. ಹಾಗೆ ನೋಡಿದರೆ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಮಕ್ಕಳು ಕಾಣಸಿಗುತ್ತಾರೆ. ಆದರೆ ಬೆಂಗಳೂರಲ್ಲಿ ಇದರ ಪ್ರಮಾಣ ಹೆಚ್ಚಿದೆ. ಅಲ್ಲಿ ಪ್ರತಿದಿನ ಎರಡ್ಮೂರು ಮಕ್ಕಳಾದರೂ ಇದ್ದೇ ಇರುತ್ತಾರೆ. ಈ ವರ್ಷ ಸಿಕ್ಕಿರುವ ಪೈಕಿ ಹೆಚ್ಚಾಗಿ ಮನೆಗಳಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದ ಮಕ್ಕಳೆ. ಮಾನವ ಕಳ್ಳಸಾಗಾಣಿಕೆ ಕೇಸ್‌ಗಳು ಕಳೆದ ಎರಡು ವರ್ಷಗಳಿಂದ ವಲಯ ವ್ಯಾಪ್ತಿಯಲ್ಲಿ ಕಂಡು ಬಂದಿಲ್ಲವೆಂದು ಆರ್‌ಪಿಎಫ್‌ ಸಿಬ್ಬಂದಿ ತಿಳಿಸುತ್ತಾರೆ.

ರೈಲ್ವೆ ನಿಲ್ದಾಣಗಳಲ್ಲಿ ಹಿರಿಯರಿಲ್ಲದೆ ಬರೀ ಮಕ್ಕಳಷ್ಟೇ ಇದ್ದರೆ ಅವರ ನಡವಳಿಕೆಯೆ ತಿಳಿಸುತ್ತದೆ. ಆಮೇಲೆ ಅವರನ್ನು ಕರೆಕೊಂಡು ಬಂದು ವಿಚಾರಣೆ ನಡೆಸಿದರೆ ಅವರು ಮನೆ ಬಿಟ್ಟು ಬಂದಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಬಳಿಕ ಅವರ ತಂದೆ-ತಾಯಿಯನ್ನು ಪತ್ತೆ ಹಚ್ಚಿ, ಮಕ್ಕಳ ಕಲ್ಯಾಣ ಕಮಿಟಿ (ಸಿಡಬ್ಲ್ಯೂಸಿ) ಅವರೊಂದಿಗೆ ಸೇರಿಕೊಂಡು ಅವರ ಕುಟುಂಬವನ್ನು ಸೇರಿಸುವ ಕೆಲಸ ಮಾಡುತ್ತೇವೆ ಎಂದು ವಿವರಿಸುತ್ತಾರೆ ಹುಬ್ಬಳ್ಳಿ ಭದ್ರತಾ ವಿಭಾಗ ಆಯುಕ್ತ ಜೀತೇಂದ್ರ ಶರ್ಮಾ. ಒಟ್ಟಿನಲ್ಲಿ ಒಂದು ವರ್ಷದಲ್ಲಿ 543 ಮಕ್ಕಳನ್ನು ರಕ್ಷಿಸಿದ ಹೆಮ್ಮೆ ನೈಋುತ್ಯ ರೈಲ್ವೆ ವಲಯದ್ದು.

South Western Railway: ನೈಋುತ್ಯ ರೈಲ್ವೆಯಿಂದ ವರ್ಷದಲ್ಲಿ 209 ಕಿಮೀ ರೈಲು ಮಾರ್ಗ ನಿರ್ಮಾಣ

ಬೆಂಗಳೂರಲ್ಲಿ ಚೈಲ್ಡ್‌ ಫ್ರೇಂಡ್ಲಿ ಸ್ಪೇಸ್‌

ಮಕ್ಕಳ ರಕ್ಷಣೆ ಬೆಂಗಳೂರು ನಿಲ್ದಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ‘ಚೈಲ್ಡ್‌ ಫ್ರೇಂಡ್ಲಿ ಸ್ಪೇಸ್‌’ನ್ನು ಪ್ರಾರಂಭಿಸಲಾಗಿದೆ. ಖಾಸಗಿ ಕಾರ್ಪೊರೇಟ್‌ ಕಂಪನಿಗಳ ಸಿಎಸ್‌ಆರ್‌ ನೆರವಿನೊಂದಿಗೆ ಇದನ್ನು ಪ್ರಾರಂಭಿಸಲಾಗಿದೆ. ನಿಲ್ದಾಣದಲ್ಲಿ ರಕ್ಷಣೆ ಮಾಡಿದ ಮಕ್ಕಳಿಗೆ ತಾತ್ಕಾಲಿಕವಾಗಿ ಇಲ್ಲಿ ಆಶ್ರಯ ನೀಡಲಾಗುತ್ತದೆ. ಇಲ್ಲಿ ಆಟಿಕೆ, ವಿಶ್ರಾಂತಿ ಪಡೆಯಲು ಬೆಡ್‌ ವ್ಯವಸ್ಥೆ ಇರುತ್ತದೆ. ದೇಶದ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ವ್ಯವಸ್ಥೆ ಇದೇ ಮೊದಲು. ಇದರಿಂದ ಮಕ್ಕಳು ಮನಬಿಚ್ಚಿ ಮಾತನಾಡುತ್ತಾರೆ. ಹುಬ್ಬಳ್ಳಿಯಲ್ಲೂ ಯಾವುದಾದರೂ ಕಂಪನಿ ಮುಂದೆ ಬಂದರೆ ಸಿಎಸ್‌ಆರ್‌ನಡಿ ಚೈಲ್ಡ್‌ ಫ್ರೇಂಡ್ಲಿ ಸ್ಪೇಸ್‌ ಪ್ರಾರಂಭಿಸುವ ಯೋಚನೆ ವಲಯದ್ದು.

ಒಂದು ವರ್ಷದಲ್ಲಿ ವಲಯದ ವ್ಯಾಪ್ತಿಯಲ್ಲಿ ಆಪರೇಷನ್‌ ನನ್ಹೆ ಫರಿಸ್ತೆ ಹೆಸರಲ್ಲಿ 543 ಮಕ್ಕಳನ್ನು ನಮ್ಮ ತಂಡ ರಕ್ಷಿಸಿದೆ. ಕೆಲ ಮಕ್ಕಳನ್ನು ತಂದೆ-ತಾಯಿಗಳ ಮಡಿಲನ್ನು ಮರಳಿ ಸೇರಿಸಿದ್ದರೆ, ಉಳಿದ ಮಕ್ಕಳನ್ನು ಕಾನೂನಿನ ಪ್ರಕಾರ ಎಲ್ಲಿ ಕಳುಹಿಸಬೇಕೋ ಅಲ್ಲಿ ಕಳುಹಿಸಿದ್ದೇವೆ ಅಂತ ನೈಋುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.  
 

Follow Us:
Download App:
  • android
  • ios