2023- 2024ನೇ ಸಾಲಿನ ಪುರಸಭೆಯ .18.79 ಕೋಟಿ ಗಾತ್ರದ ಆಯವ್ಯಯ ಮಂಡನೆಯನ್ನು ಅಧ್ಯಕ್ಷ ಈರೇಶ್‌ ಮೇಸ್ತ್ರಿ ಮಂಡಿಸಿದರು. ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ 2ನೇ ಬಜೆಟ್‌ ಇದಾಗಿದೆ. ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್‌ ಮಂಡಿಸಲಾಗಿದೆ.

ಸೊರಬ (ಜ.19) : 2023- 2024ನೇ ಸಾಲಿನ ಪುರಸಭೆಯ .18.79 ಕೋಟಿ ಗಾತ್ರದ ಆಯವ್ಯಯ ಮಂಡನೆಯನ್ನು ಅಧ್ಯಕ್ಷ ಈರೇಶ್‌ ಮೇಸ್ತ್ರಿ ಮಂಡಿಸಿದರು. ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ 2ನೇ ಬಜೆಟ್‌ ಇದಾಗಿದೆ. ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್‌ ಮಂಡಿಸಲಾಗಿದೆ.

ಬಜೆಟ್‌ .18.26 ಕೋಟಿ ವೆಚ್ಚವನ್ನು ಹೊಂದಿದ್ದು, .63.61 ಲಕ್ಷ ಉಳಿತಾಯವನ್ನು ನಿರೀಕ್ಷಿಸಲಾಗಿದೆ. ಸಮಗ್ರ ಅಭಿವೃದ್ಧಿ ಕಲ್ಪನೆ ಹೊಂದಿರುವ ಈ ಬಜೆಟ್‌ನಲ್ಲಿ ಕುಡಿಯುವ ನೀರು, ವಿದ್ಯುತ್‌, ಕಟ್ಟಡಗಳ ನಿರ್ಮಾಣ, ಹಸಿರೀಕರಣ, ಸ್ಚಚ್ಚತೆ, ಉದ್ಯಾನವನ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ.

Shivamogga: ಗಣಿಗಾರಿಕೆ ವಿರುದ್ಧ ಶಾಸಕ ಕುಮಾರ ಬಂಗಾರಪ್ಪಗೆ ಮಹಿಳೆಯರಿಂದ ತರಾ​ಟೆ

ವೆಚ್ಚದ ನಿರೀಕ್ಷೆ:

ನೀರು ಸರಬರಾಜಿಗಾಗಿ .35 ಲಕ್ಷ, ರಸ್ತೆ, ನಾಮಫಲಕ ಅಳವಡಿಸಲು .25 ಲಕ್ಷ, ಮೀನು ಮಾರುಟಕಟ್ಟೆನಿರ್ಮಾಣಕ್ಕೆ .77 ಲಕ್ಷ, ನಗರದಲ್ಲಿ ಸಿಸಿ ಕ್ಯಾಮೆರಾ ಮತ್ತು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು .39.67 ಲಕ್ಷ, ಹೂ-ಹಣ್ಣು ಮಾರುಕಟ್ಟೆನಿರ್ಮಾಣಕ್ಕೆ .80.50 ಲಕ್ಷ, ಪುರಸಭೆ ವ್ಯಾಪ್ತಿಯಲ್ಲಿ ಹಸರೀಕರಣಕ್ಕೆ .5.75 ಲಕ್ಷ, ಲಘು ವಾಹನಗಳ ಖರೀದಿಗೆ .23 ಲಕ್ಷ, ನಗರ ವಿನ್ಯಾಸಕ್ಕೆ .21.16 ಲಕ್ಷ, ರಸ್ತೆ ಇಕ್ಕೆಲಗಳಲ್ಲಿ ಬಾಕ್ಸ್‌ ಚರಂಡಿ ಅಳವಡಿಸಲು .5.95 ಕೋಟಿ, ಸ್ಮಶಾನ ನಿರ್ಮಾಣ ಅಭಿವೃದ್ಧಿಗೆ .35 ಲಕ್ಷ, ಕುಡಿಯುವ ನೀರು ಸರಬರಾಜಿಗೆ .60.17 ಲಕ್ಷ, ಪ್ರಕೃತಿ ವಿಕೋಪ ನಿರ್ವಹಣೆಗೆ .28.75 ಲಕ್ಷ, ಉದ್ಯಾನವನ ನಿರ್ಮಾಣಕ್ಕೆ .20 ಲಕ್ಷ, ಪರಿಶಿಷ್ಟ/ಪರಿಶಿಷ್ಟಪಂಗಡ ಅಭಿವೃದ್ಧಿಗೆ ಶೇ.24.10 ರಷ್ಟು, ಬಡವರ ಕಲ್ಯಾಣಕ್ಕಾಗಿ ಶೇ.7.25, ಅಂಗವಿಕಲ ಕಲ್ಯಾಣಕ್ಕೆ ಶೇ.5ರಷ್ಟುಹಣ ವಿನಿಯೋಗಿಸುವ ಗುರಿ ಹೊಂದಲಾಗಿದೆ.

ಆದಾಯದ ನಿರೀಕ್ಷೆ:

ಕಟ್ಟಡ ಮತ್ತು ಭೂಮಿಯ ಮೇಲಿನ ಕರ ಅಂಗಡಿ ಬಾಡಿಗೆ ಮಾರುಕಟ್ಟೆಹರಾಜು, ಜಾಹಿರಾತು ಕರ, ಕಟ್ಟಡಗಳ ಪರವಾನಿಗೆ, ಅಭಿವೃದ್ಧಿ ಶುಲ್ಕ ಉದ್ದಿಮೆ ಪರವಾನಿಗೆ, ಕರಗಳ ವಸೂಲಿ, ಖಾತೆ ಬದಲಾವಣೆ, ನೀರು ಸರಬರಾಜು ಫೀ, ಬ್ಯಾಂಕ್‌ ಖಾತೆಯಿಂದ ಬಂದ ಬಡ್ಡಿ, ಆಸ್ತಿ ತೆರಿಗೆಯಿಂದ ಬಂದ ಹೆಚ್ಚುವರಿ ಆದಾಯದ ಜೊತೆಗೆ 14ನೇ ಹಣಕಾಸಿನ ಅನುದಾನ ಎನ್‌.ಎಫ್‌.ಸಿ. ಮುಕ್ತ ನಿಧಿ ಅನುದಾನ, ಕುಡಿಯುವ ನೀರಿನ ಪೂರೈಕೆ ಕಾಮಗಾರಿಗಳಿಗೆ ಅನುದಾನ, ಎಸ್‌.ಬಿ.ಎಂ. ಅನುದಾನ, ವಿಶೇಷ ಅನುದಾನವನ್ನು ಸೇರಿದಂತೆ .14.89 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಪಟ್ಟಣ ಸೇರಿದಂತೆ ಪುರಸಭೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಆದ್ಯತೆ ನೀಡುವುದು, ಬೀದಿದೀಪ ಅಳವಡಿಕೆ, ಬೀಡಾಡಿ ದನಗಳನ್ನು ಹಿಡಿಯುವುದು, ನಾಯಿಗಳ ಸಂತಾನ ನಿಯಂತ್ರಣ, ಚಿಕಿತ್ಸೆ ಸೇರಿದಂತೆ ಮಾನವ ಸಂಪನ್ಮೂಲಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಬಜೆಟ್‌ ಮಂಡಿಸಿದ ಪುರಸಭಾ ಅಧ್ಯಕ್ಷ ಈರೇಶ್‌ ಮೇಸ್ತ್ರಿ ಪಟ್ಟಣ ಪಂಚಾಯಿತಿ ವತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ, ಪುರಸಭಾ ವ್ಯಾಪ್ತಿ ಹೆಚ್ಚಿದ್ದು, ಅದಕ್ಕೆ ಅನುಗುಣವಾಗಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಹಾಗೂ ಎಲ್ಲ ವರ್ಗವನ್ನು ಗಮನದಲ್ಲಿಟ್ಟುಕೊಂಡು 2023- 24ನೇ ಸಾಲಿನ ಬಜೆಟ್‌ ಮಂಡನೆ ಮಾಡಲಾಗಿದೆ. ಈ ಬಾರಿ ದೊಡ್ಡ ಗಾತ್ರದ ಬಜೆಟ್‌ ಆಗಿದ್ದರೂ ಆದಾಯದ ನಿರೀಕ್ಷೆಯೊಂದಿಗೆ .63.61 ಲಕ್ಷ ಉಳಿತಾಯ ಬಜೆಟ್‌ನ್ನು ನಿರೀಕ್ಷಿಸಲಾಗಿದೆ ಎಂದರು.

Shivamogga: ಹೋರಿ ಬೆದರಿಸುವ ಸ್ಪರ್ಧೆ: ಹೋರಿ ತಿವಿದು ಇಬ್ಬರ ಸಾವು

ಸಭೆಯಲ್ಲಿ ಉಪಾಧ್ಯಕ್ಷ ಮಧುರಾಯ ಜಿ. ಶೇಟ್‌, ಸದಸ್ಯರಾದ ಎಂ.ಡಿ. ಉಮೇಶ್‌, ಅನ್ಸರ್‌ ಅಹ್ಮದ್‌, ಡಿ.ಎಸ್‌. ಪ್ರಸನ್ನಕುಮಾರ್‌, ಪ್ರೇಮಾ ಟೋಕಪ್ಪ, ಸುಲ್ತಾನಾ ಬೇಗಂ, ಆಫ್ರೀನಾ ಬಾನು, ಜಯಲಕ್ಷ್ಮೇ, ಮುಖ್ಯಾಧಿಕಾರಿ ಗಿರೀಶ್‌ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.