ಮೈಸೂರು (ಅ.04):  ಕೊರೋನಾಗೆ ಔಷಧ ಸಂಶೋಧನಾ ಕಾರ್ಯ ನಡೆಯುತ್ತಿದ್ದು, ದೇಶದಿಂದ ದೇಶಕ್ಕೆ ಜನಾಂಗದ ವ್ಯತ್ಯಾಸದ ಕಾರಣದಿಂದ ಔಷಧ ಕಂಡುಹಿಡಿಯುವಲ್ಲಿ ತಡವಾಗುತ್ತಿದೆ. ಇನ್ನೆರಡು, ಮೂರು ತಿಂಗಳಲ್ಲಿ ಕೋ ವ್ಯಾಕ್ಸಿನ್‌ ಸಿಗಲಿದೆ ಎಂದು ರಸಾಯನಶಾಸ್ತ್ರ ವಿಜ್ಞಾನಿ ಪ್ರೊ.ಕೆ.ಎಸ್‌. ರಂಗಪ್ಪ ಅಭಿಪ್ರಾಯಪಟ್ಟರು.

ಮೈಸೂರು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿಯ ವಿಶ್ರಾಂತ ಕುಲಪತಿಗಳೂ ಆದ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,

ವಿಜ್ಞಾನಿಗಳು, ಸಂಶೋಧಕರು ತಮ್ಮದೇ ರೀತಿಯಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಕೋವಿಡ್‌ ವ್ಯಾಕ್ಸಿನ್‌ಗೆ ಮೂರು ಹಂತದ ಪ್ರಯೋಗ ಆದ ಮೇಲೆಯೇ ಔಷಧ ದೊರೆಯಲಿದೆ. 3ನೇ ಹಂತದಲ್ಲಿ ಸರಿ ಸುಮಾರು 6 ಸಾವಿರ ಮಂದಿಯ ಮೇಲೆ ಇದರ ಪ್ರಯೋಗವಾಗಬೇಕು. ಈ ಸಂದರ್ಭದಲ್ಲಿಯಾವುದೇ ವ್ಯತಿರಿಕ್ತ ಪರಿಣಾಮ ಬೀರದಿದ್ದರೆ ಆಗ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದರು.

ಗೌರವ ವಿಜ್ಞಾನಿಯಾಗಿ ನೇಮಕ

ತಮ್ಮನ್ನು ನವದೆಹಲಿಯ ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಅಂಡ್‌ ಇಂಡಸ್ಟ್ರೀಯಲ್‌ ರೀಸಚ್‌ರ್‍ (ಸಿಎಸ್‌ಐಆರ್‌)ಗೆ ಗೌರವ ವಿಜ್ಞಾನಿಯಾನ್ನಾಗಿ ಐದು ವರ್ಷದ ಅವಧಿಗೆ ನೇಮಿಸಲಾಗಿದೆ. ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಸಲಹೆ, ಸೂಚನೆ ನೀಡುವ ಮಹತ್ವದ ಹುದ್ದೆ ನೀಡಲಾಗಿದೆ. ಈ ಸಂಸ್ಥೆಗೆ ವಿವಿಗಳಲ್ಲಿ ಕೆಲಸ ಮಾಡಿರುವ ವ್ಯಕ್ತಿಗಳನ್ನು ನೇಮಿಸುವುದು ಅಪರೂಪ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನ ಆಡಳಿತ ಮಂಡಳಿ ಸದಸ್ಯನನ್ನಾಗಿ ನೇಮಿಸಲಾಗಿದೆ. ಬಟಿಂಡಾ, ಶ್ರೀನಗರ, ಚಂಡೀಘಡ, ಭುವನೇಶ್ವರ, ಗುಹವಾಟಿ ಏಮ್ಸ್‌ಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಟಾರ್ಗೆಟ್ ರೀಚ್ ಆಗಲು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಅಧಿಕಾರಿಗಳ ಟಾರ್ಚರ್ ..

ನಾನು ರಾಜಕೀಯದಿಂದ ದೂರ ಇರುತ್ತೇನೆ. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತೇನೆ. ಕೆಲವರು ವೈಯಕ್ತಿಕ ಕಾರಣದಿಂದ ನನ್ನ ಕಾಲೆಳೆದಷ್ಟುಎತ್ತರಕ್ಕೆ ಹೋಗುತ್ತೇನೆ. ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ ಸಮಾವೇಶದಲ್ಲಿ ಪ್ರಧಾನಿ ಜೊತೆ ವೇದಿಕೆ ಹಂಚಿಕೊಳ್ಳದಂತೆ ಹೇಳಲಾಗಿತ್ತು. ಆದರೆ ಕೇಂದ್ರ ಸಚಿವ ಹರ್ಷವರ್ಧನ್‌ ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನೀವು ವಿಜ್ಞಾನಿಯಾಗಿ ಒಳ್ಳೆ ಹೆಸರು ಮಾಡಿರುವುದಾಗಿ ಪ್ರಶಂಸಿದ್ದಾರೆ.

- ಪ್ರೊ.ಕೆ.ಎಸ್‌. ರಂಗಪ್ಪ, ವಿಶ್ರಾಂತ ಕುಲಪತಿ ಹಾಗೂ ವಿಜ್ಞಾನಿ.