ಮೈಸೂರು (ಡಿ.18): ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರ ಕಾಂಗ್ರೆಸ್‌ ಸೇರ್ಪಡೆ ಕುರಿತು ಹದಿನೈದು ದಿನಗಳಲ್ಲಿ ತೀರ್ಮಾನ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. 

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತು ಶರತ್‌ ಬಚ್ಚೇಗೌಡ ಸೇರಿ ಚುನಾವಣೆ ನಡೆಸಿದ್ದರು. ಹೊಸಕೋಟೆ ಕ್ಷೇತ್ರದಲ್ಲಿ ಶೇ.70 ರಷ್ಟುಕಾಂಗ್ರೆಸ್‌ ಬೆಂಬಲಿಗರು ಗೆದ್ದಿದ್ದಾರೆ. 

 'ಚುನಾವಣೆ ಬೆನ್ನಲ್ಲೇ ಈ ಪಕ್ಷದ ಜೊತೆ ಶರತ್ ಬಚ್ಚೇಗೌಡ ಹೊಂದಾಣಿಕೆ' .

ಈ ಹಿನ್ನೆಲೆಯಲ್ಲಿ ನನಗೆ ಧನ್ಯವಾದ ಹೇಳಲು ಬಂದಿದ್ದರು. ಶರತ್‌ ಬಚ್ಚೆಗೌಡ ಅವರು ಪಕ್ಷಕ್ಕೆ ಬರುವ ಕುರಿತು ಮಾತುಕತೆ ನಡೆಯುತ್ತಿದೆ. ಇನ್ನು 15 ದಿನದಲ್ಲಿ ಎಲ್ಲವೂ ತೀರ್ಮಾನವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.