ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಇದೇ ವೇಳೆ ಸ್ವಾಭೀಮಾನಿ ಪಕ್ಷದ ಶರತ್ ಬಚ್ಚೇಗೌಡ ಈ ಪಕ್ಷಕ್ಕೆ ತಮ್ಮ ಸಪೋರ್ಟ್ ನೀಡಿದ್ದಾರೆ
ಹೊಸಕೋಟೆ (ಡಿ.11): ತಾಲೂಕಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಹಾಗೂ ಸ್ವಾಭಿಮಾನ ಪಕ್ಷ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಸ್ವಾಭಿಮಾನಿ ಪಕ್ಷದ ಅಭ್ಯರ್ಥಿ ಕೆ.ಎಂ. ಮುನಿರಾಜ್ ತಿಳಿಸಿದರು.
ಖಾಜಿ ಹೊಸಹಳ್ಳಿ ಗ್ರಾಪಂ ಚುನಾವಣೆಗೆ ಸ್ವಾಭಿಮಾನಿ ಹಾಗೂ ಕಾಂಗ್ರೆಸ್ ಪಕ್ಷ ಜಂಟಿಯಾಗಿ ನಾಮಪತ್ರ ಸಲ್ಲಿಕೆ ಮಾಡಿ ಮಾತನಾಡಿದರು.
ಗ್ರಾಮದಲ್ಲಿ ಈ ಹಿಂದೆಯೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದ್ದು, ಇನ್ನು ಸಾಕಷ್ಟುಉಳಿದಿವೆ. ಆದ್ದರಿಂದ ಅವುಗಳನ್ನು ಮುಂದಿನ ಅವಧಿಯಲ್ಲಿ ಪೂರೈಸಲು ಕಾಂಗ್ರೆಸ್ ಹಾಗೂ ಸ್ವಾಭಿಮಾನಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾದಿಸಬೇಕು. ಕಾಮರಸನಹಳ್ಳಿ ಗ್ರಾಮದ ಮೀಸಲಾತಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದು, ಅಂಭೇಡ್ಕರ್ ಆಶಯಗಳು ಈಡೇರಲು ಎಸ್‌ಸಿ ಕ್ಷೇತ್ರದ ಮುನಿರಾಜ್, ಹಾಗೂ ವಹ್ನಿಕುಲ ಸಮುದಾಯದ ಶ್ರೀನಿವಾಸ್ ಅವರಿಗೆ ಮತದಾರರು ಆಶೀರ್ವಾದ ಮಾಡಬೇಕು ಎಂದರು.
ಸುಮಲತಾಗೆ ಒಲಿದಿದ್ದ ಅದೃಷ್ಟ : ಹೆಚ್ಚಾದ ಡಿಮ್ಯಾಂಡ್ ...
ಚುನಾವಣಾಧಿಕಾರಿ ವಿದ್ಯಾಶ್ರೀ ಮಾತನಾಡಿ, ಖಾಜಿ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 19 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಮರಸನಹಳ್ಳಿ, ತಿಂಡ್ಲು, ಪರಮನಹಳ್ಳಿ, ಬೊಮ್ಮನಬಂಡೆ, ತರಬಹಳ್ಳಿ, ಕಟ್ಟಿಗೇನಹಳ್ಳಿ ಗ್ರಾಮಗಳು ಒಳಪಡಲಿದ್ದು, ಉಮೇದುವಾರಿಕೆ ಸಲ್ಲಿಸಲು ಸಾಕಷ್ಟುಅಭ್ಯರ್ಥಿಗಳು ಆಗಮಿಸುತ್ತಿದ್ದಾರೆ. ಚುನಾವಣಾ ಆಯೋಗದ ನಿಯಮಾನುಸಾರ ಕಟ್ಟುನಿಟ್ಟಾಗಿ ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡು ಚುನಾವಣೆ ಮಾಡಲಾಗುವುದು ಎಂದರು.
ಪೊಲೀಸರ ನಿಯೋಜನೆ: ನಾಮಪತ್ರ ಸಲ್ಲಿಸಲು ಗ್ರಾಮ ಪಂಚಾಯತ್‌ಗೆ ಬರುವ ಅಭ್ಯರ್ಥಿಗಳ ಜೊತೆ ಸೂಚಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವಿಲ್ಲ. ಆದರೆ ಅಭ್ಯರ್ಥಿಗಳ ಜೊತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಗೊಂದಲ ಸೃಷ್ಠಿ ಆಗುವ ಕಾರಣ ಸೂಕ್ತ ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 13, 2020, 8:12 AM IST