Asianet Suvarna News Asianet Suvarna News

Koppal: ಅಂಜನಾದ್ರಿ ಅಭಿವೃದ್ಧಿ: ಶೀಘ್ರ ಸಿಎಂ ನೇತೃತ್ವದಲ್ಲಿ ಸಭೆ: ಆನಂದ ಸಿಂಗ್‌

*  ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಅನುಷ್ಠಾನ ಕುರಿತು ಚರ್ಚೆ
*  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇಂತಿಷ್ಟೇ ಗೆಲ್ಲುತ್ತೇವೆ ಎಂದು ಹೇಳೋದಿಲ್ಲ
*  ಯಾರು ಊಹಿಸಿರದ ಫಲಿತಾಂಶ ಬರುತ್ತದೆ 

Soon Meeting Led By CM Basavaraj Bommai For Development of Anjanadri Hill grg
Author
Bengaluru, First Published Apr 20, 2022, 11:42 AM IST

ಕೊಪ್ಪಳ(ಏ.20):  ಅಂಜನಾದ್ರಿಯನ್ನು(Anjanadri Hill) ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡುವುದಕ್ಕಾಗಿ 100 ಕೋಟಿಯನ್ನು ಘೋಷಿಸಲಾಗಿದ್ದು, ಇದರ ಅನುಷ್ಠಾನದ ಕುರಿತು 20 ದಿನದೊಳಗಾಗಿ ಸಿಎಂ ನೇತೃತ್ವದಲ್ಲಿ ಕೊಪ್ಪಳದಲ್ಲಿಯೇ ಸಭೆ ನಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌(Anand Singh) ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ಬಿಡುಗಡೆಗೆ ಅನುಮತಿಯನ್ನು ಸಿಎಂ ಅವರೇ ನೀಡಬೇಕಾಗಿರುವುರಿಂದ ಅವರ ನೇತೃತ್ವದಲ್ಲಿಯೇ ಸಭೆ ನಡೆಸಲಾಗುವುದು. ಈ ಕುರಿತು ಚರ್ಚೆ ಮಾಡಿದ್ದು, ಶೀಘ್ರದಲ್ಲಿಯೇ ಹೊಸಪೇಟೆಯಲ್ಲಿ ನಡೆಯುವ ಮತ್ತೊಂದು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಆ ವೇಳೆ ಸಿಎಂ ಕೊಪ್ಪಳಕ್ಕೂ ಆಗಮಿಸಿ ಸಭೆ ನಡೆಸುವರು ಎಂದರು.

Hanuman Jayanti: ಇಂದು ಅಂಜನಾದ್ರಿ ಬೆಟ್ಟದಲ್ಲಿ ವೈಭವದ ಹನುಮ ಜಯಂತಿ

ಕೊಪ್ಪಳ(Koppal) ತಾಲೂಕು ಮಟ್ಟದ ಆರೋಗ್ಯ ಮೇಳವನ್ನು ಶೆಡ್‌ನಲ್ಲಿ ನಡೆಸಿರುವುದನ್ನು ಪ್ರಶ್ನಿಸಿದ್ದೇನೆ. ಇದು ಸರಿಯಾದ ರೀತಿಯಲ್ಲ. ಇನ್ನೊಂದು ಬಾರಿ ಹೀಗಾಗಬಾರದು ಎಂದು ಎಚ್ಚರಿಸಿದ್ದೇನೆ ಎಂದರು.

ಗೃಹ ಸಚಿವರು ಕಾರ್ಯ ಉತ್ತಮವಾಗಿದೆ

ಗಲಭೆಯಾಗುವುದರ ಬಗ್ಗೆ ಮೊದಲೆ ಯಾರಿಗೂ ಗೊತ್ತಿರುವುದಿಲ್ಲ. ಭವಿಷ್ಯವನ್ನು ಹೇಳಲು ಆಗುವುದಿಲ್ಲ. ಆದರೆ, ಗಲಭೆ ನಡೆದ ನಂತರ ಅನಾಹುತ ಆಗದಂತೆ ತಡೆಯಲಾಗುತ್ತದೆ. ಯಾರು ಏನು ಆಪಾದನೆ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ, ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಹೇಳಿದರು.

Koppal: ಹನುಮ ಮಾಲೆ ಧರಿಸಿ ವ್ರತ ಕೈಗೊಂಡ ಮುಸ್ಲಿಂ ಯುವಕ

ಹುಬ್ಬಳ್ಳಿ ಗಲಾಟೆ(Hubballi Riots) ಕುರಿತು ನಾನೇನು ಹೇಳುವುದಿಲ್ಲ. ಆದರೆ, ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಈಗಾಗಲೇ ಗಲಾಟೆಯನ್ನು ನಿಯಂತ್ರಣ ಮಾಡಿ, ತಪ್ಪಿತಸ್ಥರನ್ನು ಬಂಧಿಸುವ ಕಾರ್ಯ ಮಾಡಿದ್ದಾರೆ. ವಿಜಯನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಸಿರುವುದರಿಂದ ಬಿಜೆಪಿ ವರ್ಚಸ್ಸು ಹೆಚ್ಚಳವಾಗಿದೆ. ವಿಜಯನಗರ ಸ್ಥಳವೇ ಅಂಥದ್ದು ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇಂತಿಷ್ಟೇ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ಆದರೆ, ನಿರೀಕ್ಷೆ ಮೀರಿ ಸ್ಥಾನಗಳು ಬಿಜೆಪಿಗೆ ಬರುತ್ತವೆ. ಯಾರು ಊಹಿಸಿರದ ಫಲಿತಾಂಶ ಬರುತ್ತದೆ. ಅಷ್ಟು ದೊಡ್ಡ ಶಕ್ತಿ ಬಿಜೆಪಿ(BJP) ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ದಿಂಗಾಲೇಶ್ವರ ಸ್ವಾಮಿಗಳು ಏನು ಹೇಳಿದ್ದಾರೊ ಗೊತ್ತಿಲ್ಲ. ನಾನು ಈ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
 

Follow Us:
Download App:
  • android
  • ios