ಮೈಸೂರು (ಜ.25):  ವಲಸೆ ಮಂತ್ರಿಗಳೆಲ್ಲ ಹೊಸ ಮನೆ ಸೆಂಟ್ರಿಂಗ್ ಸಾಮಾನು ಇದ್ದಂಗೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ವಲಸೆ ಹೋದವರ ಸ್ಥಿತಿ ಮತ್ತಷ್ಟು ಕೆಡುತ್ತದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ. 

ಇನ್ನು 6 ತಿಂಗಳಲ್ಲಿ ಬಿಜೆಪಿ 5 ವಲಸೆ ಮಂತ್ರಿಗಳನ್ನ ಕೆಳಗಿಸುತ್ತಾರೆ ಎಂದು ಮೈಸೂರಿನಲ್ಲಿ  ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ. 

ನನ್ನ ಮಗಳು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದ ಕಾಂಗ್ರೆಸ್ ಶಾಸಕ .

ಬಿಜೆಪಿಗೆ ಹೋಗಿರುವ ವಲಸೆ ಮಂತ್ರಿಗಳೆಲ್ಲ ಹೊಸ ಮನೆಗೆ ಸೆಂಟ್ರಿಂಗ್ ಇದ್ದ ಹಾಗೇ.  ಮನೆ ಮೇಲ್ಛಾವಣಿ ನಿಂತ ಮೇಲೆ ಸೆಂಟ್ರಿಂಗ್ ಕಿತ್ತು ಬಿಸಾಕಿದ ಹಾಗೇ ವಲಸೆ ಮಂತ್ರಿಗಳನ್ನ ಕಿತ್ತು ಬಿಸಾಕಲಿದ್ದಾರೆ ಎಂದರು.

ಬಿಸಿ ಪಾಟೀಲ್, ಸುಧಾರಕರ್, ಗೋಪಾಲಯ್ಯ, ನಾರಾಯಣಗೌಡ, ಆರ್. ಶಂಕರ್‌ರನ್ನ ಮೊದಲು ಕಿತ್ತು ಬಿಸಾಕಲಿದ್ದಾರೆ. ನಂತರ ಆರು ತಿಂಗಳಲ್ಲಿ  5 ಜನರನ್ನ ಆನಂತರದ ದಿನಗಳಲ್ಲಿ ಕಿತ್ತು ಹಾಕಲಿದ್ದಾರೆ. ಇದಂತೂ ಖಚಿತ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದರು.