ಬೆಂಗಳೂರು, (ಜ.24): ಕರ್ತವ್ಯನಿರತ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಶಾಸಕಿ ಸೌಮ್ಯರೆಡ್ಡಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

 ಈ ವಿಚಾರವಾಗಿ ಇಂದು (ಭಾನುವಾರ) ಸೌಮ್ಯ ತಂದೆ, ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ರಾಜಭವನ ಚಲೋ ವೇಳೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಲವರನ್ನು ಬಂಧಿಸಲಾಯಿತು. ಈ ವೇಳೆ ನನ್ನ ಮಗಳು ಸೌಮ್ಯಾ ಲೇಡಿ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಸೌಮ್ಯಾ ನಾನು ಯಾವುದೇ ಹಲ್ಲೆ ನಡೆಸಿಲ್ಲ ಎಂದಿದ್ದಾಳೆ. ಘಟನೆ ಬಳಿಕ ಮಹಿಳಾ ಮೋರ್ಚಾದವರು ದೂರು ನೀಡಲು ಹೋದರೂ ದೂರು ತೆಗೆದುಕೊಂಡಿಲ್ಲ. ನನ್ನ ಮಗಳು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ ಎಂದರು.

ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ: ಕಾಂಗ್ರೆಸ್‌ ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ಎಫ್‌ಐಆರ್‌

ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಿಜೆಪಿ ಕೈಗೊಂಬೆಯಾಗಿದೆ. ಠಾಣೆಗೆ ದೂರು ‌ಕೊಡಲು ಹೋದರು ತೆಗೆದುಕೊಳ್ಳೋದಿಲ್ಲ ಅಂದ್ರೆ ಏನರ್ಥ? ರಾಜ್ಯ ಕೇಸರಿಮಯವಾಗ್ತಿದೆಯಾ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.