ಮಂಡ್ಯ (ಜು.01): ಕಣ್ಮುಂದೆಯೇ ಅನ್ಯಾಯ ನಡೆಯುತ್ತಿದ್ದರು ನೋಡುತ್ತಾ ಕೂರುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ಕಲಬೆರಕೆ ಹಾಲಿಕ ಪ್ರಕರಣದ ತನಿಖೆ ಮುಗಿದ  ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಬಿ ಆರ್ ರಾಮಚಂದ್ರು ಹೇಳಿದರು. 

ಕಲಬೆರಕೆ ಹಾಲು ಪೂರೈಕೆಯಾಗುತ್ತಿರುವ ಅನುಮಾನದ ಮೇಲೆ ಲಾರಿಗಳ ನಂಬರ್ ಪ್ಲೇಟ್ ಚಾರ್ಸಿ ನಂಬರ್ ಪರಿಶೀಲಿಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ತಿಇಸಿದರೂ ಅವರು ಪರಿಶೀಲನೆಗೆ ಮುಂದಾಗಿರಲಿಲ್ಲ. 

ಮಹಾಮೋಸ: ಅರ್ಧ ಟ್ಯಾಂಕರ್‌ ಹಾಲಿಗೆ ಅರ್ಧ ಟ್ಯಾಂಕರ್‌ ನೀರು..!

ಅದನ್ನು ನಾವೇ ಪತ್ತೆ ಹಚ್ಚುವಂತಾಯಿತು. ರೈತರಿಗೆ ಅನ್ಯಾಯ ಮಾಡುವುದಕ್ಕೆ ನನ್ನ ಮನಸ್ಸು ಒಪ್ಪುವುದಿಲ್ಲ. ಕಲಬೆರಕೆ ಹಾಲು ಪೂರೈಕೆಯಾಗುತ್ತಿರುವ ರಾಜಕೀಯ ಒತ್ತಡಗಳಿಗೆ ಮಣಿಯುವುದೂ ಇಲ್ಲ. ಇದರ ಹಿಂದೆ ಯಾರ್ಯಾರಿದ್ದಾರೆ ಎನ್ನುವುದು ಬಹಿರಂಗವಾಗಬೇಕು. ಅದಕ್ಕಾಗಿ ಸಿಬಿಐ ತನಿಖೆಗೆ ಒಪ್ಪಿಸುವುದಕ್ಕು ಸಿದ್ಧವಿರುವುದಾಗಿ ತಿಳಿಸಿದರು. 

ಮಂಡ್ಯ ಹಾಲು ಒಕ್ಕೂಟದಿಂದ ರವಾನೆಯಾಗುವ ಹಾಲಿನಲ್ಲಿ ಭಾರೀ ಪ್ರಮಾಣದ ನೀರು ಮಿಶ್ರಿತವಾಗುತ್ತಿದ್ದ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆಯೂ ವ್ಯಕ್ತವಾಗಿತ್ತು.