ರಾಮ​ನ​ಗರ (ಸೆ.08):  ಜೆಡಿ​ಎಸ್‌ ಪಕ್ಷದ ನಾಯ​ಕರ ವಿಚಾರ ಹಾಗೂ ಧೋರಣೆಯಿಂದ ಬೇಸ​ತ್ತಿ​ರುವ ತಾವು ಪಕ್ಷ ತೊರೆಯುತ್ತಿದ್ದು, ಶೀಘ್ರ​ದ​ಲ್ಲಿಯೇ ಕಾಂಗ್ರೆಸ್‌ ಸೇರ್ಪ​ಡೆ​ಯಾ​ಗು​ವು​ದಾಗಿ ಬಿಡದಿ ಪುರ​ಸಭೆ ಸದಸ್ಯ ಸಿ.ಉ​ಮೇಶ್‌ ತಿಳಿ​ಸಿ​ದರು.

ಸೋಮ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಕಳೆದ 35 ವರ್ಷಗಳ ರಾಜಕೀಯ ಜೀವನದಲ್ಲಿ ತಾವು ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ ಇತ್ತೀಚೆಗೆ ಜೆಡಿಎಸ್‌ ಪಕ್ಷದ ನಾಯಕರ ನಡ​ವ​ಳಿ​ಕೆ​ ಬೇಸರ ಮೂಡಿ​ಸಿದೆ. ಮಾಜಿ ಶಾಸಕರಾದ ಎಚ್‌.ಸಿ.ಬಾಲಕೃಷ್ಣ ಅವರು ನನ್ನನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಅವರು ಕಾಂಗ್ರೆಸ್‌ ಸೇರ್ಪಡೆಯಾದಾಗ ಅವರೊಂದಿಗೆ ನಾನು ಹೋಗಬೇಕಿತ್ತು. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಅವರು ನನ್ನ ಮನೆಗೆ ಬಂದು ‘ನಾನು ಮುಖ್ಯಮಂತ್ರಿ ಆಗುತ್ತೇನೆ ಬಿಡದಿ ಅಭಿವೃದ್ಧಿ ಸಹಕರಿಸುವೆ ಪಕ್ಷ ಬಿಡಬೇಡ’ ಎಂದಿ​ದ್ದರು. ಅವರ ಮಾತಿಗೆ ಕಟ್ಟಿಬದ್ಧನಾಗಿ ಜೆಡಿಎಸ್‌ ಪಕ್ಷದಲ್ಲೇ ಉಳಿದಿದ್ದೆ. ಆದರೆ, ಕೊಟ್ಟಮಾತಿನಂತೆ ಅವರಿಂದ ಸ್ಪಂದನೆ ದೊರೆಯಲಿಲ್ಲ. ಹೀಗಾಗಿ ತಮ್ಮ ಅಪಾರ ಬೆಂಬಲಿಗರ ಜೊತೆಯಲ್ಲಿ ಪಕ್ಷ ಬಿಡುವ ದೃಢ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಹೇಳಿದರು.

ಇತ್ತ ಸಿಎಂ ಸಚಿವರ ಸಭೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ ...

ಬಿಡದಿ ಪುರಸಭೆಯಲ್ಲಿ ಕಳೆದ 2 ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲ. ಅಧಿಕಾರಿಗಳ ದ​ರ್ಬಾರ್‌ ಮುಂದುವರೆದಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವವರಿಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ. ಚುನಾಯಿತ ಪ್ರತಿನಿಧಿಗಳನ್ನು ಕತ್ತಲಲ್ಲಿಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಉಮೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಬಿಡದಿ ಪುರಸಭೆ ವ್ಯಾಪ್ತಿಯ 8ನೇ ವಾರ್ಡಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಜೂರು ಮಾಡಿದ್ದ ಅನುದಾನ ಹೊರತುಪಡಿಸಿ ಬೇರೆ ಅನುದಾನ ತಂದು ಅಭಿವೃದ್ದಿ ಮಾಡಿದ್ದರೇ ಶಾಸಕರು ಶ್ವೇತ ಪತ್ರ ಹೊರೆಡಿಸಲಿ ಎಂದು ಉಮೇಶ್‌ ಸವಾಲು ಹಾಕಿದರು.

ಬಿಡದಿ ಪುರಸಭೆಯಲ್ಲಿ 23 ಸದಸ್ಯರು ಸರ್ಕಾರ ಹಾಗೂ ಪುರಸಭೆಯ ಅನುದಾನದಡಿಯಲ್ಲಿ ಪಕ್ಷಾತೀತವಾಗಿ ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಅಧಿಕಾರವಧಿಯಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೆ 10 ಕೋಟಿ ರು.ಮಂಜೂರು ಮಾಡಿದ್ದರು. ಈ ಅನುದಾನದಡಿ 8ನೇ ವಾರ್ಡಿನಲ್ಲಿ ಕಾಂಕ್ರಿಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದು ಬಿಟ್ಟು ಬೇರೆ ಯಾವ ಅಭಿವೃದ್ಧಿ ಕಾಮಗಾರಿಯೂ ಕಂಡುಬಂದಿಲ್ಲ. ಒಂದು ವೇಳೆ ಆಗಿದ್ದರೇ ಬಹಿರಂಗ ಪಡಿಸಲಿ ಎಂದು ಶಾಸಕ ಎ.ಮಂಜುನಾಥ್‌ ಅವರನ್ನು ಒತ್ತಾ​ಯಿ​ಸಿ​ದರು.