ಹುಬ್ಬಳ್ಳಿ [ಸೆ. 11] ಈ ಜಗತ್ತಿನಲ್ಲಿ ಏನೇನೋ ಘಟನೆಗಳು ನಡೆದು ಹೋಗುತ್ತವೆ. ಅದೆ ಸಾಲಿಗೆ ಹುಬ್ಬಳ್ಳಿಯ ಈ ಪ್ರಕರಣ

ಮಕ್ಕಳು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ನೇಕಾರ ನಗರ ನಿವಾಸಿ ಸುಶೀಲಮ್ಮ [60] ಆತ್ಮಹತ್ಯೆಗೆ ಶರಣಾಗಿದ್ದಾರೆ.ಇಬ್ಬರು ಗಂಡು ಮಕ್ಕಳು ಸೊಸೆಯಿಂದ ಕಿರಿಕಿರಿಗೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ.

ಮಂಜುನಾಥ, ಹಾಗೂ ರಾಜಪ್ಪ‌ ಎಂಬ ಪುತ್ರರಿಂದ ತಾಯಿಗೆ ಕಿರುಕುಳ ಆಗುತ್ತಿತ್ತು ಎನ್ನಲಾಗಿದೆ.  ಸುಶೀಲಮ್ಮ ಹೆಣ್ಣು ಮಕ್ಕಳು ಸಹೋದರರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಮನೆಯೊಳಗೆ ಅವಿತು ಕುಳಿತಿರೋ ಸಹೋದರನ್ನು ಹೊರಕ್ಕೆ ಕರೆಯುತ್ತಿದ್ದ ದೃಶ್ಯವೂ ಕಂಡುಬಂತು. ಕೆಸ್ ಆರ್ ಟಿಸಿ ನೌಕರರಾಗಿದ್ದ ಸುಲೀಶಮ್ಮ ಹುಬ್ಬಳ್ಳಿಯಲ್ಲಿ ಬೃಹತ್ ಬಂಗಲೆ ಕಟ್ಟಿಸಿದ್ದರು.