Asianet Suvarna News Asianet Suvarna News

ಕೆಲವರು ತಮ್ಮ ಹಿತಾಸಕ್ತಿಗಾಗಿ ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ : ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ

ಲಿಂಗಾಯತ ಸಮಾಜದವರು ಒಗ್ಗಟ್ಟಿನಿಂದ ಇದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒಟ್ಟಾಗಿ ಪಡೆಯಬಹುದು, ಕೆಲವರು ತಮ್ಮ ಹಿತಾಶಕ್ತಿಯಾಗಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.

Some are trying to divide society for their own interests: Trinetra Mahanta Shivayogi Swamiji snr
Author
First Published Dec 26, 2023, 9:47 AM IST

 ಪಿರಿಯಾಪಟ್ಟಣ :  ಲಿಂಗಾಯತ ಸಮಾಜದವರು ಒಗ್ಗಟ್ಟಿನಿಂದ ಇದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒಟ್ಟಾಗಿ ಪಡೆಯಬಹುದು, ಕೆಲವರು ತಮ್ಮ ಹಿತಾಶಕ್ತಿಯಾಗಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲೂಕಿನ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದಲ್ಲಿ ಪ್ರತಿಭಾ ಪುರಸ್ಕಾರ, ಕ್ಯಾಲೆಂಡರ್ ಬಿಡುಗಡೆ ಹಾಗೂ ನಿವೃತ್ತರಿಗೆ ನಡೆದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತಮಗೆ ಮೀಸಲಾತಿ ದೊರಕಲಿ ಎಂಬ ಉದ್ದೇಶದಿಂದ ಸಮಾಜವನ್ನು ವಿಭಾಗ ಮಾಡಲು ಹೊರಟಿದ್ದಾರೆ, ಆದ್ದರಿಂದ ವೀರಶೈವ ಎಲ್ಲ ಪಂಗಡಗಳು ಒಗ್ಗಟ್ಟಿನಿಂದ ವೀರಶೈವ ಲಿಂಗಾಯತ ಸಮಾಜವನ್ನು ಉಳಿಸಬೇಕೆಂದು ತಿಳಿಸಿದರು.

ವಿಜಯಪುರದ ಸಿದ್ಧಲಿಂಗ ಮಠದ ಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಜ್ಞಾನವಂತರಾಗಿ ಮಾಡಿದರೆ ಮಾತ್ರ ಸರ್ಕಾರಿ ಉದ್ಯೋಗ ಸಿಗುತ್ತದೆ. ಆದರೆ ವೀರಶೈವ ಲಿಂಗಾಯತರು ಇಂದಿನ ಯುಗದಲ್ಲಿ ಸಮಸ್ಯೆಗಳ ಒತ್ತಡದಿಂದ ಬಳಲುತ್ತಿದ್ದು, ಒತ್ತಡವನ್ನು ಮೆಟ್ಟುನಿಂತು ಉನ್ನತ ಮಟ್ಟದಲ್ಲಿ ವ್ಯಾಸಂಗ ಮಾಡಿದರೆ ಮಾತ್ರ ಸರ್ಕಾರಿ ನೌಕರಿ ಹಾಗೂ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.

ಹಿರಿಯ ಮುಖಂಡ ಹೊಲದಪ್ಪ ಸಮಾರಂಭ ಉದ್ಘಾಟಿಸಿದರು.

ಮಹೇಶ್ ಕುಮಾರ್ ಆರಾಧ್ಯ ಮಾತನಾಡಿ, ವೀರಶೈವ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕಲಿಸಿದ ವೀರಶೈವ ಸಮಾಜ ಅವನತಿಯನ್ನು ಕಾಣಬೇಕಾಗುತ್ತದೆ ಬಸವಣ್ಣವರು ಹೇಳಿದಂತೆ ಮೇಲುಕೀಲೆಂಬ ಭಾವನೆ ಬಿಟ್ಟು ವೀರಶೈವರು ಸಂಸ್ಕೃತ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ನೌಕರರ ಜಿಲ್ಲಾಧ್ಯಕ್ಷ ಬಸವರಾಜ್ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿವೃತ್ತ ಸಹ ನಿರ್ದೇಶಕರಾದ ಶಿವಮಾದಪ್ಪ ವಿತರಿಸಿ, ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ಮೊಬೈಲ್ಗಳ ಗೀಳು ಬಿಟ್ಟು ಪುಸ್ತಕದ ಗೀಳನ್ನು ಜ್ಞಾನಕ್ಕೆ ತುಂಬಿದರೆ ಅದು ಹೆಚ್ಚಿನ ರೀತಿಯಲ್ಲಿ ಉಪಯೋಗ ಬರುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರು ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿ. ಮಹದೇವಪ್ಪ, ಗೌರವಾಧ್ಯಕ್ಷ ಎಂ. ಮಲ್ಲೇಶ್, ಉಪಾಧ್ಯಕ್ಷ ಕೆ.ಸಿ. ಬೇಬಿ, ಕಾರ್ಯದರ್ಶಿ ಕೆ.ಸಿ. ಮಲ್ಲಿಕಾರ್ಜುನ್, ಖಜಾಂಚಿ ಕೀರ್ತಿಕುಮಾರ್, ತಾಲೂಕು ಸಂಚಾಲಕ ಸಂಗಮೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಸೌಮ್ಯ, ನಿರ್ದೇಶಕರಾದ ಸಂಗಮೇಶ್, ತಿಪ್ಪೇರುದ್ರಸ್ವಾಮಿ, ಶಿವಕುಮಾರ್, ವೀರಭದ್ರಯ್ಯ, ಮೋಹನ್, ಪ್ರಶಾಂತ್, ವೀರೇಶ್, ದಿನೇಶ ಆರಾಧ್ಯ, ಕಲಾವತಿ, ಜಯಂತಿ, ಯುವರಾಜ್, ಮಹೇಶ್ವರಳ್ಳಿ, ರೇವಣ್ಣ, ಶಂಕರ್, ಲಿಂಗಪ್ಪ, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.

Follow Us:
Download App:
  • android
  • ios