ವಿಜಯಪುರ[ಮೇ.18]: ರಜೆಗೆ ಬಂದಿದ್ದ ಯೋಧನೊಬ್ಬ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಭಾರತೀಯ ಸೇನೆಯಲ್ಲಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಶರಣಯ್ಯ ಗುರುಪಾದಯ್ಯ ಮಠಪತಿ(32) ಮೃತ ಯೋಧ. ಬೈಕ್ ಚಲಾಯಿಸುತ್ತಿದ್ದ ಶರಣಯ್ಯ ವಿಜಯಪುರ ಜಿಲ್ಲೆ ತಿಕೋಟಾ ಬಳಿಯ ಸೋಮದೇವರಹಟ್ಟಿ ಬಳಿ ತಲುಪುತ್ತಿದ್ದಂತೆಯೇ ಸ್ಕಿಡ್ ಆಗಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಯೋಧ ಶರಣಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.