ಭೂಮಿ ಒದಗಿಸಿದರೆ ಕಲಬುರಗಿಯಲ್ಲೇ ಸೋಲಾರ್ ಪಾರ್ಕ್: ಕೇಂದ್ರ ಸಚಿವ ಖೂಬಾ
ಕಲಬುರಗಿ ಜನತೆಯ ಒತ್ತಾಯದಂತೆ, ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಸಚಿವ ಶರಣ ಪ್ರಕಾಶ ಪಾಟೀಲ್‌ರವರಿಗೆ ಪತ್ರ ಬರೆದು, ಸೋಲಾರ್ ಪಾರ್ಕ ನಿರ್ಮಾಣಕ್ಕೆ ಅಗತ್ಯ ಜಮೀನು ಒದಗಿಸಿಕೊಡುವಂತೆ ಒತ್ತಾಯಿಸುತ್ತೇನೆ: ಭಗವಂತ ಖೂಬಾ
ಕಲಬುರಗಿ(ಆ.12): ಕಲಬುರಗಿ ಜಿಲ್ಲೆಯಲ್ಲಿ ಸೊಲಾರ್ ಪಾರ್ಕ್ ನಿರ್ಮಿಸಲು ಸಂಪೂರ್ಣ ಸಹಕಾರ ಇದೆ. ಆದರೆ ರಾಜ್ಯ ಸರ್ಕಾರ ಸಹಕರಿಸಿ, ಅಗತ್ಯ ಪ್ರಸ್ತಾವನೆ ಸಿದ್ಧಗೊಳಿಸಿ ಕಳುಹಿಸಬೇಕೆಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕಲಬುರಗಿ ಜಿಲ್ಲೆಯಲ್ಲಿ ಕೇಂದ್ರ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಸಚಿವಾಲಯದಿಂದ ಮಂಜೂರಾಗಿದ್ದ 500 ಮೇ.ವ್ಯಾಟ್ ಸೊಲಾರ್ ಪಾರ್ಕ ಅನ್ನು, ಕಲಬುರಗಿ ಜಿಲ್ಲೆಯ ನದಿಸಿನ್ನೂರ ಫಿರೋಜಾಬಾದ ಕಿರಣಗಿ ವ್ಯಾಪ್ತಿಯ 1551 ಎಕ್ಕರೆ 13 ಗುಂಟೆ ಜಮೀನಿನಲ್ಲಿ ಮಾಡಲು ಉದ್ದೇಶಿಸಲಾಗಿತ್ತು, ಇದರ ಕುರಿತು ಸರ್ಕಾರದ ಅಗತ್ಯ ಪ್ರಕ್ರೀಯೆಗಳು ಕೂಡ ಆಗಿದ್ದವು, ಈ ಯೋಜನೆಯೂ ಕ್ರೇಡಿಲ್ ಸಂಸ್ಥೆಯ ವತಿಯಿಂದ ನಿರ್ಮಿಸಲು ಉದ್ದೇಶಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರು ಭ್ರಷ್ಟಾಚಾರ ಆರೋಪ ಮಾಡಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಆದರೆ ಇದರ ಮಧ್ಯದಲ್ಲಿ ಪಿ.ಎಂ. ಮಿತ್ರಾ ಯೋಜನೆಯಡಿ ಜವಳಿ ಪಾರ್ಕ ಸ್ಥಾಪಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಸರ್ಕಾರ 1000 ಎಕ್ಕರೆ ಜಮೀನು ವರ್ಗಾಯಿಸಿತ್ತು. ಉಳಿದ 551 ಎಕ್ಕರೆ 13 ಗುಂಟೆಯಲ್ಲಿ 500 ಮೆ.ವ್ಯಾ ಸೋಲಾರ್ ಯೋಜನೆಯನ್ನು ನಿರ್ಮಿಸುವಂತೆ ಕ್ರೇಡಿಲ್ ಸಂಸ್ಥೆಗೆ ಸರ್ಕಾರ ಆದೇಶಿಸಿರುತ್ತದೆ.
ಷರತ್ತಿನನ್ವಯ ಕ್ರೇಡಿಲ್ ವತಿಯಿಂದ ಸೌರಪಾರ್ಕ್ ಸ್ಥಾಪನೆಗೆ ವಿವರವಾದ ಯೋಜನಾ ವರದಿಯನ್ನು ಸಿದ್ದಪಡಿಸಿ ಎಂ.ಎನ್.ಆರ್.ಇ ಯವರಿಗೆ 08-10-2021 ರಂದು ಅನುಮೋದನೆಗೆ ಸಲ್ಲಿಸಲಾಗಿತ್ತು, ಆದರೆ ಎಮ್.ಎನ್.ಆರ್.ಇ ಸಚಿವಾಲಯದವರು ಕೆ.ಪಿ.ಟಿ.ಸಿ.ಎಲ್ ಸಬ್ ಸ್ಟೇಷನ್‌ನಲ್ಲಿ 500 ಮೆ.ವ್ಯಾ ಸಾಮರ್ಥ್ಯದ ಇವ್ಯಾಕುವೇಷನ್ ಮಾಡಲು ಸಾಮರ್ಥ್ಯವಿಲ್ಲದೇ ಇರುವ ಪ್ರಯುಕ್ತ ವಿವರವಾದ ಯೋಜನಾ ವರದಿಗೆ ಅನುಮೋದನೆಯನ್ನು ನೀಡಿರುವುದಿಲ್ಲ.
ಆದ್ದರಿಂದ 551 ಎಕ್ಕರೆ 13 ಗುಂಟೆ ಜಮೀನಿನಲ್ಲಿ ಸೋಲಾರ್ ಪಾರ್ಕ ಬದಲಾಗಿ 100 ಮೆ.ವ್ಯಾಟ್ ಸಾಮರ್ಥ್ಯದ ಸೌರ ಘಟಕವನ್ನು ಸ್ಥಾಪಿಸಲು ಕ್ರೇಡಿಲ್ ಸಂಸ್ಥೆಯ ವತಿಯಿಂದ ಬಿಡ್ ಡಾಕುಮೇಂಟಗಳು ತಯ್ಯಾರಿಸಲಾಗಿದೆ, ಕೆ.ಇ.ಆರ್.ಸಿ ಅನುಮೋದನೆ ದೊರೆತ ನಂತರ ಕ್ರೇಡಿಲ್ ನಿಂದ ಟೆಂಡರ್ ಆಹ್ವಾನಿಸಲಾಗುವುದು ಎಂದು ಕೇಂದ್ರ ಸಚಿವ ಭಗವಂತ ಖೂಬಾರವರು ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿ ಜನತೆಯ ಒತ್ತಾಯದಂತೆ, ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಸಚಿವ ಶರಣ ಪ್ರಕಾಶ ಪಾಟೀಲ್‌ರವರಿಗೆ ಪತ್ರ ಬರೆದು, ಸೋಲಾರ್ ಪಾರ್ಕ ನಿರ್ಮಾಣಕ್ಕೆ ಅಗತ್ಯ ಜಮೀನು ಒದಗಿಸಿಕೊಡುವಂತೆ ಒತ್ತಾಯಿಸುತ್ತೇನೆ, ರಾಜ್ಯ ಸರ್ಕಾರದಿಂದ ಭೂಮಿ ಒದಗಿಸಿಕೊಟ್ಟಲ್ಲಿ ಕಲಬುರಗಿಯಲ್ಲಿ ಸೋಲಾರ್ ಪಾರ್ಕ ನಿರ್ಮಿಸುವಲ್ಲಿ ಕೇಂದ್ರದಿಂದ ಮಂಜೂರಾತಿ ಮಾಡಿಸಿಕೊಡುವ ಜವಬ್ದಾರಿ ತಮ್ಮದಾಗಿದೆ ಎಂದು ಜನತೆಗೆ ಭಗವಂತ ಖೂಬಾ ಭರವಸೆ ನೀಡಿದ್ದಾರೆ.