ಕೋಲಾರ [ಡಿ.26]: ಬೆಳಗ್ಗೆ 9 ಗಂಟೆ ಆದರೂ ಕೂಡ ಕೋಲಾರದಲ್ಲಿ ಸೂರ್ಯ ಕಾಣಿಸಿಲ್ಲ. ಬುಧವಾರ ಸಂಜೆಯಿಂದಲೂ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ ಇದೆ. 

ಅತ್ಯಂತ ವಿಶೇಷವಾದ ಕಂಕಣ ಸೂರ್ಯಗ್ರಹಣ ಸಂಭವಿಸಿದ್ದು, ಆದರೆ ಗ್ರಹಣ ವೀಕ್ಷಣೆ ಮಾಡಲು ಕೋಲಾರದಲ್ಲಿ ಮೋಡ ಅಡ್ಡಿಯಾಗಿದೆ. 

ಸಂಪೂರ್ಣ ಮೋಡ ಮುಸುಕಿದ ವಾತಾವರಣ ಇದ್ದು, ಕತ್ತಲು ಆವರಿಸದಂತಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ದೇವಾಲಯಗಳಿಗೆ ಬೀಗ ಹಾಕಲಾಗಿದೆ. ಇಲ್ಲಿನ ಪ್ರಮುಖ ದೇವಾಲಯಗಳಾದ ಕೋಲಾರಮ್ಮ ದೇವಾಲಯ , ಸೋಮೇಶ್ವರ ದೇವಾಲಯ, ಚಿಕ್ಕ ತಿರುಪತಿ , ಕುರುಡುಮಲೆ ಗಣೇಶ ಸೇರಿದಂತೆ ಬಹುತೇಕ ದೇವಾಲಯಗಳಿಗೆ ಬೀಗ ಹಾಕಲಾಗಿದೆ. 

ದೇವರುಗಳಿಗೆ ದರ್ಬೆಗಳಿಂದ ದಿಗ್ಭಂಧನ ಹಾಕಿದ್ದು, ಗ್ರಹಣ ಮುಕ್ತಾಯದ ಬಳಿಕ ಅಂದರೆ 12,30ರ ಬಳಿಕ ದೇವಾಕಯಗಳಲ್ಲಿ ಶುಚಿ ಕಾರ್ಯ ಮಾಡಿ ನಂತರ ದೇವರಿಗೆ ಅಭಿಷೇಕ, ವಿಶೇಷ ಪೂಜಾ ಕಾರ್ಯಗಳನ್ನು ನಡೆಸಿ ಸಾರ್ವಜನಿಕರಿಗೆ ದರ್ಶನ ನೀಡಲಾಗುತ್ತದೆ.