ಮೈಸೂರು.ಗ್ರಾಮಾಂತರ(ಅ.02): ತಮ್ಮ 70ನೇ ಇಳಿ ವಯಸ್ಸಿನಲ್ಲಿಯೂ ಸಮಾಜಸೇವೆ ಮಾಡುವ ಮುಖಾಂತರ ಸ್ಥಳೀಯ ಪಂಚಾಯತಿ ಅಧಿಕಾರಿಗಳಿಗೆ ಕಣ್ಣು ತೆರೆಸುವ ಕಾರ್ಯವನ್ನು ಕುಂದನಹಳ್ಳಿ ಗ್ರಾಮದ ಸಮಾಜ ಸೇವಕ ಶಿವಣ್ಣ ಅವರು ಮಾಡಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಸರ್ಕಾರದ ವತಿಯಿಂದ ಗ್ರಾಮ ನೈರ್ಮಲ್ಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದ್ದರು ಅವು ನೆಪಮಾತ್ರವಾಗಿದದು ಗ್ರಾಮ ಪಂಚಾಯಿತಿ ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ.

ಮೈಸೂರು: ಹಳೆ ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ನೋಡೋ ಹಾಗಿಲ್ಲ

ಪಂಚಾಯಿತಿ ಗಮನಕ್ಕೆ ತಂದಗ್ರೂ ನೋ ರೆಸ್ಪಾನ್ಸ್:

ತಾಲೂಕಿನ ಕುಂದನಹಳ್ಳಿ ಸರ್ಕಲ್‌ ಬಳಿಯ ರಾಜ್ಯ ಹೆದ್ದಾರಿ ಪಕ್ಕದ ಕುಂದನಹಳ್ಳಿ ಜನತಾ ಬಡಾವಣೆಯ ದೇವಸ್ಥಾನದಿಂದ ಮುಖ್ಯ ರಸ್ತೆವರೆಗೆ ರಸ್ತೆಯ ಇಕ್ಕೆಲೆಗಳಲ್ಲಿ ಚರಂಡಿ ಹೂಳು ತುಂಬಿ ಸರಾಗವಾಗಿ ನೀರು ಹರಿದು ಹೋಗದೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಚರಂಡಿಯಲ್ಲಿ ಕಸ ಕಡ್ಡಿ ತುಂಬಿ ನೀರು ಶೇಖರಣೆಗೊಂಡು ಸೊಳ್ಳೆಗಳ ತಾಣವಾಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಸ್ಥಳೀಯ ಪಂಚಾಯಿತಿಗೆ ಸ್ವಚ್ಚಗೊಳಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ.

ರಸ್ತೆಯ ಇಕ್ಕೆಲಗಳನ್ನು ಒಬ್ಬರೇ ಕ್ಲೀನ್ ಮಾಡಿದ್ರು:

ಇದನ್ನು ಮನಗಂಡ ಗ್ರಾಮದ ಸಮಾಜಸೇವಕ ಶಿವಣ್ಣ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನದ ಅಂಗವಾಗಿ ಬೆಳಗಿನಿಂದ ಸಂಜೆಯವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ತ್ಯಾಜ್ಯ ಗಿಡಗಳನ್ನು ಕತ್ತರಿಸಿ ಸಲಕರಣೆಗಳನ್ನು ಹಿಡಿದು ಚರಂಡಿಗೆ ಇಳಿದು ಸ್ವಚ್ಚಗೊಳಿಸಿ ಗ್ರಾಮಸ್ಥರು ಖಾಯಿಲೆಗಳಿಂದ ದೂರವಿರುವ ಹಾಗೆ ನೆಮ್ಮದಿಯ ಜೀವನ ನಡೆಸಲು ಸಹಕರಿಸಿದ್ದಾರೆ.

'ಅಧಿಕಾರಕ್ಕಾಗಿ ಸದನದಲ್ಲಿ ಮಲಗ್ತಾರೆ, ಪ್ರತಿಭಟಿಸ್ತಾರೆ, ಗಲಾಟೆ ಮಾಡ್ತಾರೆ, ಪರಿಹಾರ ತರೋಕೆ ಯಾಕ್ ಮಾಡಲ್ಲಾ..?

ಮುಖ್ಯ ರಸ್ತೆಯ ಬಸ್‌ ನಿಲ್ದಾಣದಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಸ್ವಚ್ಛಗೊಳಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗ್ರಾಮದ ಹ್ಯಾಂಡ್‌ಪಂಪ್‌ (ಬೋರ್‌ವೆಲ್‌) ಸುತ್ತ ಬೆಳೆದಿದ್ದ ಗಿಡಗಂಟೆಗಳನ್ನೂ ಸಹ ಕತ್ತಿರಿಸುವ ಮೂಲಕ ಶ್ರಮದಾನ ಮಾಡಿದ್ದನ್ನು ಸ್ಮರಿಸಬಹುದು.

ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ: ಪ್ರತಾಪ್ ಸಿಂಹ ಗುಡುಗು

ಕುಂದನಹಳ್ಳಿ ಬಡಾವಣೆಯ ಅಂಗನವಾಡಿ ಬಳಿ ಚರಂಡಿ ಕಟ್ಟಿಕೊಂಡು ನೀರು ನಿಂತು ಗಬ್ಬು ವಾಸನೆ ಬರುತ್ತಿದ್ದು ಸೊಳ್ಳೆಗಳು ಹೆಚ್ಚಾಗಿ ಸ್ಥಳೀಯರು ಸಾಂಕ್ರಮಿಕ ರೋಗಗಳಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಹಲವು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ಮೇಲಾಧಿಕಾರಿಗಳು ನಿಗಾ ವಹಿಸಿ ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಬೇಕು ಎಂದು ಸಮಾಜಿಕ ಕಾರ್ಯಕರ್ತ ಕುಂದನಹಳ್ಳಿ ಶಿವಣ್ಣ ಹೇಳಿದ್ದಾರೆ.

-ಬೆಕ್ಕರೆ ಸತೀಶ್‌ ಆರಾಧ್ಯ