ಮೈಸೂರು(ಅ.02): ಬಿಜೆಪಿಯವರು ಅಧಿಕಾರಕ್ಕಾಗಿ ಸದನದಲ್ಲೇ ಮಲಗುತ್ತಾರೆ, ಪ್ರತಿಭಟಿಸುತ್ತಾರೆ, ಗಲಾಟೆ ಮಾಡುತ್ತಾರೆ. ಆದರೆ ನೆರೆ ಸಂತ್ರಸ್ತರ ಪರಿಹಾರಕ್ಕೆ ಇವೆಲ್ಲವನ್ನು ಮಾಡುವುದಿಲ್ಲ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್‌ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದ್ದರೂ ಮಹಿಷ ದಸರಾ ತಡೆಯಲು ಇವರು ಯಾರು? ಅಧಿಕಾರ ಕೊಟ್ಟವರು ಯಾರು? ಮಹಿಷ ಆಚರಣೆಯನ್ನು ನಿಲ್ಲಿಸಿ ಆಚರಣೆಯ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗದ ನಡೆ: ಆರೋಪ

ಭೈರಪ್ಪರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ

ದೊಡ್ಡ ಬುದ್ಧಿಜೀವಿಯಾದ ಡಾ.ಎಸ್‌.ಎಲ್‌. ಭೈರಪ್ಪ ಅವರಿಂದ ಹೆಣ್ಣು ಮಕ್ಕಳ ಬಗೆಗಿನ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಅವರ ಮಾತುಗಳು ಕೆಳವರ್ಗದ ಹೆಣ್ಣು ಮಕ್ಕಳು ಆತ್ಮಸ್ಥೈರ್ಯ ಕುಗ್ಗಿಸುವಂತವಾಗಿವೆ. ಅಂತಹ ವೇದಿಕೆಯಲ್ಲಿ ಈ ರೀತಿಯಾಗಿ ಮಾತಾಡುವ ಅವಶ್ಯಕತೆ ಇರಲಿಲ್ಲ ಎಂದು ಕಿಡಿಕಾರಿದರು.

 ನೆರೆ ಪರಿಹಾರ ತರುವಲ್ಲಿ ‘ಪ್ರತಾಪ’ ತೋರಿಸಲಿ: ಸಂಸದಗೆ ಟಾಂಗ್..