Asianet Suvarna News Asianet Suvarna News

ಎಲ್ಲಿದ್ದೀರಾ ಜನ ಪ್ರತಿನಿಧಿಗಳೇ?: #WeNeedEmergencyHospitalInKodagu

ಉತ್ತರ ಕನ್ನಡ ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಸೋಶಿಯಲ್ ಮೀಡಿಯಾ ಅಭಿಯಾನ ಗಮನಿಸಿ ಸಿಎಂ ಕುಮಾರಸ್ವಾಮಿ  ಗಮನಕ್ಕೆ ಬಂದಿದ್ದು ಆಯ್ತು. ಈಗ ಮತ್ತೊಂದು ಜಿಲ್ಲೆಗೆ ಆಸ್ಪತ್ರೆ ಬೇಕು ಎನ್ನುವ ಅಭಿಯಾನ ಆರಂಭವಾಗಿದ್ದು, ಟ್ವಿಟರ್‌ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚಚರಿಸುವ ಅಭಿಯಾನ ಶುರುವಾಗಿದೆ.

social media campaign for Multi Specialty hospital In Kadagu
Author
Bengaluru, First Published Jun 13, 2019, 11:59 AM IST

ಕೊಡಗು, (ಜೂನ್.13): ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಮುಂದಿಟ್ಟುಕೊಂಡು ಕೊಡಗಿನಲ್ಲೂ ಟ್ವಿಟರ್‌ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. 

ಐಶಾರಾಮಿ ರೆಸಾರ್ಟ್, ಹೋಮ್ ಸ್ಟೇ ಇದೆ. ಆದ್ರೆ ಸುಸಜ್ಜಿತ ಆಸ್ಪತ್ರೆ ಇಲ್ಲ. #WeNeedEmergencyHospitalInKodagu ಎಂದು ಅಭಿಯಾನ ಆರಂಭವಾಗಿದೆ.

ಉತ್ತರ ಕನ್ನಡಕ್ಕೆ ಒಂದಲ್ಲಾ 2 ಆಸ್ಪತ್ರೆ ಬೇಕು...ಕಾರಣಗಳು ಇಲ್ಲಿವೆ!

ಮುಖ್ಯಮಂತ್ರಿ, ಮೈಸೂರು-ಕೊಡಗು ಸಂಸದ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳನ್ನು ಎಚ್ಚರಿಸಲು  'ವಿ ನೀಡ್‌ ಎಮರ್ಜೆನ್ಸಿ ಹಾಸ್ಪಿಟಲ್‌ ಇನ್‌ ಕೊಡಗು' ಎಂಬ ಹ್ಯಾಶ್ ಟ್ಯಾಗ್‌ ಅಡಿಯಲ್ಲಿ ಟ್ವಿಟರ್‌ ಅಭಿಯಾನ ಶುರುವಾಗಿದ್ದು, ಜಿಲ್ಲೆಯ ಯುವ ಜನತೆ ಈ ಅಭಿಯಾನಕ್ಕೆ ದೊಡ್ಡ ಪ್ರಮಾಣದಲ್ಲಿ ಕೈ ಜೋಡಿಸಿದ್ದಾರೆ.

ಟ್ವಿಟ್ಟರ್ ಖಾತೆ ಇಲ್ಲದವರು ಫೇಸ್‌ಬುಕ್ ಹಾಗೂ ವಾಟ್ಸಪ್‌ಗಳಲ್ಲಿ ಜಿಲ್ಲೆಯ ಯುವ ಸಮೂಹ ದೊಡ್ಡ ಸಂಖ್ಯೆಯಲ್ಲಿ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಮೊನ್ನೇ ಅಷ್ಟೇ ಉತ್ತರ ಕನ್ನಡ ಜಿಲ್ಲೆಗೊಂದು ಸೂಪರ್ ಸ್ಪೆಷಲ್ ಆಸ್ಪತ್ರೆ ಬೇಕು ಎನ್ನುವ ಅಭಿಯಾನ ಮಾಡಲಾಗಿತ್ತು. ಇದಕ್ಕೆ ಸ್ವತಃ ಸಿಎಂ ಕುಮಾರಸ್ವಾಮಿ ಅವರು ಸಹ ಟ್ವೀಟ್ ಮಾಡುವ ಮೂಲಕ ಸ್ಪಂದಿಸಿದ್ದರು. 

ಮೂಲಭೂತ ಸೌಕರ್ಯಗಳನ್ನು ಈ ರೀತಿಯ  ಅಭಿಯಾನ ಮೂಲಕ ಕೇಳಿ ಪಡೆಯುವ ಅನಿವಾರ್ಯತೆ ಎದುರಾಗಿರುವುದು ದುರಂತದ ಸಂಗತಿ. ಜನರಿಗೆ ಮೂಭೂತ ಸೌಕರ್ಯಗಳು ಏನೆಲ್ಲ ಬೇಕು ಎನ್ನುವ ಕೊಂಚ ಅರಿವು ಜನ ಪ್ರತಿನಿಧಿಗಳಿಗಿಲ್ಲವೇ..?

Follow Us:
Download App:
  • android
  • ios