ಶಿರಸಿ/ಬೆಂಗಳೂರು[ಜೂ. 09]  ಉತ್ತರ ಕನ್ನಡ ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಸೋಶಿಯಲ್ ಮೀಡಿಯಾ ಅಭಿಯಾನ ಗಮನಿಸಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ವಿಚಾರ ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿರುವುದು ಸ್ವಾಗತಾರ್ಹ. ಆದರೆ ಉತ್ತರ ಕನ್ನಡವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ್ಲಿ ಹಲವರು ಪತ್ರ ಬರೆಯುತ್ತೇನೆ ಎಂದೊದ್ದರೆ ಕೆಲವರು ಚಕಾರ ಎತ್ತದಿರುವುದು ಜಿಲ್ಲೆಯ ಜನರ ಪಾಲಿನ ದುರಂತವೇ ಸರಿ.

ದೊಡ್ಡ ಜಿಲ್ಲೆ: ಅಷ್ಟಾಗಿ ಉತ್ತರ ಕನ್ನಡಕ್ಕೆ ಒಂದು ಸುಸಜ್ಜಿತ ಆಸ್ಪತ್ರೆ ಸಾಕಾಗುತ್ತದೆಯೇ? ಖಂಡಿತ ಇಲ್ಲ.  ಭೌಗೋಳಿಕವಾಗಿ ರಾಜ್ಯದಲ್ಲಿ  5 ನೇ ಅತಿದೊಡ್ಡ ಜಿಲ್ಲೆ, ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಎಂಬ ಖ್ಯಾತಿಯೂ ಇದೆ. 

ಒಂದು ಸಣ್ಣ ಪರಿಚಯ: ಅದೆಷ್ಟೋ ಜನರು ಉತ್ತರ ಕನ್ನಡ ಎಂಬ ಶಬ್ದವನ್ನು ಉತ್ತರ ಕರ್ನಾಟಕ ಎಂದು ತಪ್ಪಾಗಿ ಕೇಳಿಸಿಕೊಳ್ಳುವವರು ಇದ್ದಾರೆ. ಬ್ರಿಟಷರ ಕಾಲದಲ್ಲಿ ಕಾರವಾರ ಜಿಲ್ಲೆ ಎಂಬ ಹೆಸರು ಇದ್ದಿದ್ದನ್ನು ನಂತರ ಉತ್ತರ ಕನ್ನಡ ಎಂಬುದಾಗಿ ಬದಲಾವಣೆ ಮಾಡಿಕೊಳ್ಳಲಾಯಿತು. ಜಿಲ್ಲೆಯಲ್ಲಿ ಒಟ್ಟೂ ಹನ್ನೆರಡು ತಾಲ್ಲೂಕುಗಳಿವೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಇವು ಕರಾವಳಿಯ ತಾಲೂಕುಗಳಾದರೆ; ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಮುಂಡಗೋಡು, ದಾಂಡೇಲಿ ಮತ್ತು ಜೊಯಿಡಾ ಇವು ಘಟ್ಟದ ಮೇಲಿನ ತಾಲೂಕುಗಳು.

ಮಾಂಸಾಹಾರಿಗಳಿಗಿಂತ ಪುಳ್ಚಾರ್‌ಗಳೇ ಆರೋಗ್ಯವಂತರು: ಆಕ್ಸ್‌ಫರ್ಡ್

ಗಡಿ ಜಿಲ್ಲೆಗಳು: ಶಿವಮೊಗ್ಗ, ಹುಬ್ಬಳ್ಳಿ ಧಾರವಾಡ. ಬೆಳಗಾವಿ, ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೂ ಇನ್ನೊಂದು ಕಡೆ ಗೋವಾ ರಾಜ್ಯದ ಗಡಿಯನ್ನು ಹೊಂದಿದೆ.

ಅಪಘಾತ ಮೂಲ ಮಹಾರಾಷ್ಟ್ರದ ’ಪನ್ವೇಲಿ’ಯಿಂದ ದಕ್ಷಿಣದ ಕನ್ಯಾಕುಮಾರಿಯನ್ನು ತಲುಪುವ ರಾಷ್ಟ್ರೀಯ ಹೆದ್ದಾರಿ ’66’ ಉತ್ತರ ಕನ್ನಡದ ಕರಾವಳಿಯ ಜಿಲ್ಲೆಗಳ ಮೇಲೆ ದು ಹೋಗುತ್ತದೆ. ಕರ್ನಾಟಕ ಸರ್ಕಾರವು NHAI (National Highway Authority of India) ವಿನಂತಿಯ ಮೇರೆಗೆ 60 ಮೀಟರ್ ಅಗಲದ ಚತುಷ್ಪಥ ರಸ್ತೆಗೆ ಒಪ್ಪಿಗೆ ನೀಡಿದ ನಂತರ ಶುರುವಾದ ರಸ್ತೆಯ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು ಹೆದ್ದಾರಿ ಅಪಘಾತಗಳು ಹೆಚ್ಚಲು ಮತ್ತೊಂದು ಕಾರಣವಾಗಿದೆ.

ಪಶ್ಚಿಮ ಘಟ್ಟಕ್ಕೆ ಸಮಾನಾಂತರವಾಗಿ ಸಾಗುವ ಈ ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಗುಡ್ಡ ಬೆಟ್ಟಗಳು ಇರುವುದು ತೀರಾ ಮಾಮೂಲು. ರಸ್ತೆಯಲ್ಲಿ ಚಲಿಸುವಾಗ ಒಂದು ಕಡೆ ಪಶ್ಚಿಮ ಘಟ್ಟದ ಸಾಲು ಇನ್ನೊಂದು ಕಡೆ ನಸಿ ಮತ್ತು ಸಮುದ್ರ. ಹೆದ್ದಾರಿ ಅಗಲೀಕರಣಕ್ಕೆ ಗುಡ್ಡದ ತಳ ಬಗೆಯುವುದು ಅನಿವಾರ್ಯ. ಜೋರು ಮಳೆಗೆ ಗುಡ್ಡ ಕುಸಿದು ಕೆಳಗಿನ ಮನೆಗಳ ಮೇಲೆ ಬೀಳುವುದು ಸಾಮಾನ್ಯ.

ಹೆದ್ದಾರಿ ಕಾಮಗಾರಿಯ ‘ತಿರುವು ತೆಗೆದುಕೊಳ್ಳಿ;’ ಬೋರ್ಡ್ ಗಳು ಅದೆಷ್ಟೋ ಜೀವಗಳನ್ನೆ ತೆಗೆದುಕೊಂಡು ಹೋಗಿವೆ. ಅಪಘಾತ ಸ್ಥಳದಿಂದ ಗೋವಾಕ್ಕೋ, ಮಂಗಳೂರಿಗೋ., ಹುಬ್ಬಳ್ಳಿಗೋ, ಮಣಿಪಾಲಕ್ಕೋ.. ಸೇರಿಸುವಷ್ಟರಲ್ಲಿ ಜೀವವೇ ಹಾರಿಹೋಗಿರುತ್ತದೆ.

ಜೋರು ಮಳೆ ಸಾಕಷ್ಟು ಕಾಯಿಲೆ: ಚಿಕುನ್ ಗುನ್ಯಾ, ಸಿಡುಬು, ಮಂಗನ ಕಾಯಿಲೆ ಇಂಥವುಗಳನ್ನು ಮಾತ್ರ ಕಂಡಿದ್ದ ಜಿಲ್ಲೆಯ ಜನರನ್ನು ಇತ್ತಿಚೆಗೆ ಬಹಳವಾಗಿ ಕಾಡುತ್ತಿರುವುದು ಕ್ಯಾನ್ಸರ್! ಕೈಗಾ ಘಟಕ ಕಾರಣ ಎಂಬ ಕೂಗು ಇದೆ. ಆದರೆ ದಾಖಲೆಗಳು ಪುಷ್ಟೀಕರಿಸಿಲ್ಲ.

ಒಂದು ಆಸ್ಪತ್ರೆ ಸಾಕೆ? ಒಂದಾದರೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿ ಎಂಬ ಆಶಯದಲ್ಲಿ ಅಭಿಯಾನ ಹುಟ್ಟಿಕೊಂಡರೂ ನಿಜಕ್ಕೂ ಒಂದು ಆಸ್ಪತ್ರೆ ಸಾಕೆ? ಖಂಡಿತ ಇಲ್ಲ ಘಟ್ಟದ ಮೇಲೊಂದು[ ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಮುಂಡಗೋಡು, ದಾಂಡೇಲಿ ಮತ್ತು ಜೊಯಿಡಾ ] ಘಟ್ಟದ ಕೆಳಗಗೊಂದು [ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ]  ಆಸ್ಪತ್ರೆ ಬೇಕೇ ಬೇಕು.

ಅಭಿಯಾನ ನಿಲ್ಲಲ್ಲ: ಒಂದು ದಿನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡಿ ಮುಗಿಸುವುದು ಬೇಡ. ಸ್ಷಷ್ಟ ಆದೇಶ ಹೊರಗೆ ಬರುವವರೆಗೆ ಪತ್ರ ಚಳವಳಿ ಆರಂಭಿಸೋಣ ಎಂಬ ಕೂಗು ಕೇಳಿ ಬಂದಿದೆ.

ಸರಕಾರವೇ ಆಗಲಿ ಅಥವಾ ಖಾಸಗಿ ಮತ್ತು ಸರಕಾರದ ಸಹಭಾಗಿತ್ವದಲ್ಲಿಯೇ ಆಗಲಿ ತುರ್ತಾಗಿ ಒಂದು ಅಲ್ಲ ಎರಡು ಸುಸಜ್ಜಿತ ಆಸ್ಪತ್ರೆ ಉತ್ತರ ಕನ್ನಡದಲ್ಲಿ ನಿರ್ಮಾಣವಾಗಲಿ ಎಂಬುದು ಎಲ್ಲರ ಆಶಯ.