Asianet Suvarna News Asianet Suvarna News

ಲಾಕ್‌ಡೌನ್‌ನಿಂದ ಹೊರಗಡೆ ಸುಳಿಯದ ಜನ: ತಹಸೀಲ್ದಾರ್‌ ಕಚೇರಿಗೆ ನಾಗರಹಾವು ಎಂಟ್ರಿ..!

ತಹಸೀಲ್ದಾರ್‌ ಕಚೇರಿಯಲ್ಲಿ ನಾಗರ ಹಾವು| ಕಳೆದ ಒಂದೂವರೆ ತಿಂಗಳಿನಿಂದ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಜನ ಸಂದಣಿ ಇರಲಿ​ಲ್ಲ| ಇದರಿಂದಾಗಿ ಕಚೇರಿಯ ಮೇಲಂತಸ್ತಿಗೆ ಹೋಗುವ ಮೆಟ್ಟಿಲು ಕೆಳಗೆ ಹಾವು ಅವಿತುಕೊಂಡಿತ್ತು|

Snake Entry Government Office at Gangavati on Koppal district during LockDown
Author
Bengaluru, First Published Apr 29, 2020, 7:47 AM IST

ಗಂಗಾವತಿ(ಏ.29): ಆನೆಗೊಂದಿ ಮಾರ್ಗದಲ್ಲಿರುವ ತಹಸೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ನಾಗರ ಹಾವು ಕಾಣಿಸಿಗೊಂಡಿದ್ದು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. 

ಕಳೆದ ಒಂದೂವರೆ ತಿಂಗಳಿನಿಂದ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಜನ ಸಂದಣಿ ಇರಲಿ​ಲ್ಲ. ಇದರಿಂದಾಗಿ ಕಚೇರಿಯ ಮೇಲಂತಸ್ತಿಗೆ ಹೋಗುವ ಮೆಟ್ಟಿಲು ಕೆಳಗೆ ಹಾವು ಅವಿತುಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಉರಗ ಪ್ರೇಮಿ ರಾಘವೇಂದ್ರ ಶಿರೆಗೇರಿ ಅವರನ್ನು ಕರೆಯಿಸಿ ಸೆರೆ ಹಿಡಿಸಿದ್ದಾರೆ. 

ಕೊರೋನಾ ಕಾಟ: ರೋಡ್‌ನಲ್ಲಿ ಗರಿ ಗರಿ ನೋಟ್‌ ನೋಟ್‌ ಬಿದ್ರೂ ಮುಟ್ಟದ ಜನ..!

ದಿನ ನಿತ್ಯ ತಹಸೀಲ್ದಾರ್‌ ಕಚೇರಿಯಲ್ಲಿ ಹಾವು-ಚೇಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಸಿಬ್ಬಂದಿ ಭಯಭೀತರಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಜನ ಸಂದಣಿ ಇರಲಿ​ಲ್ಲ. ಇದರಿಂದಾಗಿ ಕಚೇರಿಯ ಮೇಲಂತಸ್ತಿಗೆ ಹೋಗುವ ಮೆಟ್ಟಿಲು ಕೆಳಗೆ ಹಾವು ಅವಿತುಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಉರಗ ಪ್ರೇಮಿ ರಾಘವೇಂದ್ರ ಶಿರೆಗೇರಿ ಅವರನ್ನು ಕರೆಯಿಸಿ ಸೆರೆ ಹಿಡಿಸಿದ್ದಾರೆ. 

ತಹಸೀಲ್ದಾರ್‌ ಕಚೇರಿ ಸುತ್ತ ಕಸ-ಕಡ್ಡಿಗಳು ಹೆಚ್ಚಾಗಿ ಬೆಳೆದಿದ್ದರಿಂದ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಸಿಬ್ಬಂದಿ ದೂರಿದ್ದಾರೆ.
 

Follow Us:
Download App:
  • android
  • ios