ಗಂಗಾವತಿ(ಏ.22): ಪಟ್ಟಣದಲ್ಲಿ ರಸ್ತೆಯ ಮೇಲೆ ನೋಟುಗಳು ಬಿದ್ದಿರುವುದನ್ನು ಕಂಡು ಜನರು ಬೆಚ್ಚಿಬಿದ್ದಿದ್ದು, ಇದರ ಹಿಂದೆ ಕೊರೋನಾ ಮಹಾಮಾರಿ ಹರಡುವ ತಂತ್ರವೇನಾದರೂ ಅಡಗಿದೆಯಾ ಎನ್ನುವ ಆತಂಕ ಅವರನ್ನು ಕಾಡುತ್ತಿದೆ.

ಜಯನಗರದಲ್ಲಿ 100 ಮುಖಬೆಲೆಯ ಐದು ನೋಟುಗಳು ರಸ್ತೆಯುದ್ದಕ್ಕೂ ಬಿದ್ದಿದ್ದವು. ಆದರೆ ಆ ನೋಟುಗಳನ್ನು ಯಾರು ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಲೇ ಇಲ್ಲ. ನನ್ನ ನೋಟುಗಳು ಎಂದು ಯಾರು ಬರಲೇ ಇಲ್ಲ. ಒಂದರ್ಥದಲ್ಲಿ ಬಾಂಬ್ಬಿದ್ದಂತೆ ಜನರು ಬೆಚ್ಚಿ ಬಿದ್ದಿದ್ದರು.

ಪೊಲೀಸರ ಕಣ್ತಪ್ಪಿಸಿ ಜನರ ಓಡಾಟ: ಗಂಗಾವತಿಯಲ್ಲಿ ದ್ರೋಣ್‌ ಕಣ್ಗಾವಲು

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ವೆಂಕಟಸ್ವಾಮಿ ಹಾಗೂ ಸಿಬ್ಬಂದಿಯೂ ನೇರವಾಗಿ ನೋಟು ಮುಟ್ಟುವ ಸಾಹಸ ಮಾಡಲಿಲ್ಲ. ಯಾರಾದರೋ ಕೊರೋನಾ ಹರಡುವುದಕ್ಕೆ ಮಾಡಿರಬಹುದು ಎನ್ನುವ ಜನರ ಅನಿಸಿಕೆಯಿಂದಾಗಿ ಅವುಗಳ ಮೇಲೆ ಸ್ಯಾನಿಟೈಸರ್ಹಾಕಿ, ವಶಪಡಿಸಿಕೊಂಡರು. ಅವುಗಳನ್ನಿಗ ಗಂಗಾವತಿ ನಗರ ಠಾಣೆಯಲ್ಲಿ ಇಡಲಾಗಿದೆ.

ನಾಲ್ಕಾರು ದಿನಗಳಿಂದ ಆಗಾಗ ಇಂಥ ಪ್ರಕರಣಗಳು ನಡೆಯುತ್ತಿದ್ದು, ಇದರ ಸತ್ಯಾಸತ್ಯತೆ ಏನು ಎನ್ನುವುದನ್ನು ಪೊಲೀಸರು ಪತ್ತೆ ಮಾಡಬೇಕಾಗಿದೆ.ನಗರದಲ್ಲಿ ನೋಟುಗಳನ್ನು ಬಿಸಾಡಿದ್ದನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ನಗರಠಾಣೆ ಮುನಿರಾಬಾದ್ಪಿಐ ವೆಂಕಟಸ್ವಾಮಿ ಅವರು ಹೇಳಿದ್ದಾರೆ.