ಶಿವಮೊಗ್ಗ, (ಜೂ.27) : ಶಿವಮೊಗ್ಗ ಜಿಲ್ಲೆಯಾದ್ಯಂತ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇನ್ನು ಮುಂದೆ ಧೂಮಪಾನ ನಿಷೇಧಿಸಲಾಗಿದೆ. ಈ ಬಗ್ಗೆ  ಅಬಕಾರಿ ಇಲಾಖೆ  ಆದೇಶ ಹೊರಡಿಸಿದೆ.

ಧೂಮಪಾನ ಮಾಡದವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೋಟ್ಪಾ ಕಾಯಿದೆ ಸೆಕ್ಷನ್ 4ನ್ನು ಅಬಕಾರಿ ಸನ್ನದುಗಳಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಹಾಗು ಬಾರ್ ಮತ್ತು ರೆಸ್ಟೋರೆಂಟ್, ಪಬ್, ಕ್ಲಬ್ ಮತ್ತು ಹೊಟೇಲ್‍ಗಳನ್ನು ‘ಧೂಮಪಾನ ಮುಕ್ತ’ ಮಾಡುವ ನಿಟ್ಟಿನಲ್ಲಿ ರಾಜ್ಯ ಅಬಕಾರಿ ಆಯುಕ್ತರು ಹಾಗು ಜಿಲ್ಲಾಧಿಕಾರಿಗಳು ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಆ ಸಿಗರೇಟ್ ಬಿಟ್ಟು ಇ-ಸಿಗರೇಟ್ ಸೇದಿದಾತನಿಗೆ ಸಿಕ್ಕ ಪ್ರತಿಫಲ!

ಉಪ ಆಯುಕ್ತರಾದ ಶ್ರೀ. ಬಸವರಾಜ್ ಈ ಬಗ್ಗೆ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆಯು ಮಾನ್ಯ ಅಬಕಾರಿ ಆಯುಕ್ತರ ಆದೇಶ ಹಾಗು ಸೂಚನೆಯ ಮೇರೆಗೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದರು.

ಧೂಮಪಾನ ಮಾಡದವರ ಆರೋಗ್ಯ ಕಾಪಾಡುವುದು ನಮ್ಮ ಧ್ಯೇಯವಾಗಿದೆ ಮತ್ತು ಕಾನೂನು ಪಾಲನೆಯಾಗುವುದೂ ಮುಖ್ಯ. ಇನ್ನು ಮುಂದೆ ಜಿಲ್ಲೆಯಲ್ಲಿನ ಸನ್ನದು ಗಳಲ್ಲಿ ಧೂಮಪಾನ ಮಾಡುವುದಕ್ಕೆ ಅವಕಾಶ ನೀಡದಿರುವಂತೆ ಎಲ್ಲಾ ಸನ್ನದುಗಳಿಗೆ ಸೂಚಿಸುವಂತೆ ಅಧಿಕಾರಿಗಳಿಗೆ ತಿಳುವಳಿಕೆ ನೀಡಲಾಗಿದೆ. 

ಮುಂದುವರಿದಂತೆ, ಧೂಮಪಾನ ವಲಯಗಳನ್ನು ಕಾನೂನಾತ್ಮಕವಾಗಿ ಸ್ಥಾಪಿಸಲು ಸ್ಥಳೀಯ ಪಾಲಿಕೆ ಅಥವಾ ನಗರ ಸಭೆಗಳಿಂದ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.