ಸ್ಮಾರ್ಟ್ ಸಿಟಿ ಪ್ರಗ​ತಿ: ರಾಷ್ಟ್ರ​ಮ​ಟ್ಟ​ದಲ್ಲಿ ಶಿವ​ಮೊ​ಗ್ಗಕ್ಕೆ 10ನೇ Rank ರಾಜ್ಯ​ದಲ್ಲಿ 2ನೇ ಸ್ಥಾನ: ಯೋಜನೆ ವ್ಯವ​ಸ್ಥಾಪಕ ನಿರ್ದೇ​ಶಕ ಚಿದಾ​ನಂದ ವಟಾರೆ ಮಾಹಿತಿ

ಶಿವಮೊಗ್ಗ (ಆ. 13) : ಸತತವಾಗಿ ಎರಡು ವರ್ಷ ಕೋವಿಡ್‌ ಹಾವ​ಳಿ​ಯಿಂದಾ​ಗಿ ಕಾಮಗಾರಿಗಳಿಗೆ ಅಡ್ಡಿಯಾಗಿತ್ತು. ಈ ಹಿನ್ನೆಲೆ ಕೇಂದ್ರ ಸರ್ಕಾರ ಸ್ಮಾರ್ಟ್ಸಿಟಿ ಯೋಜನೆ ಕಾಲಾವಧಿಯನ್ನು ಒಂದು ವರ್ಷ ಎಂದರೆ ಜೂನ್‌-2023ರ ವರೆಗೆ ವಿಸ್ತರಿಸಿದೆ ಎಂದುಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ್‌ ವಟಾರೆ ಹೇಳಿ​ದರು.ಸ್ಮಾರ್ಟ್ಸಿಟಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವ​ರು, ರಾಷ್ಟ್ರಮಟ್ಟದಲ್ಲಿ ಶಿವಮೊಗ್ಗಸ್ಮಾರ್ಟ್ ಸಿಟಿಯು 2022ರಲ್ಲಿದ್ದಂತೆ ಪ್ರಗತಿಯಲ್ಲಿ 10ನೇ ರಾರ‍ಯಕಿಂಗ್‌ನಲ್ಲಿದ್ದು, ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಸ್ಮಾರ್ಟ್ ಸಿಟಿ ಯೋಜನೆ ಅನ್ವಯ ಒಟ್ಟು .965.72 ಕೋಟಿ ಅಂದಾಜಿನಲ್ಲಿ 71 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅದರಲ್ಲಿ ಈವರೆಗೆ 47 ಕಾಮಗಾರಿಗಳು ಪೂರ್ಣಗೊಂಡಿವೆ. 24 ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿದ್ದು, ಈವರೆಗೆ ಶೇ.79.20ರಷ್ಟುಭೌತಿಕ ಪ್ರಗತಿ ಹಾಗೂ ಶೇ.72.19 ರಷ್ಟುಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.

Shivamogga: ದೇವಸ್ಥಾನ ಉಳಿಸಲು ಹೋರಾಡಿದ ನಾಗರ ಹಾವು ಕೊಂದವರ ವಿರುದ್ಧ FIR

ಇನ್ನು ಈವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ 71 ಕಾಮಗಾರಿಗಳು ಕೈಗೆತ್ತಿಗೊಳ್ಳಲಾಗಿದೆ. .789.15 ಕೋಟಿ ಮಂಜೂರಾಗಿದೆ. ಇದರಲ್ಲಿ ಈವರೆಗೆ .721.89 ಕೊಟಿ ವೆಚ್ಚ ಮಾಡಲಾಗಿದೆ. .522.11 ಕೋಟಿ ಅಂದಾಜು ವೆಚ್ಚದಲ್ಲಿ ಒಟ್ಟು 110 ಕಿ.ಮೀ ರಸ್ತೆ ಅಭಿವೃದ್ಧಿ, .21.38 ಕೋಟಿ ವೆಚ್ಚದಲ್ಲಿ ಒಟ್ಟು 113 ಕನ್ಸರ್ವೆನ್ಸಿ ಅಭಿವೃದ್ಧಿ, .145.27 ಕೋಟಿ ವೆಚ್ಚದಲ್ಲಿ ಹಸಿರೀಕರಣ ಮತ್ತು ಪಾರ್ಕ್ಗಳ ಅಭಿವೃದ್ಧಿ, .71.7 ಕೋಟಿ ವೆಚ್ಚದಲ್ಲಿ ಒಟ್ಟು 6 ಸಂಯೋಜಿತ ಆಜ್ಞೆ ನಿಯಂತ್ರಣ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಯೋಜನೆಗಳು, .21.9 ಕೋಟಿ ವೆಚ್ಚದಲ್ಲಿ ನಗರದ 3 ಪಾರಂಪರಿಕ ಕಟ್ಟಡಗಳ ಅಭಿವೃದ್ಧಿ, .101.67 ಕೋಟಿ ಅಂದಾಜು ಮೊತ್ತದಲ್ಲಿ ಬಹುಹಂತದ ವಾಹನ ಪಾರ್ಕಿಂಗ್‌, ಹಾಕರ್ಸ್‌ ಝೋನ್‌, ಖಾಸಗಿ ಬಸ್‌ ಸ್ಟಾಂಡ್‌ ನವೀಕರಣ ಇತ್ಯಾದಿ 14 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನೋಡುತ್ತೇವೆ, ಮಾಡುತ್ತೇವೆ: ಸ್ಮಾರ್ಟ್ ಸಿಟಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ತೃಪ್ತಿ ಇದೆಯೋ, ಇಲ್ಲವೋ ಎಂಬುದಕ್ಕೆ ಸರಿಯಾದ ಉತ್ತರ ಇಲ್ಲ, ಕಳಪೆ ಕಾಮಗಾರಿಯಿಂದಾಗಿ ಜನ ನಾನಾ ಸಮಸ್ಯೆ ಎದುರಿಸುತ್ತಿದ್ದರೂ ಸಮಸ್ಯೆ ಬಗ್ಗೆ ಗಮನ ನೀಡಿಲ್ಲ. ನಗರದಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಇನ್ನೊಂದು ವರ್ಷದಲ್ಲಿ ಕಾಮಗಾರಿಗಳು ಮುಗಿಯುತ್ತವೆ. ಇದು ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ್‌ ವಟಾರೆ ಅವರ ಉತ್ತರ.

ಹೀಗಿರುವಾಗ ಶುಕ್ರವಾರ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಜನೆ ವ್ಯವಸ್ಥಾಪಕ ಚಿದಾನಂದ್‌ ವಟಾರೆ ಅವರು ಸ್ಮಾರ್ಟ್ಸಿಟಿ ಕಾಮಗಾರಿಗಳ ಕುರಿತು ತಮ್ಮ ಎಂಜಿನಿಯರ್‌ಗಳ ಪರ ನಿಂತು ಸಮಜಾಯಿಷಿ ನೀಡಿದರೆ ವಿನಾ ಸ್ಮಾರ್ಚ್‌ಸಿಟಿ ಕಾಮಗಾರಿಗಳ ಅಧ್ವಾನ ಸರಿ​ಪ​ಡಿ​ಸು​ವ ಬಗ್ಗೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ಖಚಿತ ಮಾಹಿತಿ ನೀಡಲಿಲ್ಲ. ಈಗಾಗಲೇ ನಡೆದಿರುವ ಕಾಮಗಾರಿಗಳು ಕಳಪೆಯಾಗಿವೆ ಎಂದು ನಾಗರಿಕ ಹಿತರಕ್ಷಣ ವೇದಿಕೆಯೂ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದೆ. ಇಷ್ಟುದಿನ ಸ್ಮಾರ್ಟ್ ಸಿಟಿ ಕಚೇರಿಗೆ ಸೀಮಿತವಾಗಿದ್ದ ಅವರ ಪ್ರತಿಭಟನೆ ಈಗ ಜಿಲ್ಲಾಧಿಕಾರಿ ಕಚೇರಿವರೆಗೆ ವಿಸ್ತರಿಸಿದೆ. ಈ ಬಗ್ಗೆ ಕೇಳಿದರೆ ಎಲ್ಲ ಕಾಮಗಾರಿಗಳನ್ನು ನಿಯಮ ಪ್ರಕಾರವೇ ಮಾಡಿದ್ದೇವೆ. ಸ್ಮಾರ್ಚ್‌ಸಿಟಿ ಯೋಜನೆಯ ಮಾರ್ಗಸೂಚಿಯಂತೆ ಕಾಮಗಾರಿ ಮಾಡುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಶಿವಮೊಗ್ಗದಲ್ಲಿ ನಗರದಲ್ಲಿ 22 ಸಾವಿರ ಎಲ್‌ಇಡಿ ದೀಪ ಅಳವಡಿಕೆ: ಸಚಿವ ಭೈರತಿ ಬಸವರಾಜ್

ಕಾಮಗಾರಿ ಆರಂಭವಾಗಿನಿಂದ ಕಾಮಗಾರಿ ನಡೆಸುವ ಸ್ಥಳದಲ್ಲಿ ಕಾಮಗಾರಿ ಕುರಿತು ಯಾವ ಫಲಕಗಳು ಹಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅಲ್ಲಿ ಹಾಕಿದೀವಿ, ಇಲ್ಲಿ ಹಾಕಿದೀವಿ. ಬೇಕಾದರೆ ಇನ್ನೊಮ್ಮೆ ಹಾಕಿಸುತ್ತೇವೆ. ಇದಕ್ಕೆ ಯಾವುದೇ ತೊಂದರೆ ಇಲ್ಲ. ಎಲ್ಲೆಲ್ಲಿ ಸಮಸ್ಯೆಯಾಗಿದೆ ಎಂಬುದು ತಿಳಿಸಿದರೆ ಅಂತಹ ಕೂಡಲೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡಿದರು.