ಮೈಸೂರು (ಏ.20): ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು, ಪೊಲೀಸರ ಸಹಕಾರದೊಡನೆ ಯಾದವಗಿರಿ ಕೊಳಚೆ ಪ್ರದೇಶದಲ್ಲಿನ ಮನೆಗಳನ್ನು ನೆಲಸಮಗೊಳಿಸಿದರು.

ಅರಸೀಕೆರೆ ರೈಲ್ವೆ ಹಳಿ ಪಕ್ಕದಲ್ಲಿನ ಸುಮಾರು 50ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಲಾಯಿತು. ನಗರ ಪಾಲಿಕೆಯ 18ನೇ ವಾರ್ಡ್‌ಗೆ ಒಳಪಡುವ ಈ ಪ್ರದೇಶದಲ್ಲಿ ಹಲವು ಮಂದಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಬೋರ್ಡ್‌ನ ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ. ಹರೀಶ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಇಲ್ಲಿನ ನಿವಾಸಿಗಳಿಗೆ ನಮ್‌ರ್‍ ಯೋಜನೆಯಡಿ ಗುಂಪು ಮನೆ ನಿರ್ಮಿಸಿಕೊಡಲಾಗಿತ್ತು. ಆದರೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿರಲಿಲ್ಲ.

ರಾಜಮನೆತನದ ಆಸ್ತಿ ವಿಚಾರ : ಪ್ರಮೋದಾ ದೇವಿ ಒಡೆಯರ್ ಆಕ್ಷೇಪ .

ಇಲ್ಲಿ ಒಟ್ಟಾರೆ 78 ಜಂಕ್‌ಶೀಟ್‌ ಹಾಕಿದ ಮನೆಗಳನ್ನು ತೆರವುಗೊಳಿಸಲಾಯಿತು. ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ 28 ಮಂದಿ ನಿವಾಸಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆ ಮನೆಗಳನ್ನು ಹೊರತುಪಡಿಸಿ, ಉಳಿದ ಮನೆಗಳನ್ನು ತೆರವುಗೊಳಿಸಲಾಯಿತು.

ಲಾಟರಿ ಮೂಲಕ ಒಟ್ಟು 78 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೆಸರೆಯಲ್ಲಿ ನಿರ್ಮಿಸಿರುವ ನಮ್‌ರ್‍ ಯೋಜನೆ ಮನೆ ನೀಡಲಾಗಿದೆ. ಅಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಆಯ್ಕೆಯಾದ ಅರ್ಹ ಫಲಾನುಭವಿಗಳು ಅಲ್ಲಿ ವಾಸಿಸಬಹುದು. ಪ್ರಸುತ 50 ಮನೆಗಳನ್ನು ತೆರವುಗೊಳಿಸಿದ್ದು, 20 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಸಂಸದ ಪ್ರತಾಪ ಸಿಂಹ ಮತ್ತು ಶಾಸಕ ಎಲ್‌. ನಾಗೇಂದ್ರ ಅವರು ಮತ್ತಷ್ಟುಮಂದಿ ಫಲಾನುಭವಿಗಳಿಗೆ ಮನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ