ಮೈಸೂರಿನ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ರಾಣಿ ಪ್ರಮೋದಾ ದೇವಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಅಲ್ಲದೇ ಆಸ್ತಿ ತಮಗೆ ಸೇರಿದ್ದೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರು (ಏ.18): ಮೈಸೂರಿನಲ್ಲಿ ಹೆಲಿಟೂರಿಸಂ ಉದ್ದೇಶದಿಂದ ಹೆಲಿಪ್ಯಾಡ್ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಣಿ ಪ್ರಮೋದಾ ದೇವಿ ಅರಣ್ಯ ಇಲಾಖೆಗಿಂದು ಪತ್ರ ಬರೆದಿದ್ದಾರೆ.
ಮರ ಕಡಿಯಲು ಸಾರ್ವಜನಿಕ ಆಕ್ಷೇಪಣ ಅರ್ಜಿ ಕರೆದಿರುವುದು ಕಾನೂನು ಬಾಹಿರ. ಮರಗಳ ಹನನಕ್ಕೆ ಗುರುತು ಮಾಡಿರುವ ಜಾಗ ನಮಗೆ ಸೇರಿದ್ದು ಎಂದು ರಾಜ ವಂಶಸ್ಥೆ ಪ್ರಮೋದಾ ದೇವಿ ಆಕ್ಷೇಪಿಸಿದ್ದಾರೆ.
ಹುಬ್ಬಳ್ಳಿ ಏರ್‌ಪೋರ್ಟ್ ಬಳಿಯೆ ಹೆಲಿಪೋರ್ಟ್! ...
ಈಗಾಗಲೇ ಈ ಬಗ್ಗೆ ಹೈಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ಈ ಸಂಧರ್ಭದಲ್ಲಿ ಆ ಜಾಗದಲ್ಲಿ ಮರಕಡಿಯಲು ಸಾರ್ವಜನಿಕ ಆಕ್ಷೇಪಣ ಅರ್ಜಿ ಹೇಗೆ ಕರೆದಿದ್ದೀರಾ ಎಂದು ಪ್ರಶ್ನೆ ಮಾಡಿರುವ ಪ್ರಮೋದ ದೇವಿ ಇದು ಕಾನೂನಿನ ಪ್ರಕಾರ ಅತಿಕ್ರಮಣ ಪ್ರವೇಶವಾಗಿದೆ ಎಂದು ತಿಳಿಸಿದ್ದಾರೆ.
ಬಣ್ಣ ಬಣ್ಣದ ಕಾಗೆ ಹಾರಿಸಬಾರದು: ಸಚಿವ ಯೋಗೇಶ್ವರ್‌ಗೆ ಟಾಂಗ್ ಕೊಟ್ಟ ಸಿಂಹ!
ನಗರದ ಲಲಿತ್ ಮಹಲ್ ಜಾಗದಲ್ಲಿ ಹೆಲಿ ಟೂರಿಸಂ ಉದ್ದೇಶದಿಂದ ಅರಣ್ಯ ಇಲಾಖೆಯವರು ಟ್ರೀ ಅಥಾರಿಟಿ 800 ಮರಗಳನ್ನು ಕಡಿಯಲು ನಿರ್ಧರಿಸಿದ್ದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಬಳಿಕ ಸರ್ಕಾರವು ಸಾರ್ವಜನಿಕ ಆಕ್ಷೇಪಣಾ ಅರ್ಜಿ ಕರೆದಿತ್ತು.
'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' ...
ಇದೀಗ ರಾಣಿ ಪ್ರಮೋದಾದೇವಿ ಹೆಲಿಪ್ಯಾಡ್ ನಿರ್ಮಾಣ ಮಾಡಲು ನಿರ್ಧರಿಸಿರುವ ಜಾಗ ರಾಜಮನೆತನಕ್ಕೆ ಸೇರಿದ್ದೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
