ತುಮಕೂರು: ಕುಣಿಗಲ್‌ನಲ್ಲೂ ಅಸ್ಥಿಪಂಜರ ಪತ್ತೆ..!
ರಂಜಿತಾ ಕಳೆದ 6 ತಿಂಗಳ ಹಿಂದೆ ನಾಪತ್ತೆಯಾಗಿದ್ದರಂತೆ. ಅಸ್ಥಿಪಂಜರದ ಬಳಿ ಕಾಲು ಚೈನ್, ನೈಟಿ, ಕೈಬಳೆಗಳು ಪತ್ತೆಯಾಗಿವೆ. ಅಸ್ಥಿಪಂಜರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ಪೊಲೀಸರು
ತುಮಕೂರು(ಡಿ.30): ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ಮೂರು ನಿಗೂಢ ಅಸ್ಥಿಪಂಜರ ಪತ್ತೆಯಾದ ಘಟನೆ ಮಾಸುವ ಮುನ್ನವೇ ಇಂಥಹದ್ದೇ ಘಟನೆ ತುಮಕೂರಿನಲ್ಲೂ ನಡೆದಿದೆ. ಹೌದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲೂ ಅಸ್ಥಿಪಂಜರ ಪತ್ತೆಯಾಗಿದೆ. ಕುಣಿಗಲ್ ತಾಲೂಕಿನ ಕಿತ್ನಾಗಮಂಗಲ ಕೆರೆಯಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಪತ್ತೆಯಾದ ಅಸ್ಥಿಪಂಜರ ಕುಣಿಗಲ್ ತಾಲೂಕಿನ ಕಲ್ಲಿಪಾಳ್ಯ ಗ್ರಾಮದ ರಂಜಿತಾದ್ದು ಎಂಬ ಶಂಕೆ ವ್ಯಕ್ತವಾಗಿದೆ.
ರಂಜಿತಾ ಕಳೆದ 6 ತಿಂಗಳ ಹಿಂದೆ ನಾಪತ್ತೆಯಾಗಿದ್ದರಂತೆ. ಅಸ್ಥಿಪಂಜರದ ಬಳಿ ಕಾಲು ಚೈನ್, ನೈಟಿ, ಕೈಬಳೆಗಳು ಪತ್ತೆಯಾಗಿವೆ. ಅಸ್ಥಿಪಂಜರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ.
Skeletons in House: ಪಾಳುಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ: ಈ ಸಾವಿನ ರಹಸ್ಯವೇನು ? ಯಾರು ಇವರು ?
ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ಮೂರು ನಿಗೂಢ ಅಸ್ಥಿಪಂಜರ ಪತ್ತೆ
ಚಿತ್ರದುರ್ಗ: ಚಿತ್ರದುರ್ಗ ನಗರ ಹೊರವಲಯ ಪಾಳು ಬಿದ್ದ ಮನೆಯೊಂದರಲ್ಲಿ ಮೂರು ನಿಗೂಢ ಶವಗಳು ಪತ್ತೆಯಾಗಿದ್ದು ಅಸ್ಥಿಪಂಜರ ರೂಪದಲ್ಲಿ ಗೋಚರಿಸಿವೆ. ಶವಗಳ ಕಂಡು ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.
ನಗರದ ಚಳ್ಳಕೆರೆ ಟೋಲ್ ಗೇಟ್‌ನಲ್ಲಿ ಕಬೀರಾನಂದ ಸಮುದಾಯ ಭವನದ ಎದುರಿಗೆ ಇರುವ ಪಾಳು ಮನೆಯಲ್ಲಿ ಶವ ಪತ್ತೆಯಾಗಿದ್ದು, ಜಗನ್ನಾಥರೆಡ್ಡಿ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಮನೆ ಮುಂಭಾಗ ಜಗನ್ನಾಥರೆಡ್ಡಿ ಹೆಸರಿನ ಬೋರ್ಡ್ ನೇತಾಡುತ್ತಿದೆ. ಶವಗಳು ಸಂಪೂರ್ಣ ಕೊಳೆತು ಮೂಳೆ ಕಾಣುವ ಸ್ಥಿತಿಯಲ್ಲಿ ಪತ್ತೆ. ಕಳೆದ 8-10 ವರ್ಷಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.