* ಕಾಮಗಾರಿ ಆರಂಭವಾಗಿ 54 ತಿಂಗಳಾದರೂ ಮುಗಿಯದ ಕಾಮಗಾರಿ* ಬಾಕಿ ಉಳಿದ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕೆಲಸ* ಮೊದಲ ವಿನ್ಯಾಸದಂತೆ ಯೋಜನೆ ಪೂರ್ಣಗೊಳಿಸಲು ಭೂ ಸ್ವಾಧೀನ ಅಗತ್ಯ
ಬೆಂಗಳೂರು(ಡಿ.22): ಭೂಸ್ವಾಧೀನ(Land Acquisition) ಪ್ರಕ್ರಿಯೆ ತೊಡಕುಗಳ ಹಿನ್ನೆಲೆಯಲ್ಲಿ ಬಿಬಿಎಂಪಿಯು(BBMP) ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ(Steel Bridge) ಯೋಜನೆಯ ವಿನ್ಯಾಸವನ್ನು ತುಸು ಮಾರ್ಪಡಿಸುವ ಚಿಂತನೆ ಆರಂಭಿಸಿದೆ. ಈ ಯೋಜನೆಗೆ ಮೊದಲಿನ ವಿನ್ಯಾಸದಂತೆ ಯೋಜನೆಯನ್ನು ಪೂರ್ಣಗೊಳಿಸಲು ಶೇಷಾದ್ರಿಪುರಂ ರೈಲ್ವೆ ಬ್ರಿಡ್ಜ್ ವ್ಯಾಪ್ತಿಯಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದು ಅಗತ್ಯವಿದೆ. ಆದರೆ ಭೂ ಮಾಲೀಕರು(Land Owners) ಭೂಸ್ವಾಧೀನ ವಿಚಾರವಾಗಿ ಕೋರ್ಟ್(Court) ಮೆಟ್ಟಿಲೇರಿದ್ದರಿಂದ ವಿನ್ಯಾಸ ಮಾರ್ಪಡಿಸಲು ಬಿಬಿಎಂಪಿ ಮುಂದಾಗಿದೆ.
ಕಾಮಗಾರಿ ಪೂರ್ಣಗೊಳಿಸುವಲ್ಲಿ ಇಕ್ಕಟ್ಟಿಗೆ ಸಿಲುಕಿರುವ ಬಿಬಿಎಂಪಿ ಕಾನೂನು ತೊಡಕು ನಿವಾರಣೆಯಾಗುವುದನ್ನು ಕಾಯುತ್ತಿದೆ. ಅಲ್ಲದೇ ಪರ್ಯಾಯವೆಂಬಂತೆ ಲಭ್ಯವಿರುವ ಜಾಗದಲ್ಲೇ ನಿರ್ಮಾಣ ಕೆಲಸಗಳನ್ನು ಪೂರ್ತಿಗೊಳಿಸಲು ಸೇತುವೆ ನಿರ್ಮಾಣದ ನಿಯಮ, ಚೌಕಟ್ಟಿನ ಇತಿ-ಮಿತಿಯಡಿ ಹೊಸ ವಿನ್ಯಾಸದ(New Design) ಮೊರೆ ಹೋಗುವ ಸಾಧ್ಯತೆ ಇದೆ. ಈ ಕುರಿತು ಸಂಬಂಧಿಸಿದ ತಾಂತ್ರಿಕ ಅಧಿಕಾರಿಗಳ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರಕ್ಕೆ ಕಪಾಳ ಮೋಕ್ಷ: ಸ್ಟೀಲ್ ಬ್ರಿಡ್ಜ್ ಗೆ ಬ್ರೇಕ್..!
ನಾಲ್ಕು ವರ್ಷದ ಹಿಂದೆ ಆರಂಭವಾದ ಮೇಲ್ಸೇತುವೆ(Flyover) ಕಾಮಗಾರಿ ಇನ್ನೇನು ಮುಗಿಯಿತು ಎನ್ನುವಷ್ಟರಲ್ಲಿ ಉದ್ದೇಶಿತ ಶೇಷಾದ್ರಿಪುರಂ ರೈಲ್ವೆ ಬ್ರಿಡ್ಜ್ ವ್ಯಾಪ್ತಿಯಲ್ಲಿನ 570 ಚದರ ಅಡಿ ಭೂಮಿ ಸ್ವಾಧೀನ ಮಾಡಲು ಆಗಲಿಲ್ಲ. ಭೂ ಮಾಲೀಕರ ಜತೆ ಸಮಾಲೋಚನೆ ನಡೆಸಿ ಒಪ್ಪಿಸಿದ್ದ ಜಿಲ್ಲಾಧಿಕಾರಿಗಳು, ಪ್ರಕ್ರಿಯೆಗೆ ಬೇಕಾದ ಅನುದಾನ ಸಿದ್ದತೆಗೆ ಬಿಬಿಎಂಪಿಗೆ ಸೂಚಿಸಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ಜುಲೈ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.
ಬಾಕಿ ಕೆಲಸಗಳು:
ರೇಸ್‌ಕೋರ್ಸ್ ರಸ್ತೆ ಭಾಗದ ಸೇತುವೆ ಎಲ್ಲ ಕೆಲಸಗಳು ಮುಗಿದಿವೆ. ಶೇಷಾದ್ರಿಪುರಂ ವೃತ್ತದ ಕಡೆಗೆ ಅಂತಿಮ ಹಂತದ ಟಾರ್, ರಾರಯಂಪ್, ತಡೆಗೋಡೆ ಇತರ ಕೆಲಸ ಪೂರ್ಣಗೊಳಿಸುವುದು ಬಾಕಿ ಇದೆ. ಕೋಟ್ಯಂತರ ರು. ಮೌಲ್ಯದ ಉದ್ದೇಶಿತ ಭೂಮಿ ಸ್ವಾಧೀನ ಆಗದಿದ್ದಲ್ಲಿ ಮಾತ್ರ ಪರ್ಯಾಯವಾಗಿ ಬಿಬಿಎಂಪಿ ಹೊಸ ವಿನ್ಯಾಸ ಬಳಸಿಕೊಳ್ಳಲಿದೆ. ಸದ್ಯ ವಿಚಾರಣೆ ಹಂತದಲ್ಲಿರುವುದರಿಂದ ಯಾವ ನಿರ್ಧಾರ ಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳು, ಅಂದುಕೊಂಡಂತೆ ಆದರೆ ಮುಂದಿನ 20-30 ದಿನದಲ್ಲಿ ಮೇಲ್ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದಷ್ಟೇ ತಿಳಿಸಿದ್ದಾರೆ.
‘ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಅವಕಾಶ ನೀಡಲ್ಲ’ : ಬಿಜೆಪಿ
ಸಮಸ್ಯೆಗಳ ಸುರಿಮಾಲೆ
ಸುಮಾರು 60 ಕೋಟಿ ವೆಚ್ಚದಲ್ಲಿ 2017ರ ಜೂನ್‌ನಲ್ಲಿ ಆರಂಭವಾದ ಕಾಮಗಾರಿ(Work) 13ತಿಂಗಳಲ್ಲಿ (2018 ಜುಲೈಗೆ) ಪೂರ್ಣಗೊಳ್ಳಬೇಕಿತ್ತು. ನಿಗದಿತ ವೇಳೆಗೆ ಪೂರ್ಣಗೊಳಿಸದೇ ಸಾಕಷ್ಟುಬಾರಿ ಗಡುವು ಪಡೆದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ ರೇಸ್‌ಕೋರ್ಸ್ ರಸ್ತೆಯಿಂದ ಶಿವಾನಂದ ವೃತ್ತದ ಮಾರ್ಗವಾಗಿ ಶೇಷಾದ್ರಿಪುರಂ/ಮೆಜೆಸ್ಟಿಕ್ ತಲುಪಲು 20 ನಿಮಿಷ ಒಮ್ಮೊಮ್ಮೆ, ಅರ್ಧ ಗಂಟೆ ಸಂಚಾರ ದಟ್ಟಣೆಯಲ್ಲಿ ಸಿಲುಕುವಂತಾಗಿದೆ. ಕಾಮಗಾರಿಯ ವಸ್ತುಗಳನ್ನು ರಸ್ತೆ ಬದಿ ಹಾಕಲಾಗಿದೆ. ವೃತ್ತದ ಅಕ್ಕಪಕ್ಕದ ನಿವಾಸಿಗಳು, ಬೇಕರಿ, ಟೀಶಾಪ್ ಮಾಲೀಕರು, ಹೋಟಲ್ ಸಿಬ್ಬಂದಿ, ಸಾರ್ವಜನಿಕರು ಧೂಳು, ಕಾಮಗಾರಿ ಶಬ್ದದಿಂದ ನಿರಂತರ ಕಿರಿಕಿರಿ ಅನುಭಿಸುತ್ತಿದ್ದೇವೆ ಎಂದು ಆಟೋ ಚಾಲಕ ರಮೇಶ್ ದೂರಿದರು.
ಹೆಚ್ಚು ಹದಗೆಟ್ಟ ರಸ್ತೆಗೆ ಮೊದಲು ಡಾಂಬರು
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮುಖ್ಯ ರಸ್ತೆ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ (Road) ಆದ್ಯತೆ ಮೇರೆಗೆ ಹೆಚ್ಚು ಹದಗೆಟ್ಟಿರುವ ರಸ್ತೆಗಳನ್ನು ಗುರುತಿಸಿ ಡಾಂಬರೀಕರಣ ಮಾಡುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ನಗರದ ಹೆಣ್ಣೂರು ಮುಖ್ಯ ರಸ್ತೆ (1.8 ಕಿ.ಮೀ), ರೈಲ್ವೆ ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸುವ ಬೈಯಪ್ಪನಹಳ್ಳಿ ರಸ್ತೆ (2.6 ಕಿ.ಮೀ), ಲಿಂಗರಾಜ ಪುರ ಮೇಲುಸೇತುವೆ ಬಳಿಯ ರಸ್ತೆ (0.75 ಕಿ.ಮೀ), ದಿಣ್ಣೂರು ಮುಖ್ಯ ರಸ್ತೆ ಸೇರಿದಂತೆ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ.
