ಬೆಳಗಾವಿ (ಮಾ.22):  ಮಾಜಿ ಸಚಿವರ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕುಟುಂಬಸ್ಥರಿಗಾಗಿ ಎಸ್‌ಐಟಿ ಅಧಿಕಾರಿಗಳು ಬೆಳಗಾವಿ ನಗರ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಪುತ್ರಿಯನ್ನು ಅಪಹರಿಸಲಾಗಿದೆ. ಮಾನಸಿಕ ಕಿರುಕುಳ ನೀಡಿ ಅಶ್ಲೀಲ ದೃಶ್ಯ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಯುವತಿಯ ಪೋಷಕರು ಇಲ್ಲಿನ ಎಪಿಎಂಸಿ ಠಾಣೆಯಲ್ಲಿ ಎಂದು ಮಾ.16ರಂದು ದೂರು ನೀಡಿದ್ದರು. 

ಇದಾದ ಬಳಿಕ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಇವರ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಈಗಾಗಲೇ ಯುವತಿಯ ಪೋಷಕರು ವಾಸವಿದ್ದ ಬಾಡಿಗೆ ಮನೆ ಮಾಲೀಕರನ್ನು ವಿಚಾರಣೆ ನಡೆಸಿರುವ ಅಧಿಕಾರಿಗಳು, ಯುವತಿ ತಂದೆ ಹಾಗೂ ಸಹೋದರರ ಮೊಬೈಲ್ ಕಾಲ್‌ ಡಿಟೇಲ್ಸ್‌ ಪಡೆದಿದ್ದಾರೆ. ಯುವತಿ ಕುಟುಂಬ ಜೊತೆ ಮೊಬೈಲ್‌ನಲ್ಲಿ ಕೊನೆಯದಾಗಿ ಮಾತನಾಡಿದವರ ಮಾಹಿತಿ ಪಡೆದು ಪತ್ತೆಗೆ ಮುಂದಾಗಾಗಿದ್ದಾರೆ ಎನ್ನಲಾಗುತ್ತಿದೆ.

ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ .

ಉತ್ತರ ಕರ್ನಾಟಕದ ವಿವಿಧೆಡೆ ಇರುವ ಯುವತಿ ಸಂಬಂಧಿಕರ ಮನೆಗಳಿಗೂ ತೆರಳಿ ಪರಿಶೀಲನೆ ನಡೆಸುತ್ತಿದ್ದು, ಯುವತಿಯ ತಂದೆ ಊರಾದ ಬಾಗಲಕೋಟೆ ಜಿಲ್ಲೆ ಗುಡೂರು, ತಾಯಿಯ ಊರಾದ ವಿಜಯಪುರ ಜಿಲ್ಲೆಯ ನಿಡಗುಂದಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

- ಸೀಡಿ ಕೇಸ್‌: ಬೆಳಗಾವಿಯಲ್ಲಿ ಬೀಡುಬಿಟ್ಟಿರುವ ಎಸ್‌ಐಟಿ