ಬಾರ್ಮರ್, ರಾಜಸ್ಥಾನ(ಡಿ. 08) ರಾಜಸ್ಥಾನದ ಬಾರ್ಮರ್ ನಿಂದ ವರದಿಯಾದ ಘಟನೆ ಲೈಂಗಿಕ ದೌರ್ಜನ್ಯದ ಮತ್ತೊಂದು ಕರಾಳ ಮುಖವನ್ನು ತೆರೆದಿಡುತ್ತದೆ.
 
ಸ್ನಾನ ಮಾಡುತ್ತಿದ್ದ ಮಹಿಳೆಯ ದೃಶ್ಯ ಚಿತ್ರೀಕರಣ ಮಾಡಿಕೊಂಡು ಅದೇ ವಿಡಿಯೋ ಬಳಸಿ ಬ್ಲ್ಯಾಕ್ ಮೇಲ್ ಮಾಡಿನ  ಮಹಿಳೆಯ ಮೇಲೆ ರೇಪ್ ಮಾಡಿದ್ದಾನೆ. ತನ್ನ ಸ್ನೇಹಿತನೊಂದಿಗೂ ಸಹಕರಿಸಬೇಕು ಎಂದು ಒತ್ತಾಯಿಸಿದ್ದಾನೆ. ಆರೋಪಿಯ ಸ್ನೇಹಿತ ಸಹ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ.

ಸೊಸೆ ಮೇಲೆ ಎರಗಿದ ಮಾವ, ಪ್ರಶ್ನೆ ಮಾಡಿದ ಮಗನನ್ನೇ ಹತ್ಯೆ ಮಾಡಿದ

ಆರೋಪಿ ಕಾಂತಿಲಾಲ್ ಮಹಿಳೆಗೆ ದೂರದ ಸಂಬಂಧಿಕನಾಗಬೇಕಿದ್ದು ಬಿಜೆಪಿಯ ಕೌನ್ಸಿಲರ್. ಮಹಿಳೆ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದ. 

ಅವಕಾಶ ಬಳಸಿಕೊಂಡು ಮಹಿಳೆ ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡಿಕೊಂಡು  ಬೆದರಿಸಲು ಆರಂಭಿಸಿದ್ದಾನೆ. ತನ್ನ ಸ್ನೇಹಿತ ಜೋಧ್ರಾಮ್ ಜತೆಗೂ ಸಹಕರಿಸಬೇಕು ಎಂಧು ಒತ್ತಾಯಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.