ಶಿರಸಿ(ಸೆ. 05)  ಶಿರಸಿ ನಗರದ ಮಧ್ಯಭಾಗದಲ್ಲಿರುವ ಶಿವಾಜಿ ಚೌಕದ ಹೋಟೆಲ್ ನಲ್ಲಿ ಊಟಕ್ಕೆ ಕುಳಿತವರ ಮೇಲೆಯೇ ಗೋಡೆ ಕುಸಿದಿದೆ.  ಆರು ಜನರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಾಜಿಚೌಕದ ತೃಪ್ತಿ ಹೊಟೆಲಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪಕ್ಕದಲ್ಲಿದ್ದ ಕರಾವಳಿ ಹೋಟೆಲಿನ ಗೋಡೆಯೂ ಸಹ ಉರುಳಿ ಬಿದ್ದಿದೆ.

ನಿಜ ನಾಗರಕ್ಕೆ ಪೂಜೆ ಮಾಡುವ  ಶಿರಸಿಯ ಕುಟುಂಬ, ವಿಡಿಯೋ

ಶಿರಸಿ ಸಿಪಿಐ ಗಿರೀಶ್, ಟೌನ್ ಪಿಎಸ್ಐ ಮಾದೇಶ, ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಸ್ಕಾಂ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.