2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ 35 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ಸಾಧಕ ವಿದ್ಯಾರ್ಥಿಗಳಿಗೆ ಶಿವ ಜ್ಯೂವರೆಲ್ಸ್ ವತಿಯಿಂದ ಬೆಳ್ಳಿಯ ಪೆನ್ನುಗಳನ್ನು ವಿತರಿಸಲಾಯಿತು.

ಚಿಂತಾಮಣಿ: 2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ 125 ಪೂರ್ಣಾಂಕಗಳನ್ನು ಪಡೆದಿರುವ ತಾಲೂಕಿನ ಸಾಧಕ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವ ಜ್ಯೂವರೆಲ್ಸ್ ಮಾಲೀಕರಿಂದ ಬೆಳ್ಳಿ ಪೆನ್ ವಿತರಣೆ

ನಗರದ ರಾಧಾಕೃಷ್ಣ ಪಾರ್ಟಿ ಹಾಲ್‌ನಲ್ಲಿ ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ 35 ವಿದ್ಯಾರ್ಥಿಗಳಿಗೆ ನಗರದ ಆಜಾದ್ ಚೌಕದಲ್ಲಿರುವ ಶಿವ ಜ್ಯೂವರೆಲ್ಸ್ ಮಾಲೀಕ ಬೆಳ್ಳಿಯ ಪೆನ್ನನ್ನು ನೀಡಿದರು.

ಶಿವ ಜ್ಯೂವರೆಲ್ಸ್ ಮಾಲೀಕ ಮಾತನಾಡಿ, ಬುದ್ದಿವಂತರಾಗಿ, ಜ್ಞಾನವಂತರಾಗಿ, ಕನಡಮ್ಮನ ಸೇವೆ ಮಾಡಿ ನಿಮ್ಮ ಭವಿಷ್ಯವನ್ನು ಸುಂದವಾಗಿಸಿಕೊಳ್ಳಿರೆಂದು ಆಶಿಸಿದರು.

ಇದನ್ನೂ ಓದಿ: ಮುಂಡಗೋಡನಿಂದ ಹುಬ್ಬಳ್ಳಿ, ಗದಗ, ಕೊಪ್ಪಳ ಮಾರ್ಗವಾಗಿ ರಾಯಚೂರು ನಗರಕ್ಕೆ ನೇರ ಬಸ್ ಆರಂಭ

ಎನ್.ವಿ. ಶ್ರೀನಿವಾಸನ್, ಕಾಗತಿ ವೆಂಕಟರತ್ನಂ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚು.ಸಾ.ಪ. ಅಧ್ಯಕ್ಷ ಚಲಪತಿಗೌಡ, ದೇವರ ಮಳ್ಳೂರು ಮಹೇಶ್, ಸ್ವರ್ಣಗೌರಿ, ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್, ಕೆಜಿಎಫ್ ಕವಿಯತ್ರಿ ರಾಧಾ ಡಿ ಪ್ರಕಾಶ್, ರಮಣರೆಡ್ಡಿ, ವೆಂಕಟೇಶಪ್ಪ, ಚೇಳೂರು ರಾಧಾಮಣಿ ಪಾಲ್ಗೊಂಡಿದ್ದರು

ಇದನ್ನೂ ಓದಿ: Mysuru: ಸರಗೂರು ಅಂಚೆ ಕಚೇರಿಯಲ್ಲಿ 1.3 ಕೋಟಿ ರೂಪಾಯಿ ಮಾಯ; CBIನಿಂದ ಇಬ್ಬರ ಬಂಧನ