ತಿಪಟೂರು(ಮಾ.01):  ಕೋವಿಡ್‌-19 ಸಮಯದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕುಟುಂಬದಿಂದ ದೂರ ಉಳಿದು ಜನರ ಆರೋಗ್ಯ ಸೇವೆ ಸಲ್ಲಿಸಿರುವ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರನ್ನು ಗೌರವಿಸಿ ಸನ್ಮಾನಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಮಾಜ ಸೇವಕ ಕೆ.ಟಿ. ಶಾಂತಕುಮಾರ್‌ ತಿಳಿಸಿದರು.

 ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಶಾಕಾರ್ಯಕರ್ತೆಯರ ಅಭಿನಂದನಾ ಸಮಾರಂಭದಲ್ಲಿ ರೇಷ್ಮೆ ಸೀರೆಯನ್ನು ವಿತರಿಸುವ ಮೂಲಕ ಮಾತನಾಡಿದ ಅವರು, ಕೊರೋನಾದಿಂದಾಗಿ ಎಲ್ಲಾ ವರ್ಗದ ಜನರು ತತ್ತರಿಸುವಂತಾಗಿತ್ತು. 

ನಾಜೂಕು ರೇಷ್ಮೆ ಸೀರೆಗಳನ್ನು ಹೇಗೆ ರಕ್ಷಿಸ್ತೀರಿ..? ಇಲ್ಲಿವೆ ಕೆಲವು ಸರಳ ಸಲಹೆಗಳು ..

ಇದೀಗ ಸ್ವಲ್ಪ ಚೇತರಿಕೆ ಕಾಣುತ್ತಿದ್ದು ಕೋವಿಡ್‌19 ಸಮಯದಲ್ಲಿ ಪ್ರತಿಯೊಬ್ಬರೂ ಸುರಕ್ಷತೆಯಿಂದಿರಬೇಕೆಂದು ಸರ್ಕಾರದ ನಿಯಮದಂತೆ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪ್ರತಿಯೊಬ್ಬರ ಆರೋಗ್ಯ ಸುಧಾರಣೆಗೆ ಮುಂದಾಗಿದ್ದರು ಎಂದರು. 

200 ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ರೇಷ್ಮೆ ಸೀರೆಗಳನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಕೆ.ಟಿ. ಶಾಂತಕುಮಾರ್‌ ಅವರನ್ನು ಆಶಾಕಾರ್ಯಕರ್ತೆಯರು ಸನ್ಮಾನಿಸಿದರು. ಸಮಾರಂಭದಲ್ಲಿ ಕೆಟಿಎಸ್‌ ಅಭಿಮಾನಿ ಬಳಗದ ಸುದರ್ಶನ್‌, ಮೋಹನ್‌ಬಾಬು, ಹೇಮಂತ್‌, ಪುಂಡರೀಕ ಇದ್ದರು.