ಪ್ರಯಾಣಿಕರಿಗೆ ಮತ್ತೆ ಸಂಕಷ್ಟ, ಬೆಂಗಳೂರಿನ ಈ ರಸ್ತೆ ಬರೋಬ್ಬರಿ 4 ತಿಂಗಳು ಬಂದ್!
ಹೊಸೂರು-ಮಡಿವಾಳ ಸಂಪರ್ಕಿಸುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯನ್ನು ಮುಂದಿನ ನಾಲ್ಕು ತಿಂಗಳು ಅಂದರೆ ಫೆಬ್ರವರಿವರೆಗೆ ಮುಚ್ಚಲಾಗಿದೆ.
ಬೆಂಗಳೂರು (ಅ.24): ಮೆಟ್ರೋ ಕಾಮಗಾರಿಯ ಹಿನ್ನೆಲೆಯಲ್ಲಿ ಹೊಸೂರು-ಮಡಿವಾಳ ಸಂಪರ್ಕಿಸುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯನ್ನು ಮುಂದಿನ ನಾಲ್ಕು ತಿಂಗಳು ಅಂದರೆ ಫೆಬ್ರವರಿವರೆಗೆ ಮುಚ್ಚಲಾಗುತ್ತಿದೆ. ಇದರಿಂದ ವಾಹನ ಸವಾರರು ಸಂಚಾರ ದಟ್ಟಣೆಗೆ ಸಿಲುಕಲಿದ್ದಾರೆ. ಶನಿವಾರದಿಂದ ರಸ್ತೆಯನ್ನು ಬಂದ್ ಮಾಡಲಾಗಿದೆ.
ಹೊರವರ್ತುಲ ರಸ್ತೆಯ ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆ.ಆರ್.ಪುರ- ಹೆಬ್ಬಾಳ ನಡುವೆ ಮೆಟ್ರೋ ನಿರ್ಮಾಣ ಕಾರ್ಯ ಚುರುಕಿನಿಂದ ಸಾಗಿದೆ. ಇದಕ್ಕೆ ಪೂರಕವಾದ ಕಾಮಗಾರಿಗಳಿಗಾಗಿ ಶನಿವಾರದಿಂದ ನಾಲ್ಕು ತಿಂಗಳ ಕಾಲ ಸಿಲ್ಕ್ ಬೋರ್ಡ್ ಫೈಓವರ್ ಭಾಗಶಃ ಮುಚ್ಚಲಿದೆ. ಸುಮಾರು 11 ಮೀಟರ್ ಅಗಲ ಇರುವ ಮೇಲ್ಸೇತುವೆ ಎರಡೂ ಬದಿಯಲ್ಲಿನ ತಲಾ 2.5 ಕಿಲೋ ಮೀಟರ್ ಮೆಟ್ರೋ ಕಾಮಗಾರಿಗಾಗಿ ಮುಚ್ಚಲಾಗುತ್ತಿದೆ. ಉಳಿದ 6 ಮೀಟರ್‌ನ ವಾಹನಗಳು ಸಂಚರಿಸಲು ಅವಕಾಶವಿದೆ.
ಮೆಟ್ರೋ ಹ್ಯಾಂಡಲ್ ಹಿಡಿದು ಸರ್ಕಸ್ ಮಾಡಿದ ವಿದ್ಯಾರ್ಥಿಗೆ ₹500 ದಂಡ
ಈ ಫ್ಲೈ ವರ್‌ನ ಅಪ್ ಮತ್ತು ಡೌನ್ ಕ್ಯಾಂಪ್ ಕ್ಯಾರೇಜ್ ವೇ (ಮಡಿವಾಳ ಬದಿ) ಲೂಪ್‌ಗಳು ಮತ್ತು ರಾಂಪ್ ಫೈವ್ ಸ್ಟೇಜಿಂಗ್ ಕಾಮಗಾರಿ ಕೈಗೊಳ್ಳಲು ತಾತ್ಕಾಲಿಕವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ದೀರ್ಘಕಾಲ ರಸ್ತೆ ಅಲಭ್ಯವಾಗುವ ಕಾರಣ ಪ್ರಯಾಣಿಕರಿಗೆ ಇದರ ಬಿಸಿ ತುಸು ಜೋರಾಗಿಯೇ ತಟ್ಟುವ ಸಾಧ್ಯತೆ ಇದೆ.
ನಮ್ಮ ಮೆಟ್ರೋ ಒಟ್ಟು 72.2 ಕಿಮೀ ಉದ್ದವನ್ನು ಹೊಂದಿರುವ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿದೆ. 97.84 ಕಿ.ಮೀ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದ್ದು ನಮ್ಮ ಮೆಟ್ರೋ 66 ನಿಲ್ದಾಣಗಳನ್ನು ಹೊಂದಿದೆ (ಇದರಲ್ಲಿ ಭೂಗತ 7 ಸುರಂಗದಲ್ಲಿದೆ).
ಬೆಂಗಳೂರು: ಮೆಟ್ರೋ ನೇರಳೆ ಮಾರ್ಗ ಆರಂಭದ ಬಳಿಕ ಹೆಚ್ಚಾದ ಪ್ರಯಾಣಿಕರ ದಟ್ಟಣೆ
ನಮ್ಮ ಮೆಟ್ರೋ ಪ್ರಸ್ತುತ ಎರಡು ಮಾರ್ಗಗಳಾದ ಹಸಿರು ಮತ್ತು ನೇರಳೆ ಯನ್ನು ಒಳಗೊಂಡಿದೆ. ಬೆಂಗಳೂರು ಮೆಟ್ರೋದ ನೇರಳೆ ಲೈನ್ 42.17 ಕಿ.ಮೀ.ಗಳನ್ನು ಒಳಗೊಂಡಿದೆ ಮತ್ತು 37 ನಿಲ್ದಾಣಗಳಿದೆ ಮತ್ತು ಹಸಿರು ಮಾರ್ಗವು 29 ನಿಲ್ದಾಣಗಳನ್ನು ಒಳಗೊಂಡಿದೆ. ಮಿಕ್ಕಂತೆ ಹಳದಿ, ಪಿಂಕ್ ಮತ್ತು ನೀಲಿ ಲೈನ್‌ಗಳು ನಿರ್ಮಾಣ ಹಂತದಲ್ಲಿದ್ದು, ಇದು 97.84 ಕಿಮೀ ದೂರವನ್ನು ಕ್ರಮಿಸುತ್ತವೆ.
ಈ ತಿಂಗಳ ಆರಂಭದಲ್ಲಿ ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 190 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಹೇಳಿದ್ದರು. 45 ದಿನಗಳಲ್ಲಿ ರಾಜ್ಯ ಸರ್ಕಾರವು ಸಾರ್ವಜನಿಕ ಟೆಂಡರ್‌ಗಳನ್ನು ಆಹ್ವಾನಿಸಲಿದೆ ಎಂದು ಹೇಳಿದರು.
ಸುರಂಗ ಮಾರ್ಗ ಹೇಗಿರಬೇಕು, ನಾಲ್ಕು ಅಥವಾ ಆರು ಪಥಗಳಾಗಬೇಕು, ಎಲ್ಲಿಂದ ಆರಂಭಿಸಬೇಕು ಮತ್ತು ಕೊನೆಗೊಳಿಸಬೇಕು ಎಂಬ ಬಗ್ಗೆ ಕಂಪನಿಗಳು ಅಧ್ಯಯನ ನಡೆಸಿ ವರದಿ ನೀಡಲಿದೆ ಎಂದಿದ್ದರು.