ಶಿವಮೊಗ್ಗ, (ನ.02): ಸರ್ಕಾರದಿಂದ ಸಿಗಂದೂರು ಚೌಡೇಶ್ವರಿ ದೇವಾಲಯದ ಸಮಿತಿ ರಚನೆಯ ವಿರುದ್ಧ ನಾವು ಹೋರಾಡೋಲು ಸಿಗಂದೂರು ಉಳಿಸಿ ಹೋರಾಟ ನಡೆಸುವಂತೆ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಗುಡುಗಿದ್ದಾರೆ. 

ಶಿವಮೊಗ್ಗ ನಗರದ ಆರ್ಯ ಈಡಿಗ ಸಮುದಾಯ ಭವನದಲ್ಲಿ ನಡೆದ ಸಿಗಂದೂರು ಚೌಡೇಶ್ವರಿ ದೇವಾಲಯದ ವಿವಾದದಿಂದಾಗಿ ಸರ್ಕಾರ ದೇವಸ್ಥಾನ ಸಮಿತಿ ರಚಿಸಿರುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 55 ಲಕ್ಷ ಜನ ಸಂಖ್ಯೆ ಇದೆ. ಸಮುದಾಯ ಸಂಘಟನೆಯನ್ನ ಅಘೋಷಿತ ಸಂಘಟನೆ ಎಂದು ಜಿಲ್ಲಾಧಿಕಾರಿಗಳು ಮತ್ತು ಸುಡಗಾಡು ಸಂಘವೆಂದು ಶಾಸಕ ಹರತಾಳ ಹಾಲಪ್ಪ ಹೇಳಿರುವುದು ಇವರಿಬ್ಬರೂ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

'ಸಿಗಂದೂರು ಚೌಡೇಶ್ವರಿ ದೇಗುಲ ಈಡಿಗ ಸಮಾಜದ್ದು'

 ಬ್ರಾಹ್ಮಣ ಮತ್ತು ಈಡಿಗ ಸಮುದಾಯ ಒಂದಾಗಿ ಹೋಗಿರುವ ಸಮುದಾಯಕ್ಕೆ, ಸಿಎಂ, ಸಂಸದ ಹಾಗೂ ಎಂಎಡಿಬಿ ಅಧ್ಯಕ್ಷ, ಮತ್ತು ಸಾಗರ ಶಾಸಕರ ಕುತಂತ್ರದಿಂದ ಸಮುದಾಯದಲ್ಲಿ ಒಡಕಾಗಿದೆ. ಹಿಂದುತ್ವವೆಂದು ಹೇಳುವ ಬಿಜೆಪಿ ಹಿಂದುಳಿದ ಸಮಾಜದ ದೇವಾಲಯದ ವಿಷಯದಲ್ಲಿ ಒಡೆಯಲು ಹೊರಟಿದೆ ಎಂದು ಗುಟರು ಹಾಕಿದರು. 

ಗೋಕರ್ಣದಲ್ಲಿ ಗಲಾಟೆ ನಡೆದಿದೆ. ಉಡುಪಿಕೃಷ್ಣ ಮಂದಿರದಲ್ಲಿ ಕನಕನ ಕಿಂಡಿಯ ವಿಚಾರದಲ್ಲಿ ಹೋರಾಟ ನಡೆದಿದೆ. ಧರ್ಮಸ್ಥಳದಲ್ಲಿ ಗಲಾಟೆ ನಡೆದಾಗ ಮುಜರಾಯಿ ಇಲಾಖೆಗೆ ಸೇರಿಸಲಿಲ್ಲ. ಈಗ ಯಾಕೆ ಸೇರಿಸಲು ಹೊರಟಿದ್ದಾರೆ. ನಮ್ಮ ಸಮುದಾಯದ ಸಂಘಟನೆ ವಿರುದ್ಧ ಜಿಲ್ಲಾಧಿಕಾರಿಗಳು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸಿಗಂದೂರು ದೇವಾಲಯದಲ್ಲಿ ರಚನೆಗೊಂಡಿರುವ ಸಮಿತಿ ರದ್ದುಗೊಳ್ಳಬೇಕು. ಈ ಕುರಿತು ಶೀಘ್ರದಲ್ಲಿಯೇ ಜಾತ್ಯಾತೀತವಾಗಿ 25 ಸಾವಿರ ಜನರನ್ನು ಒಗ್ಗೂಡಿಸಿ ಡಿಸಿ ಕಚೇರಿ ಮುತ್ತಿಗೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.