'ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಕೊಡುಗೆ ಏನು?'

ವರುಣಾ ದಿಂದ ಯತೀಂದ್ರ 59 ಸಾವಿರ ಮತಗಳಿಂದ ಜಯಗಳಿಸಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ| ವರುಣಾ ಕ್ಷೇತ್ರ ಅಭಿವೃದ್ಧಿ ಮಾಡಿದವರು ನಾವು| ಜಾತಿ ಹೇಳಿಕೊಂಡು ಬಂದರೆ ಮತದಾರರು ಕ್ಷೇತ್ರವನ್ನು ಬಿಟ್ಟು ಕೊಡುತ್ತಾರೆಯೇ?:ಸಿದ್ದರಾಮಯ್ಯ| 

Siddaramaiah  Talks Over CM BS Yediyurappa BY Vijayendra grg

ರಾಯಚೂರು(ಏ.07): ವರುಣಾ ಕ್ಷೇತ್ರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರು ಏನು ಕೊಡುಗೆ ನೀಡಿದ್ದಾರೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಸ್ಕಿ ಉಪಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈ ಮುಂಚೆಯೂ ಸಹ ವರುಣಾದಿಂದ ನಿಲ್ಲುವುದಾಗಿ ತಿಳಿಸಿದ್ದರು ಆದರೆ ಸ್ಪರ್ಧೆ ಮಾಡಲಿಲ್ಲ. ಈಗ ಅವರು ಬಂದು ನಿಂತರೆ ನಿಲ್ಲಲ್ಲಿ ನಮಗೇನು ಆಗುವುದಿಲ್ಲ. ವರುಣಾ ದಿಂದ ಯತೀಂದ್ರ 59 ಸಾವಿರ ಮತಗಳಿಂದ ಜಯಗಳಿಸಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ.

ವರುಣಾ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದವರು ನಾವು. ಇಷ್ಟಕ್ಕು ವಿಜಯೇಂದ್ರ, ಯಡಿಯೂರಪ್ಪ ಅವರ ಕೊಡುಗೆಯಾದರೂ ಏನು? ಅವರು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ. ಜಾತಿ ಹೇಳಿಕೊಂಡು ಬಂದರೆ ಮತದಾರರು ಕ್ಷೇತ್ರವನ್ನು ಬಿಟ್ಟು ಕೊಡುತ್ತಾರೆಯೇ? ವಿಜಯೇಂದ್ರ ಅಲ್ಲ ಯಾರು ಬಂದರೂ ಅವರನ್ನು ನಾವು ಸ್ವಾಗತ ಮಾಡುವುದಾಗಿ ತಿಳಿಸಿದ್ದಾರೆ. 

'ಸಿಎಂ ವಿರುದ್ಧ ಸಿಡಿದೆದ್ರೂ ಯತ್ನಾಳ್‌, ಈಶ್ವರಪ್ಪಗೆ ಆರ್‌ಎಸ್‌ಎಸ್‌ ಬೆಂಬಲ'

ಉಪಮುಖ್ಯಮಂತ್ರಿಯಾಗಿದ್ದ ನನ್ನನ್ನು ಎಚ್‌.ಡಿ.ದೇವೇಗೌಡ ಅವರು ಜೆಡಿಎಸ್‌ ಪಕ್ಷದಿಂದ ಉಚ್ಛಾಟನೆ ಮಾಡಿ ಪಕ್ಷದಿಂದ ಹೊರಹಾಕಿದರು. ನಾನು ಪಕ್ಷದಿಂದ ಹೊರಬಂದು ಅಹಿಂದವನ್ನು ಸಂಘಟಿಸಿ, ಕಟ್ಟಿ ಹೋರಾಟ ನಡೆಸಿದೆ. ಅದೇ ವೇಳೆ ಕಾಂಗ್ರೆಸ್‌ನವರು ಕರೆದರೂ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ. 

ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ನಿರೀಕ್ಷಿತ ಮಟ್ಟಕ್ಕಿಂತ ದೊಡ್ಡ ಪ್ರಮಾಣದಲ್ಲಿ ಸ್ಪಂದನೆ ಲಭಿಸುತ್ತಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿಯೂ ಸಹ ಕಾಂಗ್ರೆಸ್‌ಗೆ ಅನುಕಂಪವಿದೆ, ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಈ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios