Asianet Suvarna News Asianet Suvarna News

ನಾರಾಯಣಗೌಡ ಭಂಡತನದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದ ಮಾಜಿ ಸಿಎಂ

ನಾರಾಯಣಗೌಡ ಪಕ್ಷಾಂತರ ಮಾಡಿದ್ದರಿಂದ ಅವರನ್ನ ಅನರ್ಹಗೊಳಿಸಿಲಾಗಿತ್ತು| ಹೀಗಾಗಿ  ಈ ಉಪಚುನಾವಣೆ ಎದುರಾಗಿದೆ| ಸುಪ್ರೀಂ ಕೋರ್ಟ್ ಕೂಡ ನಾರಾಯಣಗೌಡರನ್ನ ಅನರ್ಹ ಅಂತಾ ತೀರ್ಮಾನ ಮಾಡಿದೆ| ನೈತಿಕತೆ ಇದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗಬೇಕಿತ್ತು| ಭಂಡತನದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ|

Siddaramaiah Talked About KR Pete BJP Candidate Narayanagowda
Author
Bengaluru, First Published Nov 21, 2019, 12:26 PM IST
  • Facebook
  • Twitter
  • Whatsapp

ಕೆ.ಆರ್.ಪೇಟೆ(ನ.21): ನಾರಾಯಣಗೌಡ ಪಕ್ಷಾಂತರ ಮಾಡಿದ್ದರಿಂದ ಅವರನ್ನ ಅನರ್ಹಗೊಳಿಸಿಲಾಗಿತ್ತು. ಹೀಗಾಗಿ  ಈ ಉಪಚುನಾವಣೆ ಎದುರಾಗಿದೆ. ಸುಪ್ರೀಂ ಕೋರ್ಟ್ ಕೂಡ ನಾರಾಯಣಗೌಡರನ್ನ ಅನರ್ಹ ಅಂತಾ ತೀರ್ಮಾನ ಮಾಡಿದೆ. ನೈತಿಕತೆ ಇದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗಬೇಕಿತ್ತು, ಆದರೆ ಭಂಡತನದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಗುರುವಾರ ಕ್ಷೇತ್ರದ ಮಾರ್ಗೋನಹಳ್ಳಿ ಪ್ರಚಾರದಲ್ಲಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರರಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ಕಳಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ‌ ಎಲ್ಲ 15 ಅನರ್ಹ ಶಾಸಕರನ್ನು ಸೋಲಿಸಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ನಾನು ಸಿಎಂ ಆಗಿದ್ದಾಗ ಕೆ.ಆರ್.ಪೇಟೆಗೆ ಸಾಕಷ್ಟು ಅನುದಾನ ನೀಡಿದ್ದೇನೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳಿದ್ದಾರೆ. 

ಅನರ್ಹ ಶಾಸಕರು ಯಡಿಯೂರಪ್ಪ ಸರ್ಕಾರ ಬೀಳಲು ಬಿಡಲ್ಲ ಅಂತಿದ್ದಾರೆ. ಇವರಿಗೆ ಯಾವುದೇ ನೀತಿ,ನಿಯಮ ಆಚಾರ,ವಿಚಾರ ಇಲ್ಲ ಎಂದು ಅನರ್ಹ ಶಾಸಕರ ವಿರುದ್ಧ ಸಿದ್ದರಾಮಯ್ಯ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿ ವಿರುದ್ಧವೂ ಗುಡುಗಿದ ಸಿದ್ದು

1951 ರಲ್ಲಿ ನರೇಂದ್ರ ಮೋದಿ ಹುಟ್ಟಿದ್ದಾರೆ. ಸ್ವತಂತ್ರ ಬಂದ ನಂತರ ಮೋದಿ ಹುಟ್ಟಿದ್ದಾರೆ. ಇನ್ನು ಹೇಗೆ ಇವರು ದೇಶಭಕ್ತನಾಗ್ತಾರೆ. 56 ಇಂಚಿನ ಎದೆ ಎಂದು ಮೋದಿ ಹೇಳ್ತಾರೆ. ಆ ಎದೆ ಒಳಗೆ ತಾಯಿ ಹೃದಯ ಇರಬೇಕು. ಆದರೆ, ಪ್ರಧಾನಿ ಮೋದಿಗೆ ತಾಯಿ ಹೃದಯವೇ ಇರದಿದ್ದರೆ ಏನು ಪ್ರಯೋಜನ ಅಲ್ವಾ ಎಂದು ಪ್ರಶ್ನಿಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios