ಬೆಂಗಳೂರು(ಫೆ.21): ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ನಮ್ಮ ಸರ್ಕಾರದ ಸಚಿವ ಸಂಪುಟದ ಅರ್ಧ ಮಂದಿ ಸಚಿವರು ನಿಮ್ಮ ಶಿಷ್ಯರೇ ಇದ್ದಾರೆ. ಜತೆಗೆ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ವೇಳೆ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಂತಹ ಮೊದಲ ಸಾಲಿನಲ್ಲಿರುವವರು ಕಡಿಮೆ ಮಾತನಾಡಿ ನಮಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಕೊನೆ ಸಾಲಿನಲ್ಲಿರುವ ನಮಗೆ ಮಾತನಾಡಲು ಅವಕಾಶ ಸಿಗುವುದಿಲ್ಲ ಎಂದಿದ್ದಾರೆ.

ಇದಕ್ಕೆ ಸಿದ್ದರಾಮಯ್ಯ, ಯತ್ನಾಳ್‌ ಅಸಮಾಧಾನ ಅರ್ಥವಾಗುತ್ತಿದೆ. ನಿಮ್ಮ ಮೊದಲ ಸಾಲಿನಲ್ಲಿರುವವರನ್ನು (ಸಚಿವರು) ರಾಜೀನಾಮೆ ಕೊಡಿಸಿ ನೀನೇ ಬಂದು ಮೊದಲ ಸಾಲಿನಲ್ಲಿ ಕುಳಿತುಕೊಳ್ಳಯ್ಯ. ನೀನು ಹಿರಿಯ ಸದಸ್ಯ ಇದಿಯ ಎಂದು ಕಾಲೆಳೆದರು.

ಯಾದಗಿರಿಯಲ್ಲಿ ಪ್ರತ್ಯೇಕ ಅಪಘಾತ: ಐವರ ದುರ್ಮರಣ

ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್ ಹಾಗೂ ಹಾಲಿ ಸಚಿವರಾದ ಆರ್‌. ಅಶೋಕ್‌ ಈ ಮೂವರಲ್ಲಿ ಯಾರು ‘ಬೆಂಗಳೂರು ಪಿತಾಮಹ’? ಎಂಬ ಬಗ್ಗೆ ಗುರುವಾರ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಮಾತಿನ ನಡುವೆ, ‘ರಾಮಲಿಂಗಾರೆಡ್ಡಿ ಬೆಂಗಳೂರಿನ ಪಿತಾಮಹ. ಬೆಂಗಳೂರಿನಲ್ಲಿರುವವರೆಲ್ಲರೂ ನಿನ್ನ ಸ್ನೇಹಿತರು ಅಲ್ವೇನಯ್ಯಾ’ ಎಂದು ಹೇಳಿದರು.

ಹೋಟೆಲ್‌, ಮಾಲ್‌ಗಳಲ್ಲೂ ಮಹಿಳೆಯರಿಗೆ ರಾತ್ರಿ ಪಾಳಿ: ವಿಧೇಯಕ ಮಂಡನೆ

ಈ ವೇಳೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ‘ಹೌದು ಸರ್‌ ಆ ಕಡೆ (ಕಾಂಗ್ರೆಸ್‌) ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ಪಿತಾಮಹ. ನಮ್ಮ ಕಡೆ (ಬಿಜೆಪಿ) ಆರ್‌. ಅಶೋಕ್‌ ಬೆಂಗಳೂರಿನ ಪಿತಾಮಹ ಆಗಿದ್ದರು. ಆದರೆ, ನೀವು ಅಧಿಕಾರಕ್ಕೆ ಬಂದ ಮೇಲೆ ಕೆ.ಜೆ. ಜಾಜ್‌ರ್‍ ಅವರನ್ನು ಕರೆತಂದು ಆ ಸ್ಥಾನದಲ್ಲಿ ಕೂರಿಸಿದಿರಿ. ಜಾಜ್‌ರ್‍ ಕೂಡ ಅವರ ಸಮಾನವಾಗಿ ಬೆಳೆದರು’ ಎಂದು ಸಿದ್ದರಾಮಯ್ಯರಿಗೆ ನಗುತ್ತಲೇ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಕುತ್ಕೊಳ್ಳಯ್ಯ ಸಾಕು ನೀನೂ ನಮ್ಮವನೇ. ಸೋಮಶೇಖರ್‌ ಕೂಡ ಸ್ನೇಹಿತನಾಗಿದ್ದ ಈಗಲೂ ಸ್ನೇಹಿತನೇ. ಕೆ.ಜೆ. ಜಾಜ್‌ರ್‍ ರಾಮಲಿಂಗಾರೆಡ್ಡಿಯವರಷ್ಟೇ ಹಿರಿಯರು. ಕೆ.ಜೆ. ಜಾಜ್‌ರ್‍ 1989ರಲ್ಲಿ ವೀರೇಂದ್ರ ಪಾಟೀಲ್‌ ಅವರ ಸಂಪುಟದಲ್ಲೇ ಸಚಿವರಾಗಿದ್ದವರು. ಹೀಗಾಗಿ ರಾಮಲಿಂಗಾರೆಡ್ಡಿ, ಕೆ.ಜೆ. ಜಾಜ್‌ರ್‍ ಇಬ್ಬರೂ ಸಮಕಾಲೀನರೇ ಎಂದು ಸಮಜಾಯಿಷಿ ನೀಡಿದರು.