ತುಮಕೂರು(ಏ.05): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಮಾಜಿ ಶಾಸಕ ಕೆ.ಎನ್‌. ರಾಜಣ್ಣ ತಿಳಿಸಿದ್ದಾರೆ. 

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ನಾನು ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರನ್ನು ಕೇಳಿಕೊಂಡಿದ್ದೇನೆ. ಅವರು ಸಕಾರಾತ್ಮಕಾಗಿ ಸ್ಪಂದಿಸುವ ಸಾಧ್ಯತೆ ಇದೆ ಎಂದರು. ಈಗಲೇ ನಿರ್ಧಾರ ಪ್ರಕಟ ಮಾಡಿದರೆ ಬಾದಾಮಿ ಮತದಾರರು ಬೇಜಾರಾಗುತ್ತಾರೆ. ಹಾಗಾಗಿ ಅವರು ಯಾವ ನಿರ್ಧಾರವನ್ನೂ ಪ್ರಕಟ ಮಾಡುತ್ತಿಲ್ಲ ಎಂದರು. 

ವಿನಯ್‌ ಗುರೂಜಿ ದಿಢೀರ್ ಭೇಟಿ : ಆಶೀರ್ವಾದ ಪರಮೇಶ್ವರ್‌

ಸಿದ್ದರಾಮಯ್ಯ ಬಂದರೆ ಕೇವಲ ತುಮಕೂರು ಅಷ್ಟೇ ಅಲ್ಲ, ಪಕ್ಕದ ಜಿಲ್ಲೆ ಚಿತ್ರದುರ್ಗದಲ್ಲೂ ಕಾಂಗ್ರೆಸ್‌ ಬಲಗೊಳ್ಳಲಿದೆ. ಹಾಗಾಗಿ ಸಿದ್ದರಾಮಯ್ಯರಿಗೆ ಆಹ್ವಾನ ನೀಡಲಾಗಿದೆ ಎಂದರು. ಹಾಲಿ ಸಚಿವ ಮಾಧುಸ್ವಾಮಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.