ಭಾರತದಲ್ಲಿ ಸ್ಟ್ರಾಂಗೆಸ್ಟ್ ಸಿಎಂ ಸಿದ್ದು: ಸಾಹಿತಿ ಕುಂ.ವೀರಭದ್ರಪ್ಪ
ಕರ್ನಾಟಕಕ್ಕೆ ಸಿದ್ದರಾಮಯ್ಯ ಈ ಸಂದರ್ಭದ ಸೂಕ್ತ ಸಿಎಂ, ಕಾಂಗ್ರೆಸ್ ಉಳಿದಿದೆ ಎಂದರೇ ಸಿದ್ದರಾಮಯ್ಯನೇ ಕಾರಣ, ಭಾರತದಲ್ಲಿ ಯಾರಾದರೂ ಸ್ಟ್ರಾಂಗೆಸ್ಟ್ ಸಿಎಂ ಇದ್ದರೇ ಅದು ಸಿದ್ದರಾಮಯ್ಯ ಎಂದ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ
ಚಾಮರಾಜನಗರ(ನ.19): ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಆಪಾದನೆ ಮಾಡಿಕೊಂಡೇ ಬರುತ್ತಿದೆ. ಸಿದ್ದರಾಮಯ್ಯ ಇಳಿಸಿ ಅಂತ ಪ್ರತಿ ಭಟನೆ ಮಾಡುತ್ತಾರೆ, ಯಾವ ಕಾರಣಕ್ಕೆ ಸಿದ್ದರಾಮಯ್ಯನನ್ನು ಇಳಿಸುತ್ತೀರಿ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಪ್ರಶ್ನಿಸಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕರ್ನಾಟಕಕ್ಕೆ ಸಿದ್ದರಾಮಯ್ಯ ಈ ಸಂದರ್ಭದ ಸೂಕ್ತ ಸಿಎಂ, ಕಾಂಗ್ರೆಸ್ ಉಳಿದಿದೆ ಎಂದರೇ ಸಿದ್ದರಾಮಯ್ಯನೇ ಕಾರಣ, ಭಾರತದಲ್ಲಿ ಯಾರಾದರೂ ಸ್ಟ್ರಾಂಗೆಸ್ಟ್ ಸಿಎಂ ಇದ್ದರೇ ಅದು ಸಿದ್ದರಾಮಯ್ಯ ಎಂದು ಹೇಳಿದರು.
ಕರ್ನಾಟಕಕ್ಕೆ ಬಸವಣ್ಣನ ನಾಡು ಎಂದು ಹೆಸರಿಟ್ಟರೇ ತಪ್ಪಿಲ್ಲ: ಸಾಹಿತಿ ಕುಂ.ವೀರಭದ್ರಪ್ಪ
ಮುಡಾ ಪ್ರಕರಣದಲ್ಲಿ ಆಗಿರುವುದು ತಾಂತ್ರಿಕ ನ್ಯೂನ್ಯತೆ, ಎಲ್ಲಾ ರಾಜಕಾರಣಿಗಳು ಸೈಟ್ ಮಾಡಿದ್ದಾರೆ, ರಾಜಕಾರಣಿಗಳು ಸಂಬಂಧಿಕರ ಹೆಸರಲ್ಲಿ ಸೈಟ್ ಮಾಡಿದ್ದಾರೆ, 14 ಸೈಟ್ ವಿವಾದ ಆಗಿರುವುದು ತಾಂತ್ರಿಕ ಕಾರಣದಿಂದ, ಸೈಟ್ ಹಿಂತಿರುಗಿಸಿದ ಬಳಿಕ ಬಾಯಿ ಮುಚ್ಚಿಕೊಂಡು ಇರಬೇಕಲ್ವಾ, ಅನಾವಶ್ಯಕವಾಗಿ, ಕಾರಣ ಇಲ್ಲದೇ ಸಿದ್ದರಾಮಯ್ಯ ಪದಚ್ಯುತಗೊಳಿಸಲು ನಡೆಸಿರುವ ಸಂಚಿದು ಎಂದು ಆರೋಪಿಸಿದರು.
ಕಸಾಪ ಸಮ್ಮೇಳನದ ಅಧ್ಯಕ್ಷತೆ ಕುರಿತು ಮಾತನಾಡಿ, ಮತೀಯ ಶಕ್ತಿ ಬೆಂಬಲದಿಂದ ಅಧಿಕಾರ ಪಡೆದಿರುವ ಮಹೇಶ್ ಜೋಷಿ ಕಾಲಿಟ್ಟ ಕ್ಷಣದಿಂದ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕಸಾಪದಲ್ಲಿ ಈಗ ಡೆಮೊ ಕ್ರಾಸಿ ಇಲ್ಲಾ. ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷ ರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಸಾಹಿತ್ಯೇತರ ಶಕ್ತಿಗಳು, ಮತಿಯ ಶಕ್ತಿಗಳು ಮಂಡ್ಯ ಸಮ್ಮೇಳನಕ್ಕೆ ಪ್ರವೇಶ ಮಾಡುತ್ತಿದ್ದಾರೆ, ಸಾಹಿತ್ಯೇತರರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಅಪ್ರಬುದ್ದ ನಿಲುವು. ಯಾವ ಕಾರಣಕ್ಕೂ ಸಾಹಿತ್ಯೇತರು ಸಮ್ಮೇಳನದ ಅಧ್ಯಕ್ಷರಾಗಬಾರದು, ಸಾಹಿತಿಗಳಿಗೆ ಪ್ರಾಧ್ಯಾನತೆ ಕೊಡಬೇಕು, ಅದು ಕನ್ನಡ ಪರಿಷತ್ ಅಲ್ಲ- ಕನ್ನಡ ಸಾಹಿತ್ಯ ಪರಿಷತ್, ಸಾಹಿತ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಅಧ್ಯಕ್ಷರಾಗಬೇಕೆಂದು ಆಗ್ರಹಿಸಿದರು.