ಮೈಸೂರು(ಫೆ.02): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಳಿದ್ದ ರಾಹು, ಕೇತುಗಳೆಲ್ಲ ಸೇರಿ ನನ್ನನ್ನು ಸೋಲಿಸಿದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ಚಾಮುಂಡೇಶ್ವರಿ ಕ್ಷೇತ್ರವನ್ನು ನೆನಪಿಸಿಕೊಂಡಿದ್ದಾರೆ.

ಸುತ್ತೂರು ಗ್ರಾಮದ ಶ್ರೀ ಪಟ್ಟಲದಮ್ಮ ಹಾಗೂ ಚಲುವರಾಯ ಸ್ವಾಮಿ ನೂತನ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ದೇವಾಲಯದ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು.

ಎಚ್‌. ವಿಶ್ವನಾಥ್‌ಗೆ ನೈತಿಕತೆ ಇಲ್ಲ: ಆರ್‌. ಧ್ರುವನಾರಾಯಣ್‌

ನಾನು ಮುಖ್ಯಮಂತ್ರಿಯಾಗಿದ್ದಾಗ ತಳವಾರ, ಪರಿವಾರ ಎಂಬದನ್ನು ಎಸ್ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದವರು ನಾವು ಎಂದು ತಿಳಿಸಿದ ಅವರು ಎಸ್ಸಿ ಎಸ್ಟಿಗೆ ಸರ್ಕಾರದಿಂದ ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ಸುಮಾರು 10 ಕೋಟಿ ರು. ಗಳ ಸಾಲ ನೀಡಲು ನಾವು ಮುಖ್ಯಮಂತ್ರಿಯಾಗಿದ್ದಾಗ ಸಂಬಂಧಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿತ್ತು, ಇದರಲ್ಲಿ ಕೆಲವರು ಮಾತ್ರ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಸೌಲಭ್ಯಗಳನ್ನು ಪಡೆದುಕೊಂಡರೆ ಸಮುದಾಯದವರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

ಬಿಜೆಪಿಯವರಿಗೆ ಆರ್ಥಿಕತೆಯೂ ಗೊತ್ತಿಲ್ಲ, ತಜ್ಞರ ಸಲಹೆಯೂ ಬೇಕಾಗಿಲ್ಲ : ಸಿದ್ದು ಟಾಂಗ್

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಗಳಾಗಬಹುದು, ಅಂದರೆ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆಂದು ಕನಸು ಕಂಡಿದ್ದರಾ, ನಮ್ಮ ಪಕ್ಷದ 14 ಮಂದಿ, ಜೆಡಿಎಸ್‌ನ ಮೂವರು ರಾಜೀನಾಮೆ ನೀಡಿ ಬೆಂಬಲ ನೀಡಿದ್ದರಿಂದ ಈ ದಿನ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದೆ ನಾವೂ ಮುಖ್ಯಮಂತ್ರಿಯಾಗಬಹುದು ಎಂದು ಒಗಟಾಗಿ ನುಡಿದರಲ್ಲದೆ, ನನ್ನನ್ನು ಎರಡು ಬಾರಿ ವರುಣ ಕ್ಷೇತ್ರದಲ್ಲಿ ಗೆಲ್ಲಿಸಿ ಪ್ರತಿಪಕ್ಷದ ನಾಯಕರಾಗಿ ಮಾಡಿ, ನಂತರ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ, ಅದಕ್ಕೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಋುಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಸುತ್ತೂರು ಶ್ರೀಮಠದ ಕಾರ್ಯದರ್ಶಿ ಎಸ್ಪ ಮಂಜುನಾಥ್‌, ಉದಯಶಂಕರ್‌, ಶಿವಕುಮಾರಸ್ವಾಮಿ, ಎಸ್ಟಿನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ. ಬಸವರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಾಪಂ ಸದಸ್ಯ ಲಿಂಗರಾಜಮ್ಮ, ಗ್ರಾಪಂ ಅಧ್ಯಕ್ಷ ಪಿ. ಸೋಮಣ್ಣ, ಕೆಪಿಸಿಸಿ ಸದಸ್ಯ ಪರುಷೋತ್ತಮ್‌, ಎಪಿಎಂಸಿ ಸದಸ್ಯ ಸಿದ್ದರಾಜನಾಯಕ, ಗ್ರಾಪಂ ಸದಸ್ಯ ರವಿಕುಮಾರ್‌, ಮಾಜಿ ಅಧ್ಯಕ್ಷ ಜಗದೀಶ್‌, ದೇವರಾಜು, ಕಲಾವಿದ ಡಾ. ಹೊನ್ನನಾಯಕ ಇದ್ದರು.