ನಂಜನಗೂಡು (ಅ.09):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಸಾವಿರ ಕೋಟಿ ರು. ಅನುದಾನವನ್ನು ತಂದು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಆ ಮೂಲಕ ವರುಣ ಕ್ಷೇತ್ರ ಕರ್ನಾಟಕದಲ್ಲೇ ಅತಿ ಹೆಚ್ಚು ಅನುದಾನ ಪಡೆದ ಕೀರ್ತಿಗೆ ಪಾತ್ರವಾಗಿದೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಚಿಕ್ಕಯ್ಯನ ಛತ್ರದಲ್ಲಿ 18 ಲಕ್ಷ ರು. ವೆಚ್ಚದಲ್ಲಿ ನಾಡ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಸಲುವಾಗಿ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲೂ ಹೋರಾಟ ಮಾಡಿ ಅತಿ ಹೆಚ್ಚಿನ ಅನುದಾನ ತರುತ್ತಿದ್ದೇನೆ. ಈಗಾಗಲೇ ನಗರ್ಲೆ ಗ್ರಾಮದಲ್ಲೂ ಕೂಡ 18 ಲಕ್ಷ ರು. ವೆಚ್ಚದಲ್ಲಿ ರಾಜೀವ್‌ ಗಾಂಧಿ ಸೇವಾ ಕೇಂದ್ರದ ಕಟ್ಟಡವನ್ನು ನಿರ್ಮಿಸಿದೆ. ಚಿಕ್ಕಯ್ಯನಛತ್ರದಲ್ಲಿ ಅತಿ ಹೆಚ್ಚು ಜನಸಂದಣಿ ಕೇಂದ್ರವಾಗಿರುವ ಕಾರಣ ನಾಡಕಚೇರಿ ಕಟ್ಟಡವನ್ನು ದೊಡ್ಡದಾಗಿ ನಿರ್ಮಿಸಬೇಕೆಂದು ನಿರ್ಣಯಿಸಿದ್ದು, ಆರ್ಥಿಕ ಸಂಕಷ್ಟದ ಕಾರಣ ಈಗ 18 ಲಕ್ಷ ರು. ಅನುದಾನ ಬಿಡುಗಡೆಗೊಳಿಸಿದ್ದೇನೆ ಎಂದರು.

'ಕೊರೋ​ನಾ​ಗಿಂತಲೂ ಮೋದಿ, ಬಿಎ​ಸ್‌ವೈ ಡೇಂಜ​ರ್

ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಮಾತನಾಡಿದರು. ತಹಸೀಲ್ದಾರ್‌, ತಾಪಂ ಇಒ, ಪಿಡಿಒ ಸೇರಿದಂತೆ ಜಂಟಿಯಾಗಿ ಸ್ಥಳಪರಿಶೀಲನೆ ನಡೆಸಿ ಒತ್ತುವರಿಯಾಗಿರುವ ರಸ್ತೆಯನ್ನು ತೆರವುಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಚರಂಡಿಸಮಸ್ಯೆಯನ್ನು ಬಗೆಹರಿಸುವಂತೆ ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಎಪಿಎಂಸಿ ಅಧ್ಯಕ್ಷ ಮುದ್ದುಮಾದಶೆಟ್ಟಿ, ಕಾಂಗ್ರೆಸ್‌ ಹಿಂದುಳಿದ ವರ್ಗದ ಅಧ್ಯಕ್ಷ ಕೆ. ಮಾರುತಿ, ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷಿ ಮಹದೇವು, ಗ್ರಾಪಂ ಸದಸ್ಯರಾದ ಟಿ.ಎಲ್‌. ಮೋಹನ್‌ಕುಮಾರ್‌, ರಮೇಶ್‌, ರಾಜು ಇದ್ದರು