siddapura kamalakar bhat suchitra case: ಉತ್ತರ ಕನ್ನಡ ಜಿಲ್ಲೆಯ ಸುಚಿತ್ರಾ ನಾಯ್ಕ್‌ ಹಾಗೂ ಕಮಲಾಕರ್‌ ಭಟ್‌ ನಡುವಿನ ಅಕ್ರಮ ಸಂಬಂಧ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಇನ್ನು ಕೊ*ಲೆ ಕೂಡ ಆಗಿದೆ. ಅಷ್ಟೇ ಅಲ್ಲದೆ ಕಮಲಾಕರ್‌ ಭಟ್‌ ಪತ್ನಿ ಸಾವಿನ ನಂತರ ಇಷ್ಟೆಲ್ಲ ಆಗಿದೆ. 

ಜ್ಯೋತಿಷಿ ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಅಕ್ರಮ ಸಂಬಂಧದಿಂದ ಒಂದು ಕೊ*ಲೆಯಾಗಿದೆ. ಕಮಲಾಕರ್‌ ಭಟ್‌ ಅವರ ಜೊತೆ ಲೈ*ಗಿಕ ಸಂಬಂಧ ಬೆಳೆಸಿ, ಅದನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಳು ಎಂದು ಸುಚಿತ್ರಾರ ಪತಿ ಮಹೇಶ್‌ ನಾಯ್ಕ್‌ ಅವರೇ ಹೇಳಿದ್ದಾರೆ. ಈಗ ಕಮಲಾಕರ್‌ ಭಟ್‌ ಪತ್ನಿಯ ಬಗ್ಗೆ ಚರ್ಚೆ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಮಲಾಕರ್‌ ಭಟ್‌, ಸುಚಿತ್ರಾ ಭೇಟಿ ಹೇಗೆ ಆಯ್ತು?

ಕಮಲಾಕರ್ ಸಂಪರ್ಕಕ್ಕೆ ಬಂದ ಬಳಿಕ ಸುಚಿತ್ರಾ, ಒಂದು ವಾರ ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಳು. ಬಳಿಕ, ಆತನ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಮಾಡಿಟ್ಟುಕೊಂಡಿದ್ದು, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು. ಮಕ್ಕಳ ಜತೆ ನಾನು ನಿನ್ನ ಜತೆ ಬರ್ತೇನೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಮರ್ಯಾದೆ ತೆಗೆತೀನಿ ಎಂದು ಹೆದರಿಸುತ್ತಿದ್ದಳು. ಹೀಗಾಗಿ, ಕಮಲಾಕರ್ ಮರ್ಯಾದೆಗೆ ಅಂಜಿ ಆಕೆಯನ್ನು ತನ್ನ ಜತೆಗೆ ಇರಿಸಿಕೊಂಡಿದ್ದ ಎಂಬ ಸಂಗತಿ ತಿಳಿದು ಬಂದಿದೆ.

ಕಮಲಾಕರ್‌ಗೆ ಮೊದಲು ಬೇರೆ ಅಫೇರ್‌ ಇತ್ತು

ತನ್ನ ಪತ್ನಿಗೆ ಬೇರೆ, ಬೇರೆ ಅಫೇರ್ ಇದ್ದದ್ದನ್ನು ನೋಡಿ ಸುಚಿತ್ರಾಳ ಪತಿ ಮಹೇಶ್‌, ವರ್ಷದ ಹಿಂದೆ, ಈಕೆಯ ಕೊಲೆಗೆ ಯತ್ನಿಸಿದ್ದ. ಗಾಯಗೊಂಡಿದ್ದ ಆಕೆ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಘಟನೆ ನಡೆದ ಬಳಿಕವೇ ಕಮಲಾಕರ್ ಭಟ್ ಜತೆ ಈಕೆಯ ಅಫೇರ್ ಆರಂಭವಾಗಿತ್ತು. ಇದೇ ವೇಳೆ, ಕಮಲಾಕರ ಭಟ್‌, ಮೊದಲ ಪತ್ನಿಯ ಸಾವಿನ ಬಳಿಕ ಮುಸ್ಲಿಂ ಮಹಿಳೆಯ ಜತೆ ಅಫೇರ್ ಇಟ್ಕೊಂಡಿದ್ದ. ಇದು ಗೊತ್ತಾಗಿ ಸುಚಿತ್ರಾ ಗಲಾಟೆ ಮಾಡಿದ್ದಳು ಎಂಬ ಸಂಗತಿ ಕೂಡ ಬಯಲಾಗಿದೆ.

ಪತ್ನಿ ಯಾರು?

ಕಮಲಾಕರ್‌ ಭಟ್‌ ಪತ್ನಿಯ ಬಗ್ಗೆ ಅಷ್ಟಾಗಿ ಮಾಹಿತಿ ಸಿಕ್ಕಿಲ್ಲ. ಆದರೆ ಕೇರಳಕ್ಕೆ ಹೋಗಿ ಜ್ಯೋತಿಷ್ಯ ಕಲಿತಿದ್ದ ಕಮಲಾಕರ್‌ ಭಟ್‌ ಅವರು ಸಿಕ್ಕಾಪಟ್ಟೆ ಹೆಸರು ಮಾಡಿ, ಹಣ ಗಳಿಸಿದರು. ಕೊರೊನಾ ಟೈಮ್‌ನಲ್ಲಿ ಇವರ ಪತ್ನಿ ನಿಧನರಾದರು. ಅಷ್ಟೇ ಅಲ್ಲದೆ ಇವರಿಗೆ ಮಕ್ಕಳು ಇದ್ದಾರಾ? ಇಲ್ಲವಾ ಎಂಬ ಬಗ್ಗೆ ಕೂಡ ಮಾಹಿತಿ ಇಲ್ಲ. ಇವರು ಸಿದ್ದಾಪುರ ಊರು ಬಿಟ್ಟು, ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದಕ್ಕೆ ಅಷ್ಟಾಗಿ ಮಾಹಿತಿ ಸಂಗ್ರಹ ಆಗಿಲ್ಲ. ಪತ್ನಿ ಸಾವಿನ ಬಳಿಕ ಕಮಲಾಕರ್‌ ಭಟ್‌ ಬೇರೆ ಹೆಂಗಸಿನ ಸಂಬಂಧ ಬೆಳಸಿದ್ದ ಎನ್ನಲಾಗುತ್ತಿದೆ.

ಮತ್ತೊಬ್ಬ ಆರೋಪಿ ಬಂಧನ

ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿ ಶಿವಮೊಗ್ಗದ ವಿನಯ್ ಎಂಬಾತನನ್ನು ಸಿದ್ಧಾಪುರ ಪೊಲೀಸರು ಸೋಮವಾರ ಬಂಧಿಸಿದ್ದು, ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿದೆ. ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಮೂವರು ಆರೋಪಿಗಳನ್ನು ಘಟನೆಯ ದಿನ ಸುಚಿತ್ರಾಳೊಂದಿಗೆ ಸಿದ್ದಾಪುರಕ್ಕೆ ಕಳುಹಿಸಿಕೊಟ್ಟ ಆರೋಪ ಈತನ ಮೇಲಿದೆ.