Asianet Suvarna News Asianet Suvarna News

ಸಿದ್ಧಗಂಗಾ ಶ್ರೀಗಳು ಮಠಕ್ಕೆ ವಾಪಸ್‌

ಸಿದ್ಧಗಂಗಾ ಶ್ರೀಗಳು ಮಠಕ್ಕೆ ವಾಪಸ್‌| ನಿನ್ನೆ ನಸುಕಿನ ಜಾವ 3.50ಕ್ಕೆ ಡಿಸ್ಚಾರ್ಜ್| ಮಠದಲ್ಲೇ ಚಿಕಿತ್ಸೆ ಕೃತಕ ಉಸಿರಾಟ ವ್ಯವಸ್ಥೆ

siddaganga sri shivakumara swamiji shifted to mutt
Author
Tumkur, First Published Jan 17, 2019, 8:34 AM IST

ತುಮ​ಕೂರು[ಜ.17]: ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಗಂಗಾ ಮಠಾಧ್ಯಕ್ಷರಾದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಬುಧ​ವಾರ ಬೆಳ್ಳಂಬೆ​ಳಗ್ಗೆ 3.50ಕ್ಕೆ ಆಸ್ಪತ್ರೆಯಿಂದ ಡಿಸ್‌ಚಾಜ್‌ರ್‍ ಮಾಡಲಾಯಿತು. ಇದೀಗ ಶ್ರೀಗ​ಳಿಗೆ ಹಳೆ ಮಠ​ದಲ್ಲೇ ಸಿದ್ಧ​ಗಂಗಾ ಆಸ್ಪತ್ರೆ ವೈದ್ಯರು ಚಿಕಿತ್ಸೆ ಮುಂದು​ವ​ರೆ​ಸಿ​ದ್ದಾರೆ.

ಮಠ​ದಲ್ಲೇ ಚಿಕಿತ್ಸೆ ಪಡೆ​ಯುವ ಇಂಗಿ​ತ​ವನ್ನು ಈ ಮೊದಲೇ ಶ್ರೀಗಳು ವ್ಯಕ್ತ​ಪ​ಡಿ​ಸಿ​ದ್ದರು. ಹೀಗಾಗಿ ಸಿದ್ಧ​ಗಂಗಾ ಕಿರಿಯ ಶ್ರೀಗಳು, ಜಿಲ್ಲಾ​ಧಿ​ಕಾರಿ, ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾ​ರಿ​ಗಳು ಸಭೆ ಸೇರಿ ಶ್ರೀಗ​ಳನ್ನು ಮತ್ತೆ ಮಠಕ್ಕೆ ಕರೆದುಕೊಂಡು ಬರಲು ನಿರ್ಧ​ರಿ​ಸ​ಲಾ​ಯಿತು. ಅದ​ರಂತೆ ಶ್ರೀಗ​ಳನ್ನು ಬುಧ​ವಾರ ಬೆಳ​ಗಿನ ಜಾವ ಮಠಕ್ಕೆ ಕರೆ ತರ​ಲಾ​ಯಿತು.

ಶ್ರೀಗಳ ತಪಾ​ಸಣೆ ಮಾಡಿದ ಬಳಿಕ ಮಾತ​ನಾ​ಡಿದ ಸಿದ್ಧ​ಗಂಗಾ ಆಸ್ಪತ್ರೆ ವೈದ್ಯ ಡಾ. ಪರ​ಮೇ​ಶ್ವರ್‌ ಅವರು, ಶ್ರೀಗಳಿಗೆ ಕೃತ​ಕ​ವಾಗಿ ಉಸಿ​ರಾ​ಟದ ವ್ಯವಸ್ಥೆ ಮಾಡ​ಲಾ​ಗಿದೆ. ವೆಂಟಿ​ಲೇ​ಟರ್‌ ಇಲ್ಲದೆ ಒಂದು ಗಂಟೆ ಉಸಿ​ರಾ​ಡುವ ಶಕ್ತಿ ಬಂದಿದೆ ಎಂದರು. ಉಸಿ​ರಾ​ಟದ ತೊಂದರೆ ಕಾಣಿ​ಸಿ​ಕೊ​ಳ್ಳು​ತ್ತಿ​ದ್ದಂತೆ ವೆಂಟಿ​ಲೇ​ಟರ್‌ ಹಾಕ​ಲಾ​ಗು​ತ್ತಿದೆ ಎಂದರು.

ಶ್ರೀಗಳ ದೇಹದಲ್ಲಿದ್ದ ಸೋಂಕು ಕಡಿಮೆಯಾಗಿದೆ. ಆದರೆ ದೇಹದಲ್ಲಿ ಶಕ್ತಿ ಇಲ್ಲದ ಕಾರಣ ಜೀರ್ಣಕ್ರಿಯೆ ಸಮ​ರ್ಪ​ಕ​ವಾಗಿ ಆಗು​ತ್ತಿಲ್ಲ. ಶಕ್ತಿಗಾಗಿ ಪ್ರೋಟಿನ್‌, ವಿಟಮಿನ್ಸ್‌ , ಅಲ್ಬಮಿನ್‌ ಅಗತ್ಯವಿದೆ. ಇದೆಲ್ಲ ಕಡಿಮೆ ಇರುವು​ದ​ರಿಂದ ಉಸಿರಾಟದ ತೊಂದರೆಯಾಗುತ್ತಿದೆ ಎಂದರು.

ಸದ್ಯಕ್ಕೆ ದ್ರವಾಹಾರ ನೀಡಲಾಗು​ತ್ತಿಲ್ಲ. ಅವ​ರಿಗೆ ಔಷಧ ಮಾತ್ರ ನೀಡ​ಲಾ​ಗು​ತ್ತಿದೆ. ಬೆಳಗ್ಗೆ ಮತ್ತು ಸಂಜೆ ರಕ್ತ ಪರೀಕ್ಷೆ ಮಾಡ​ಲಾ​ಗು​ತ್ತಿದೆ. ಭಕ್ತರು ಪದೇ ಪದೇ ಮಠಕ್ಕೆ ಬರು​ವುದು ಬೇಡ ಎಂದು ಮನವಿ ಮಾಡಿ​ದರು.

ವಿದ್ಯಾ​ರ್ಥಿ​ಗ​ಳಿಂದ ಪ್ರಾರ್ಥನೆ:

ಮಠಕ್ಕೆ ಮರ​ಳಿದ ಸಿದ್ಧ​ಗಂಗಾ ಶ್ರೀಗಳ ಆರೋ​ಗ್ಯ​ದಲ್ಲಿ ಚೇತ​ರಿ​ಕೆ​ಯಾ​ಗಲಿ ಎಂದು ಮಠದ ವಿದ್ಯಾ​ರ್ಥಿ​ಗಳು ಬುಧ​ವಾ​ರ ಬೆಳಿ​ಗ್ಗೆ ಸಾಮೂ​ಹಿಕ ಪ್ರಾರ್ಥನೆ ಮಾಡಿ​ದ​ರು.

ಕಿರಿಯ ಶ್ರೀ ಭಾವುಕ

ಶ್ರೀಗಳ ಆರೋ​ಗ್ಯ​ದಲ್ಲಿ ಚೇತ​ರಿಕೆ ಕಾಣು​ತ್ತಿದೆ. ಅಲ್ಲದೇ ಅವ​ರಿಗೆ ವಿಶ್ರಾಂತಿ ಅಗ​ತ್ಯ​ವಿದೆ. ಮಠದ ಮಕ್ಕಳು ಶ್ರೀಗ​ಳನ್ನು ನೋಡ​ಬೇ​ಕೆಂದು ಬಯ​ಸಿ​ದ್ದಾರೆ. ಅವ​ರಿಗೂ ಸಹ ನೋಡಲು ಅವ​ಕಾಶ ಕಲ್ಪಿ​ಸು​ತ್ತಿಲ್ಲ ಎಂದು ಭಾವು​ಕ​ರಾ​ದರು. ಮಠದ ಸಿಬ್ಬಂದಿ​ಗೂ ಶ್ರೀಗಳನ್ನು ನೋಡಲು ಅವ​ಕಾಶ ಕಲ್ಪಿ​ಸಿಲ್ಲ ಎಂದರು. ಸಂಜೆ ನಂತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಬಿಎಸ್‌ವೈ ವಾಪಸ್‌: ಇಂದು ಮಠಕ್ಕೆ

Follow Us:
Download App:
  • android
  • ios