ಯಾದಗಿರಿಗೆ ತಲುಪಿದ ಶ್ರೀಶೈಲ ಜಗದ್ಗುರು ಪಾದಯಾತ್ರೆ, ಸಾವಿರಾರು ಭಕ್ತರು ಭಾಗಿ

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ನಿಮಿತ್ಯ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜನಜಾಗೃತಿಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

Shrisaila Jagadguru Padayatra reached Yadgir gow

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ(ನ.11): ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ನಿಮಿತ್ಯ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜನಜಾಗೃತಿಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶ್ರೀಕ್ಷೇತ್ರ ಯಡೂರದಿಂದ ಆರಂಭವಾದ ಪಾದಯಾತ್ರೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾಳನೂರು ಗ್ರಾಮಕ್ಕೆ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಸುರಪುರ ಶಾಸಕ ರಾಜೂಗೌಡ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮುಖಂಡ ಚಂದ್ರಶೇಖರ ಮಾಗನೂರು ಸೇರಿದಂತೆ ಜಿಲ್ಲೆಯ ಹಲವು ಮುಖಂಡರು ಹಾಗೂ ಭಕ್ತರು ವೈಭವಪೂರ್ವಕವಾಗಿ ಶ್ರೀಗಳನ್ನು ಬರಮಾಡಿಕೊಂಡರು.

ಶ್ರೀಶೈಲ ಜಗದ್ಗುರು ವಿಶೇಷ ಪಾದಯಾತ್ರೆ
ಧರ್ಮ ಜಾಗೃತಿ, ಪರಿಸರ ಜಾಗೃತಿ, ಜನ ಜಾಗೃತಿ ಹಾಗೂ ವಿವಿಧ ಉದ್ದೇಶ ಇಟ್ಟುಕೊಂಡು ಶ್ರೀಶೈಲ ಜಗದ್ಗುರು ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಪಾದಯಾತ್ರೆ ಆರಂಭಬಾಗಿದೆ. ಈ ಪಾದಯಾತ್ರೆಗೆ ಅಪಾರ ಪ್ರಮಾಣದ ಜನಸ್ಪಂದನೆ ವ್ಯಕ್ತವಾಗ್ತಿದೆ. ಯುವಕರು ದುಶ್ಚಟಗಳಿಂದ ಮುಕ್ತರಾಗಬೇಕು, ಪರಿಸರ ಜಾಗೃತಿ, ಕೃಷಿ ತಜ್ಞರಿಂದ ರೈತರಿಗೆ ಮಾಹಿತಿ ನೀಡಬೇಕು, ಆರೋಗ್ಯದ ಬಗ್ಗೆ  ವೈದ್ಯರಿಂದ ಶಿಬಿರ ಮಾಡಬೇಕು. ಇದು ಪಾದಯಾತ್ರೆಗಿಂತ ಇದೊಂದು ಧರ್ಮ ಜಾಗೃತಿ ಆಗಬೇಕು ಎಂಬ ವಿಶೇಷ ಪಾದಯಾತ್ರೆ ಆರಂಭ ಮಾಡಿದ್ದಾರೆ. ಅಕ್ಟೋಬರ್ 29 ರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನಿಂದ ಆರಂಭವಾಗಿ ಜನೇವರಿ 15 ಕ್ಕೆ ಶ್ರೀಶೈಲ ದವರೆಗೆ ಪಾದಯಾತ್ರೆ ಮಂಗಲವಾಗಲಿದೆ. ಈ ಪಾದಯಾತ್ರೆಯೇ ಬಹಳ ವಿಶೇಷವಾಗಿದೆ.

ಜಾಗತಿಕ ಪ್ರಪಂಚದಲ್ಲಿ ದೇಶದ ಆಸ್ತಿ ಯುವ ಜನಾಂಗ ಈಗಿನ ದಿನಗಳಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಹಾಗಾಗಿ ಯುವಕರ ಜಾಗೃತಿಗಾಗಿ ಪಾದಯಾತ್ರೆ ಆರಂಭವಾಗಿದೆ. ಜೊತೆಗೆ ವಾತಾವರಣ ಕಲುಷಿತಗೊಂಡಿದ್ದು, ಹಾಳಾಗುತ್ತಿರುವ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಮರ-ಗೀಡ ಬೆಳೆಸುವುದರಿಂದ ಆ ಗೀಡ ಮುದೊಂದು ದಿನ ಶ್ರೀಶೈಲ ಪಾದಯಾತ್ರೆ ಮಾಡುವವರಿಗೆ ನೆರಳಾಗಲಿದೆ ಎಂಬ ದಿವ್ಯ ಉದ್ದೇಶವನ್ನು ಹೊಂದಿದೆ. ಸ್ವತಃ ಶ್ರೀಶೈಲ ಜಗದ್ಗುರುಗಳು ಮಾಳನೂರು ಗ್ರಾಮದಲ್ಲಿ ಗೀಡ ನೆಡುವ ಮೂಲಕ ಮಾದರಿಯಾದರು.

ಪಾದಯಾತ್ರೆ ಧರ್ಮ ಜಾಗೃತಿಯ ಜಾತ್ರೆ: ಶ್ರೀಶೈಲ ಜಗದ್ಗುರು
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾಳನೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಶೈಲ ಜಗದ್ಗುರು ಚೆನ್ನಸಿದ್ಧರಾಮ ಅವರು ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯಿಂದ ಈಗ ಯಾದಗಿರಿ ಜಿಲ್ಲೆಗೆ ಪ್ರವೇಶಿದೆ. ಪಲ್ಲಕ್ಕಿಯಿಂದ ಬರುವ ಜಗದ್ಗುರು ಗಳಿ ಪಾದಯಾತ್ರೆಯ ಮೂಲಕ ಗ್ರಾಮಗಳಿಗೆ ಬರ್ತಿದ್ದಾರೆ ಎಂದು ಜನರು ಪ್ರೀತಿಯಿಂದ ಕಾಣ್ತಿದ್ದಾರೆ. ದಾರಯುದ್ಧಕ್ಕೂ ಸ್ವಯಂ ಪ್ರೇರಣೆಯಿಂದ ಭಕ್ತರು ಪ್ರಸಾದದ ವ್ಯವಸ್ಥೆ ಮಾಡ್ತಿದ್ದಾರೆ.  ದ್ವಾದಶ ಪೀಠಾರೋಹಣ ಮಹೋತ್ಸವ ಕಾರ್ಯಕ್ರಮ ಮೂರು ಹಂತದಲ್ಲಿ ನಡೆಯುತ್ತದೆ.

ಜ್ಯೋತಿರ್ಲಿಂಗ ಸರಣಿ: ಪರ್ವತದ ಕೋರಿಕೆ ಈಡೇರಿಸಲು ಉದ್ಭವವಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ..

ಮೊದಲನೇಯದಾಗಿ ಪಾದಯಾತ್ರೆ, ಎರಡನೇಯದಾಗಿ 41 ದಿನಗಳ ಧಾರ್ಮಿಕ ಅನುಷ್ಠಾನ, ಮೂರನೇಯದಾಗಿ ಧರ್ಮ ಜಾಗೃತಿ ನಡೆಯಲಿದೆ. ಲೋಕ ಕಲ್ಯಾಣಕ್ಕಾಗಿ ಈ ಪಾದಯಾತ್ರೆ ಆರಂಭವಾಗಿದೆ. ಈ ಪಾದಯಾತ್ರೆಯು ಧರ್ಮದ ಜಾಗೃತಿಯ ಜಾಗೃತಿಯಾಗಿದೆ. ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಪಿಎಂ ನರೇಂದ್ರ ಮೋದಿ, ಹಲವು ರಾಜ್ಯದ ಸಿಎಂ, ಸಚಿವರು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳಿಗೆ ಆಮಂತ್ರಣ ನೀಡಲಾಗಿದೆ ಎಂದರು. ಆಂದ್ರಪ್ರದೇಶ ಸರ್ಕಾರವೂ ಶ್ರೀಶೈಲ ಪೀಠಕ್ಕೆ 10 ಎಕರೆ ಜಾಗ ಮಂಜೂರು ಮಾಡಿದೆ. ಅದರಲ್ಲಿ 5 ಎಕರೆ ಜಾಗವನ್ನು ಈಗಾಗಲೇ ಹಸ್ತಾಂತರ ಮಾಡಿದೆ. 5 ಎಕರೆ ಜಾಗದಲ್ಲಿ ಕಂಬಿ ಮಂಟಪ, ಯಾತ್ರಿ ನಿವಾಸ, ಆಸ್ಪತ್ರೆ, ರೆಸಿಡೆನ್ಸಿಯಲ್ ಶಾಲೆಯ ನಿರ್ಮಾಣಕ್ಕೆ ಅಡಿಗಲ್ಲು ನಡೆಯಲಿದೆ ಎಂದರು.

Vijayapura: ಗುಮ್ಮಟನಗರಿಯಲ್ಲಿ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ!

ಇದೊಂದು ಐತಿಹಾಸಿಕ ಪಾದಯಾತ್ರೆ: ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ
ಶ್ರೀಶೈಲ ಜಗದ್ಗುರುಗಳ ಈ ಲೋಕ ಕಲ್ಯಾಣಕ್ಕಾಗಿ ನಡೆದ ಪಾದಯಾತ್ರೆ ಐತಿಹಾಸಿಕವಾದದ್ದು. ಒಬ್ಬ ಜಗದ್ಗುರು ಪಲ್ಲಕ್ಕಿ ಬಿಟ್ಟು ಕಾಲ್ನಡಿಗೆಯಲ್ಲೇ ಸಮಾಜದ ಸಾಮರಸ್ಯ, ಸ್ವಾಸ್ಥ್ಯ, ಸಂಸ್ಕಾರ, ಸಂಸ್ಕೃತಿ ಉಳಿವಿಗಾಗಿ ನಡೆದಿದೆ. ಎಲ್ಲಾ ಜಿಲ್ಲೆಗಳಲ್ಲಿ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅಧಿಕ ಜನರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಮಾಜದ ಪರಿವರ್ತನೆಗಾಗಿ ಈ ಪಾದಯಾತ್ರೆ ಆರಂಭವಾಗಿದೆ.ಲ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.

Latest Videos
Follow Us:
Download App:
  • android
  • ios