Vijayapura: ಗುಮ್ಮಟನಗರಿಯಲ್ಲಿ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ!

ಯುವಕರಲ್ಲಿನ ದುಶ್ಚಟಗಳನ್ನು ಹೊಡೆದೋಡಿಸಲು, ಹಾಗೂ ಶ್ರೀಗಳ ನದಿಗೆ ಅಭಿವೃದ್ಧಿಯ ಕಡೆಗೆ ಎನ್ನುವ ದೃಷ್ಟಿಕೋನದಿಂದ ಸುಕ್ಷೇತ್ರ ಯಡುರಿನಿಂದ ಪ್ರಾರಂಭವಾಗಿರುವ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ ಇಂದು ಪುರ ಪ್ರವೇಶ ಮಾಡಿದೆ.

Sri Shaila Jagadguru Padayatra in Vijayapura gvd

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ನ.06): ಯುವಕರಲ್ಲಿನ ದುಶ್ಚಟಗಳನ್ನು ಹೊಡೆದೋಡಿಸಲು, ಹಾಗೂ ಶ್ರೀಗಳ ನದಿಗೆ ಅಭಿವೃದ್ಧಿಯ ಕಡೆಗೆ ಎನ್ನುವ ದೃಷ್ಟಿಕೋನದಿಂದ ಸುಕ್ಷೇತ್ರ ಯಡುರಿನಿಂದ ಪ್ರಾರಂಭವಾಗಿರುವ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ ಇಂದು ಪುರ ಪ್ರವೇಶ ಮಾಡಿದೆ. ಬಬಲೇಶ್ವರ ತಾಲೂಕಿನ ಸಾರವಾಡ ಮೂಲಕ ನಗರಕ್ಕೆ ಆಗಮಿಸಿದ ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. 

ಮಾಜಿ ಶಿವಾನಂದ ಪಾಟೀಲ್ ತೋಟದಲ್ಲಿ ವಿಶೇಷ ಪೂಜೆ: ನಗರದ ಹೊರವಲಯದಲ್ಲಿರುವ ಶಾಸಕ ಶಿವಾನಂದ ಪಾಟೀಲ್ ಅವರ ತೋಟದ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಶೈಲ ಜಗದ್ಗುರು ಡಾ. ಪಂಡಿತ ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ಕಳೆದ ತಿಂಗಳ 29ರಿಂದ 33 ದಿನಗಳ ಕಾಲ ಈ ಪಾದಯಾತ್ರೆ ಆರಂಭಿಸಲಾಗಿದ್ದು, ನವೆಂಬರ್ 30ಕ್ಕೆ ಶ್ರೀಶೈಲ ತಲುಪಲಿದೆ ಎಂದು ಮಾಹಿತಿ ನೀಡಿದರು. 

Vijayapura: ಗುಮ್ಮಟನಗರಿಯ 52 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ!

ಕಾಡಿನ ಮೂಲಕ ಹಾಯ್ದು ಹೋಗಲಿರುವ ಪಾದಯಾತ್ರೆ: ಅನಂತರ ಆಂಧ್ರದ ಆತ್ಮಕುರದಲ್ಲಿ ಶ್ರೀಶೈಲದಲ್ಲಿ ಪುರ ಪ್ರವೇಶ ಮಾಡಲಿದೆ. ಕಾಡಿನ ಮೂಲಕವೇ ಹಾಯ್ದು ಭೀಮಾಂಬಿಕೆ ತಲುಪಲಿದೆ. ರಾಜ್ಯದ ಹಲವು ಕಡೆಗಳಿಂದ ಪ್ರತಿವರ್ಷ ಲಕ್ಷಾಂತರ ಜನರು ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಾರೆ. ಈ ಪಾದಯಾತ್ರೆಯಲ್ಲಿ ಒಂದು ರೀತಿಯ ಅಲೌಕಿಕವಾದ ಶಕ್ತಿ ಇದೆ.  ನಾವು ಕೂಡಾ ಯಾಕೆ ಪಾದಯಾತ್ರೆ ಮಾಡಬಾರದು ಎನ್ನುವ ದೃಷ್ಟಿಯಿಂದ ಈ ಪಾದಯಾತ್ರೆ ಪ್ರಾರಂಭಿಸಿದ್ದೇವೆ ಎಂದು ಹೇಳಿದರು. 

ಬಲಿಷ್ಠ ಭಾರತ ಪಾದಯಾತ್ರೆಯ ಉದ್ದೇಶ: ಈ  ಪಾದಯಾತ್ರೆಯ ಪ್ರಮುಖ ಅಂಶ ಅಂದರೆ, ಭಾರತ ಬಲಿಷ್ಠ ಆಗಬೇಕು ಎಂಬುದು. ಬಲಿಷ್ಠವಾಗಬೇಕಾದರೆ ಯುವಕರು ಶಕ್ತಿವಂತರಾಗಬೇಕು. ಇಂದಿನ ಯುವಕರು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗಿ ಶಕ್ತಿ ಹೀನರಾಗಿದ್ದಾರೆ. ಯುವಕರನ್ನು ವ್ಯಸನಮುಕ್ತರನ್ನಾಗಿ ಮಾಡುವ ಉದ್ದೇಶ ಈ ಪಾದಯಾತ್ರೆಯದ್ದು ಎಂದು ತಮ್ಮ ಯಾತ್ರೆಯ ಉದ್ದೇಶವನ್ನು ವಿವರಿಸಿದರು. 

ಪಾದಯಾತ್ರೆ ಉದ್ದೇಶಿಸಿ ನಡಹಳ್ಳಿ ಮಾತು: ಈ ವೇಳೆ ಮಾತನಾಡಿದ ಪಾದಯಾತ್ರೆ ಸಮಿತಿಯ ಕಾರ್ಯಾಧ್ಯಕ್ಷ ಶಾಸಕ ಎ. ಎಸ್.ಪಾಟೀಲ್ ನಡಹಳ್ಳಿ, ಇಂದು 9 ದಿನಕ್ಕೆ ಜಗದ್ಗುರುಗಳ ಪಾದಯಾತ್ರೆ ನಗರವನ್ನು ಪ್ರವೇಶಿಸಿದೆ, ಇದರ ಉದ್ದೇಶ ವೀರಶೈವ ಲಿಂಗಾಯತ ಸಮಾಜದ ಸಂಸ್ಕೃತಿಯನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಬೇಕು. ಮಾನವ ಕಲ್ಯಾಣವಾಗಬೇಕು ಎನ್ನುವ ದೃಷ್ಟಿಯಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.  ಮಠಗಳ ದಾಸೋಹ ಪರಂಪರೆ ಪುನಶ್ಚೇತನಗೊಳಿಸಬೇಕು, ಯುವಕರು ದುಶ್ಚಟಗಳಿಂದ ಹೊರಬರಬೇಕು ಎನ್ನುವ ದೃಷ್ಟಿಯಿಂದ ಈ ಪಾದಯಾತ್ರೆ ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ, ನಾಡಿನ ಜನತೆ ಈ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಪಾದಯಾತ್ರೆಯಲ್ಲಿ 20ಕ್ಕು ಅಧಿಕಾರಿ ಸರ್ಕಾರಿ ಅಧಿಕಾರಿಗಳು ಭಾಗಿ: ಈ ಪಾದಯಾತ್ರೆಯಲ್ಲಿ ರಾಜ್ಯದ 20ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಕೆ.ಎ. ಎಸ್. ಅಧಿಕಾರಿ ಸುರೇಶ್ ಪಾಟೀಲ್, ಶ್ರೀಗಳ ನಡೆ ಅಭಿವೃದ್ಧಿ ಕಡೆಗೆ ಎನ್ನುವ ದೃಷ್ಟಿಯಿಂದ ಈ ಪಾದಯಾತ್ರೆ ನಡೆಯುತ್ತಿದೆ. ಇದೊಂದು ಅಭೂತಪೂರ್ವವಾದ ಕಾರ್ಯಕ್ರಮವಾಗಿದ್ದು, ಇದರಲ್ಲಿ ನಾವೂ ಕೂಡಾ ಭಾಗವಹಿಸಬೇಕು ಎಂಬುದು ಶ್ರೀಗಳ ಇಚ್ಛೆಯಾಗಿತ್ತು. ಹೀಗಾಗಿ ನಾವೂ ಇದರಲ್ಲಿ ಭಾಗವಹಿಸಿದ್ದೇವೆ.  ನಮ್ಮ ಕೈಲಾದ ಸಹಾಯ ಹಾಗೂ ಸರಕಾರದಿಂದ ಏನು ಕಾರ್ಯ ಮಾಡಬಹುದು ಎಂಬುದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಭಾಗಿಯಾಗಿದ್ದೇವೆ ಎಂದು ಮಾಹಿತಿ ನೀಡಿದರು. ಸಮಾಜದಲ್ಲಿ ಕುಸಿಯುತ್ತಿರುವ ನೈತಿಕತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಈ ಪಾದಯಾತ್ರೆಗೆ ನಮ್ಮ ಬೆಂಬಲ ನೀಡಿದ್ದೇವೆ. ಶ್ರೀಶೈಲ ಜಗದ್ಗುರುಗಳು ಲೋಕಾಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಈ ಯಾತ್ರೆ ತುಂಬಾ ಯಶಸ್ವಿಯಾಗಿ ಸಾಗುತ್ತಿದೆ. ಅಖಿಲ ಭಾರತ ವೀರಶೈವ ಮಾಹಾಸಭಾ ಬೆಂಗಳೂರು ನಗರ ಅಧ್ಯಕ್ಷ ಗುರುಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಯಶಸ್ವಿಯಾಗಿ ಪಾದಯಾತ್ರೆ ನಡೆಯುತ್ತಿದೆ: ಎಲ್ಲ ಮನಕುಲದಿಂದ ಒಂದು ಮಾತು ಇತ್ತು, ಎಲ್ಲ ಪಂಚ ಪೀಠದವರು ಪಲ್ಲಕ್ಕಿ ಉತ್ಸವಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎನ್ನುತ್ತಿದ್ದರು. ಈಗ ಅದನ್ನು ಈ ಸ್ವಾಮೀಜಿಗಳು ಬದಲಾಯಿಸಿದ್ದಾರೆ ತುಂಬಾ ಯಶಸ್ವಿಯಾಗಿ ಈ ಪಾದಯಾತ್ರೆ ನಡೆಯುತ್ತಿದೆ. ಶ್ರೀಶೈಲದಲ್ಲಿ ಒಂದು ದಿನ ವೀರಶೈವ ಮಹಾಸಭಾದ ಒಂದು ದಿನದ ಅಧಿವೇಶನ ಕೂಡಾ ನಡೆಯುತ್ತದೆ ಎಂದು ಮಾಹಿತಿ ನೀಡಿದರು. 

ಇಂದು ಕ್ರಾಂತಿಯೋಗಿ ಮಹಾದೇವರ ಜನ್ಮದಿನೋತ್ಸವ: ಏಕೀಕರಣಕ್ಕಾಗಿ ಹೋರಾಡಿದ್ದ ಮಾಧವಾನಂದ ಶ್ರೀ!

ಸಾರವಾಡದಲ್ಲಿ ವಾಸ್ತವ್ಯ: ಜಾಗೃತಿ ಸಭೆ ಹಾಗೂ ಪ್ರವಚನ ನಡೆಯಲಿದೆ.  ಇಂದು ಸಾರವಾಡದಲ್ಲಿಯೇ ತಂಗಲಿರುವ ಪಾದಯಾತ್ರೆ ನಾಳೆ ವಿಜಯಪುರ ನಗರವನ್ನು ಪ್ರವೇಶಿಸಲಿದೆ. ನಗರದಿಂದ ಬೆಳಗ್ಗೆ 7 ಗಂಟೆಗೆ ಶುರುವಾಗುವ ಪಾದಯಾತ್ರೆ 12 ಗಂಟೆಯ ವೇಳೆಗೆ  ಹಿಟ್ನಳ್ಳಿಗೆ ಬರಲಿದ್ದು, ಅಲ್ಲಿ ಜಗದ್ಗುರುಗಳಿಗೆ ಭವ್ಯ ಸ್ವಾಗತ ನೀಡಲಾಗುತ್ತದೆ. ಅಲ್ಲಿ ಧರ್ಮ ಸಭೆ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ನಿನ್ನೆ ಇಲ್ಲಿಯೇ ವಾಸ್ತವ್ಯ ಹೂಡಿದ್ದ  ಪಾದಯಾತ್ರೆ, ಇಂದು ವಿಜಯಪುರ ನಗರದ ಮೂಲಕ  ಹಿಟ್ನಳ್ಳಿ ಮಾರ್ಗವಾಗಿ ಮನಗೂಳಿ ತಲುಪಲಿದೆ.

ಈ ಪಾದಯಾತ್ರೆಯ ಪ್ರಮುಖ ಅಂಶ ಅಂದರೆ, ಭಾರತ ಬಲಿಷ್ಠ ಆಗಬೇಕು ಎಂಬುದು. ಬಲಿಷ್ಠವಾಗಬೇಕಾದರೆ ಯುವಕರು ಶಕ್ತಿವಂತರಾಗಬೇಕು. ಇಂದಿನ ಯುವಕರು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗಿ ಶಕ್ತಿ ಹೀನರಾಗಿದ್ದಾರೆ. ಯುವಕರನ್ನು ವ್ಯಸನಮುಕ್ತರನ್ನಾಗಿ ಮಾಡುವ ಉದ್ದೇಶ ಈ ಪಾದಯಾತ್ರೆಯದ್ದು ಎಂದು ತಮ್ಮ ಯಾತ್ರೆಯ ಉದ್ದೇಶ.
-ಡಾ.ಪಂಡಿತ ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಜಗದ್ಗುರು

Latest Videos
Follow Us:
Download App:
  • android
  • ios