Political War : ನನ್ನ ಬಗ್ಗೆ ಪ್ರಶ್ನಿಸಲು ವಿಶ್ವನಾಥ್ ಯಾರು?
ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಅಶೋಕಪುರಂಗೆ ನೀಡಿರುವ ಕೊಡುಗೆ ಏನು? ಎಂದು ಪ್ರಶ್ನಿಸಲು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಯಾರು? ಎಂದು ಛಲವಾದಿ ಮಹಾಸಭಾ ನಗರಾಧ್ಯಕ್ಷ ಎನ್. ಶಿವು ಪ್ರಶ್ನಿಸಿದ್ದಾರೆ.
ಮೈಸೂರು (ಡಿ. 20 ):ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಅಶೋಕಪುರಂಗೆ ನೀಡಿರುವ ಕೊಡುಗೆ ಏನು? ಎಂದು ಪ್ರಶ್ನಿಸಲು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಯಾರು? ಎಂದು ಛಲವಾದಿ ಮಹಾಸಭಾ ನಗರಾಧ್ಯಕ್ಷ ಎನ್. ಶಿವು ಪ್ರಶ್ನಿಸಿದ್ದಾರೆ.
ನಿಮ್ಮಿಬ್ಬರ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ ಜನಾಂಗಗಳಿಗೆ ಕೊಡುಗೆ ಏನು? ಎಂಬುದ ಆ ಸಮೂದಾಯಕ್ಕೆ ತಿಳಿದಿರುತ್ತದೆ. ಇದನ್ನು ಪ್ರಶ್ನಿಸುವ ಜವಾಬ್ದಾರಿಯನ್ನು ನಿಮಗೆ ನೀಡಿದವರು ಯಾರು? ಅಶೋಕಪುರಂ ಅಭಿವೃದ್ಧಿಪಡಿಸಿ ಎಂದು ಯಾರಾದರೂ ನಿಮಗೆ ಮನವಿ ಮಾಡಿದ್ದರೆ?. ನೀವೇ ಉಸ್ತುವಾರಿ ಮಂತ್ರಿಯಾಗಿದ್ದಾಗ ಅಶೋಕಪುರಂಗೆ ನೀಡಿದ ಕೊಡುಗೆ ಏನು?. ನಿಮ್ಮ ಹುಟ್ಟೂರು ಅಡಗೂರಿಗೆ ಏನು ಕೊಡುಗೆ ನೀಡಿದ್ದೀರಿ? ಎಂದು ಕೇಳಿದ್ದಾರೆ.
ಬದನವಾಳು- ಉಮ್ಮತ್ತೂರು ಪ್ರಕರಣದಲ್ಲಿ ಶ್ರೀನಿವಾಸ ಪ್ರಸಾದ್ ಅವರ ಹೋರಾಟ ಏನೆಂಬುದು ಎಲ್ಲರಿಗೂ ಗೊತ್ತು. ಆದ್ದರಿಂದ ಸ್ವಾಭಿಮಾನಿ ಚಕ್ರವರ್ತಿ ಶ್ರೀನಿವಾಸಪ್ರಸಾದ್ ಅವರ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ಎಚ್ ವಿಶ್ವನಾಥ್‌ಗೆ 15 ಕೋಟಿ ಹಣ ನೀಡಿರುವ ಬಗ್ಗೆ ಇಡಿಗೆ ಆಪ್‌ನಿಂದ ದೂರು
ಬೆಂಗಳೂರು (ಡಿ.20): ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿ ಜೆ ಪಿ ಅಭ್ಯರ್ಥಿಯಾಗಿದ್ದ ಎಚ್. ವಿಶ್ವನಾಥ್ ಅವರಿಗೆ 15 ಕೋಟಿ ರು. ನೀಡಿರುವುದಾಗಿ ಬಿ ಜೆ ಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿ ಆಮ್ ಆದ್ಮಿ ಪಕ್ಷವು ಚುನಾವಣಾ ಆಯೋಗ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದೆ.
ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಚ್.ವಿಶ್ವನಾಥ್‌ರವರಿಗೆ 15 ಕೋಟಿ ರು. ಹಣ ನೀಡಲಾಗಿತ್ತು. ಅದರಲ್ಲಿ ವಿಶ್ವನಾಥ್ 4ರಿಂದ 5 ಕೋಟಿ ರು. ವ್ಯಯಿಸಿದ್ದಾರೆ ಎಂಬುದಾಗಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಬಹಿರಂಗಪಡಿಸಿದ್ದಾರೆ. ವಿ.ಶ್ರೀನಿವಾಸ್ ಪ್ರಸಾದ್ ಸಹ ಚುನಾವಣೆಗೆ ಹಣ ಪಡೆದಿರುವಾಗಿ ಎಚ್.ವಿಶ್ವನಾಥ್ ಹೇಳಿದ್ದಾರೆ. ಇದೊಂದು ಗಂಭೀರ ವಿಚಾರ ಮತ್ತು ಬಹುದೊಡ್ಡ ಚುನಾವಣಾ ಅಕ್ರಮವಾಗಿದೆ ಎಂದು ಆಕ್ಷೇಪಿಸಿದರು.
ಎಚ್ ವಿಶ್ವನಾಥ್ ಗೆ ತಲೆಕೆಟ್ಟಿರಬೇಕು, ಶಾಸಕ ಕೆ ಜಿ ಬೋಪಯ್ಯ ಆಕ್ರೋಶ
ಅಲ್ಲದೆ, ಚುನಾವಣಾ ನೀತಿ ಸಂಹಿತೆ ಪ್ರಕಾರ ಅಭ್ಯರ್ಥಿ ಕೇವಲ 28 ಲಕ್ಷ ರು. ಖರ್ಚು ಮಾಡಲು ಅವಕಾಶ ಇರುತ್ತದೆ. ಆದ್ದರಿಂದ ಈ 15 ಕೋಟಿ ರು. ಬಿಜೆಪಿ ಹೇಗೆ ಸಂಪಾದಿಸಿತು? ಅಭ್ಯರ್ಥಿ ಎಚ್.ವಿಶ್ವನಾಥ್‌ಗೆ ಏಕೆ ವರ್ಗಾಯಿಸಲಾಯಿತು? ವಿಶ್ವನಾಥ್ ನಾಲ್ಕೈದು ಕೋಟಿ ಹಣವನ್ನು ಹೇಗೆ ವ್ಯಯಿಸಿದರು? ಉಳಿದ 10 ಕೋಟಿ ರು. ಈಗ ಎಲ್ಲಿದೆ? ಈ ಪ್ರಶ್ನೆಗಳಿಗೆ ಸ್ಪಷ್ಟಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಆದ್ದರಿಂದ ಚುನಾವಣಾ ಆಯೋಗ ಹಾಗೂ ಜಾರಿ ನಿರ್ದೇಶನಾಲಯವು ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
Karnataka Politics : ಚುನಾವಣೆ ಹಣದ ಲೆಕ್ಕ ಕೇಳಲು ಶ್ರೀನಿವಾಸಪ್ರಸಾದ್ ಯಾರು?
ಎಎಪಿ ರಾಜಕೀಯ ಚಟುವಟಿಕೆ ವಿಭಾಗದ ಅಧ್ಯಕ್ಷ ಚನ್ನಪ್ಪಗೌಡ ನೆಲ್ಲೂರು, ಕೋಟಿಗಟ್ಟಲೆ ಹಣ ಖರ್ಚು ಮಾಡಿ ಚುನಾವಣೆ ಎದುರಿಸುವುದಲ್ಲದೆ, ಸ್ವಲ್ಪವೂ ನಾಚಿಕೆಯಿಲ್ಲದೇ ಅದನ್ನು ಹೇಳಿಕೊಳ್ಳುವ ಸ್ಥಿತಿಗೆ ರಾಜಕೀಯ ವ್ಯವಸ್ಥೆ ತಲುಪಿರುವುದು ನೋವಿನ ಸಂಗತಿ. ಎಚ್.ವಿಶ್ವನಾಥ್ ಹಾಗೂ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಶೀಘ್ರವೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.