Asianet Suvarna News Asianet Suvarna News

ಗದಗ: ಹಿರೇಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಶಿವೈಕ್ಯ

ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳು ಲಿಂಗೈಕ್ಯ| ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಶ್ರೀಗಳು| ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಶ್ರೀಗಳು| ಶ್ರೀಗಳ ಅಗಲಿಕೆಯಿಂದ  ಶೋಕಸಾಗರದಲ್ಲಿ ಮುಳುಗಿದ ಭಕ್ತವೃಂದ|  

Shri Somashekhar Shivacharya Swamiji Passes Away in Gadag grg
Author
Bengaluru, First Published Oct 10, 2020, 11:49 AM IST
  • Facebook
  • Twitter
  • Whatsapp

ಗದಗ(ಅ.10): ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಹಿರೇಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳು ಇಂದು(ಶನಿವಾರ) ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ. 

ಇಂದು ಬೆಳಗಿನ ಜಾವ ಗದಗ ನಗರದ  ಜಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಶ್ರೀ ಸೋಮಶೇಖರ ಶಿವಾಚಾರ್ಯ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ. 

ಕಾರ್ಮಿಕರ ಅಭಾವಕ್ಕೆ ಎದೆಗುಂದದ ಅನ್ನದಾತ: ರೈತನ ಹೊಸ ಐಡಿಯಾಗೆ ಮಾರು ಹೋದ ಜನ..!

ಶ್ರೀ ಸೋಮಶೇಖರ ಶಿವಾಚಾರ್ಯ ಶ್ರೀಗಳಿಗೆ 69 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.  ಇಂದು ಸಂಜೆ ಅಬ್ಬಿಗೇರಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶ್ರೀಗಳ ಅಗಲಿಕೆಯಿಂದ ಭಕ್ತವೃಂದ ಶೋಕಸಾಗರದಲ್ಲಿ ಮುಳುಗಿದೆ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳು ನಿಧನಕ್ಕೆ ಮಠದ ಭಕ್ತರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. 
 

Follow Us:
Download App:
  • android
  • ios